ಅಂತರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆ ಸತೀಶ್ ಮುರಾಳ್‌ಗೆ ಚಿನ್ನದ ಪದಕ

Many vehicles were set fire during violence on Tumkur Road in Bangalore on Thursday at the time of funeral of Dr Rajkumar. -KPN
Many vehicles were set fire during violence on Tumkur Road in Bangalore on Thursday at the time of funeral of Dr Rajkumar. -KPN

ಪಶ್ಚಿಮ ಬಂಗಾಳ ರಾಜ್ಯದ ಕಲ್ಕತ್ತಾದ ಚಾಂದೆಬರಿಯಾ ಸನ್ಸ್ ಶ್ಯಾಡೋ ಸೊಸೈಟಿÉÊn (SUN SHADOW SOCIETY INTERNATIONAL SALON-18 ) ಇತ್ತೀಚೆಗೆ ಏರ್ಪಡಿಸಿದ್ದ ಶ್ಯಾಡೋ ಮ್ಯಾಜಿಕ್ ೧ನೇ ಅಂತರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಕೊಪ್ಪಳದ ಹವ್ಯಾಸಿ ಛಾಯಾಗ್ರಾಹಕ ಸತೀಶ್ ಬಿ.ಮುರಾಳ್‌ಗೆ ಚಿನ್ನದ ಪದಕ ಲಭಿಸಿದೆ.
ಸ್ಪರ್ಧೆಯ ಫೋಟೋಜರ್ನಲಿಸಂ ವಿಭಾಗದಲ್ಲಿ ’ಬಸ್ ಬರ್ನಿಂಗ್ ಇನ್ ರಾಜ್-ವಯೋಲೆನ್ಸ್’ ಎಂಬ ಶೀರ್ಷಿಕೆಯ ಸತೀಶ್ ಮುರಾಳ್ ಅವರ ಛಾಯಾಚಿತ್ರಕ್ಕೆ ಚಿನ್ನದ ಪದಕದ (ಸಿಎಸ್‌ಎಸ್‌ಎಸ್ ಗೋಲ್ಡ್) ಸಂದಿದೆ ಹಾಗೂ ಫೋಟೋ ಟ್ರಾವೆಲ್ ವಿಭಾಗದಲ್ಲಿ ಎರಡು ಛಾಯಾಚಿತ್ರಗಳು ಸ್ಪರ್ಧೆಗೆ ಆಯ್ಕೆಗೊಂಡಿವೆ. ಸ್ಪರ್ಧೆಯಲ್ಲಿ ೩೩ ಕ್ಕೂ ಹೆಚ್ಚು ದೇಶಗಳ ೩೭೫ ಜನ ಭಾಗವಹಿಸಿದ್ದರು. ಅಂತರಾಷ್ಟ್ರೀಯ ಖ್ಯಾತ ಛಾಯಾಗ್ರಾಹಕರಾದ ಎಸ್.ಆರ್.ಮಂಡಲ್, ವಿನೋದ್ ಚವ್ಹಾಣ್ ಹಾಗೂ ಮನಷ್‌ದಾಸ್ ತೀರ್ಪುಗಾರರಾಗಿ ಭಾಗವಹಿಸಿದ್ದರು. ಮೇ.೨೬ ಮತ್ತು ೨೭ ರಂದು ಕಲ್ಕತ್ತಾದ ಸುಕಾಂತನಗರದಲ್ಲಿ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ.
ನೆನಪು : ಅಲ್ಲದೇ ಈ ಚಿತ್ರ ತೆಗೆದು ಇವತ್ತಿಗೆ ( ೧೩ ಎಪ್ರೀಲ್ ೨೦೦೬ ಕ್ಕೆ ) ೧೨ ವರ್ಷ ಪೊuಗೊಂಡಿತು (ಡಾ: ರಾಜಕುಮಾರ ಅಂತ್ಯಸಂಸ್ಕಾರದ ಸಮಯದಲ್ಲಿ ನಡೆದ ಅಹಿತಕರ ಘಟನೆಯಲ್ಲಿ ತೆಗೆದದ್ದು )

Please follow and like us:
error