ಅಂಜುಮನ್ ಕಮೀಟಿಯಿಂದ ಈದ್ ಮೀಲಾದ್ ಆಚರಣೆ

ಕೊಪ್ಪಳ : ಪ್ರವಾದಿ ಮಹ್ಮದ ಪೈಗಂಬರವರ ಜನ್ಮ ದಿನಾಚರಣೆಯ ಪ್ರಯುಕ್ತ ಅಂಜುಮನ್ ಖಿದ್ಮತೆ ಮುಸ್ಲಿಮಿನ್ ಕಮೀಟಿ ಕೊಪ್ಪಳ ವತಿಯಿಂದ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಾಲು ವಿತರಿಸುವ ಮೂಲಕ ಈದ್ ಮೀಲಾದ್ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಎಂ. ಪಾಷಾ ಕಾಟನ್, ಉಪಾಧ್ಯಕ್ಷ ಗಫಾರ್ ದಿಡ್ಡಿ, ಖಜಾಂಚಿ ಜಾಫರ ಸಾಬ್ ಸಂಗಟಿ, ಕಾರ್ಯದರ್ಶಿ ಅಜೀಜ್ ಮಾನ್ವಿಕರ, ಮುಖಂಡರಾದ ಬಾಷು ಸಾಬ್ ಖತೀಬ್, ಅಮ್ಜದ ಪಟೇಲ್, ಕೆ.ಎಂ. ಸೈಯದ್, ಇಬ್ರಾಹಿಂ ಅಡ್ಡೇವಾಲೆ, ಹುಸೇನ್ ಫಿರಾ ಚಿಕನ್, ಸಲೀಂ ಅಳವಂಡಿ, ಅಜೀಮ್ ಅತ್ತರ್, ಅಕ್ಬರ ಪಲ್ಟನ್, ಮಹ್ಮದಸಾಬ್ ಮಂಡಲಗೇರಿ, ಅಬೂಬಕರ, ಎಸ್.ಎಂ ಖಾದ್ರಿ, ಮೈನೂದ್ದೀನ್ ಅಡ್ಡೇವಾಲೆ, ಎಂ.ಡಿ ಪೈಯಾಜ್, ಸದ್ದಾಂ ಖಾಜಿ ಸೇರಿದಂತೆ ಸದಸ್ಯರು ಹಾಗೂ ಮುಖಂಡರುಗಳು ಉಪಸ್ಥಿತರಿದ್ದರು