ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆ ಭೂಮಿ ಕರಾಟೆ ಫೌಂಡೇಶನ್‍ಗೆ ಮೂರು ಚಿನ್ನದ ಪದಕ

ಕೊಪ್ಪಳ : ಜ.5 ಮತ್ತು 6 ರಂದು ಸಿಂಧನೂರಿನ ಸತ್ಯ ಗಾರ್ಡನ್‍ನಲ್ಲಿ ಸೂಪರ್ ಕರಾಟೆ ಅಕಾಡೆಮಿಯವರು ಆಯೋಜಿಸಿದ್ದ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಕೊಪಳ ನಗರದ ಭೂಮಿ ಫೌಂಡೇಶನ್ ಕರಾಟೆಯ ವಿದ್ಯಾರ್ಥಿಗಳು ಭಾಗವಹಿಸಿ ಮೂರು ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.
ಪಟುಗಳಾದ ರುಕ್ಮಿಣಿ ಬಂಗಾಳಿಗಿಡದ (ಕಥಾ) ಪ್ರಥಮ ಚಿನ್ನದ ಪದಕ ಮತ್ತು 52 ಕೆಜಿ (ಕುಮಿತೆ)ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾಳೆ. ಅದೇ ರೀತಿ (ಕಥಾ) ವಿಭಾಗದಲ್ಲಿ ರೇಣುಕಾ ಕಲ್ಲಣ್ಣನವರ, ತಿರುಮಲೇಶ ಕಲ್ಲಣ್ಣನವರ ಪ್ರಥಮ ಸ್ಥಾನ ಚಿನ್ನದ ಪದಕ ಹಾಗೂ ಟೀಂ ಕಥಾದಲ್ಲಿ ಮಂಜುನಾಥ ಕಲ್ಲಣ್ಣನವರ ಪ್ರಥಮ ಚಿನ್ನದ ಪದಕ ಪಡೆದಿದ್ದಾರೆ ಅವರ ಜೊತೆ ಸಂಸ್ಥೆಯ ಅಧ್ಯಕ್ಷ ಮೌನೇಶ ವಡ್ಡಟ್ಟಿ, ಕರಾಟೆಯ ಅಸೋಷಿಯೇಶನ್ ಆಫ್ ಇಂಡಿಯಾದ ಸದಸ್ಯರಾದ ಡೊಮಿನಿಕ ಸವೀಯೊ, ನಿರ್ಣಾಯಕರಾದ ಡಿ. ಬಾಷಾ ಸಾಹೇಬ್, ಪ್ರಕಾಶ್, ಸಲೀಂ, ವಿಠ್ಠಲ್ ಹೆಚ್, ರಿಯಾಜ್, ದೇವಪ್ಪ ಕಲ್ಲಣ್ಣನವರ, ಆಯೋಜಕರಾದ ಕಲ್ಯಾಣ್‍ಕುಮಾರ್ ಎಚ್. ಸೋಲಂಗಿ ವಿಜೇತರರಿಗೆ ಅಭಿನಂದಿಸಿದರು