ಅಂಜನಾದ್ರಿ ಪರ್ವತದಲ್ಲಿ ಶ್ರದ್ದಾ ಭಕ್ತಿಯ ಹನುಮಜಯಂತಿ ಆಚರಣೆ

ಆಂಜನೇಯಾ ಜನ್ಮಸ್ಥಳದಲ್ಲಿ 20 ಸಾವಿರ ಮಾಲಾಧಾರಿಗಳು ಭಾಗಿ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆಂಜನಾದ್ರಿ ಪರ್ವತದಲ್ಲಿ ಬೃಹತ್ ಕಾರ್ಯಕ್ರಮ.. 16 ಜಿಲ್ಲೆಗಳ ಮಾಲಾಧಾರಿಗಳು ಶೋಭಾಯಾತ್ರೆಗೆ ನಿಷೇಧ ನಡುವೆ ಸಹಸ್ರಾರು ಜನ ಆ ಜನ್ಮಸ್ಥಳದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆಂಜನಾದ್ರಿ ಪರ್ವತದಲ್ಲಿ.. ಇಂದು ಹನುಮಜಯಂತಿ ಹಿನ್ನಲೆಯಲ್ಲಿ ವ್ರತ ಮುಗಿಸಿದ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಪಾದಯಾತ್ರೆ ಮೂಲಕ ಆಗಮಿಸಿ ಹನುಮಾಮಾಲಾ ವಿಸರ್ಜನೆ ಮಾಡಿದ್ರು. ಇದಕ್ಕೂ ಮೊದಲು ದೇವಸ್ಥಾನದಲ್ಲಿ ಪವಮಾನ ಹೋಮ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಇದೇ ವೆಳೆ 575 ಮೆಟ್ಟಿಲುಗಳನ್ನು ಹತ್ತಿ ಬಂದ ಭಕ್ತರು ಹನುಮನ ದರ್ಶನ ಪಡೆದು ಪುನಿತರಾದ್ರು.. ಸುಮಾರು 6 ವರ್ಷಗಳಿಂದ ಹನುಮಮಾಲಾಧಾರಿಗಳು ವ್ರತವನ್ನು ಆಚರಸುತ್ತಾ ಬಂದಿದ್ದು, ರಾಜ್ಯದ ರಾಯಚೂರು, ಬಳ್ಳಾರಿ, ಗದಗ, ಬೆಳಗಾವಿ, ಧಾರವಾಡ, ಕಾರವಾರ, ಕಲಬುರ್ಗಿ, ಯಾದಗೀರಿ ಸೇರಿದಂತೆ 16 ಜಿಲ್ಲೆಗಳಿಂದ 20 ಸಾವಿರ ಮಾಲಾಧಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ದ್ರೋಣ ಕ್ಯಾಮಾರದಲ್ಲಿ ಸೆರೆಯಾದ ದೃಶ್ಯಗಳು

ವಿಶ್ವಹಿಂದೂ ಪರಿಷತ್ತ, ಭಜರಂಗದಳ ನೇತೃತ್ವದಲ್ಲಿ 6 ವರ್ಷಗಳಿಂದ ಇಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಇನ್ನು ಕಳೇದ ಭಾರಿ ಗಂಗಾವತಿಲ್ಲಿ ಹನುಮಮಾಲಾಧಾರಿಗಳ ಶೋಭಾಯಾತ್ರೆ ವೇಳೆ ಗಲಭೆಯಾಗಿತ್ತು. ಇದ್ರೀಂದ ಎಚ್ಚೇತ್ತುಕೊಂಡ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಶೋಭಾಯಾತ್ರೆ ಹಾಗೂ ಮೆರವಣಿಗೆಯನ್ನು ನಿಷೇಧ ಮಾಡಿತ್ತು.. ಇನ್ನು ಇಂದು ಹನುಮ ಜಯಂತಿ- ಈದ್ ಮಿಲಾದ್ ಒಂದೆ ದಿನ ಬಂದಿದ್ದರಿಂದ ಗಂಗಾವತಿ ಸೇರಿದಂತೆ ಆಂಜನಾದ್ರಿ ಪರ್ವತದಲ್ಲಿ 500ಕ್ಕೂ ಹೆಚ್ಚು ಪೊಲೀಸ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಇನ್ನು ಗಂಗಾವತಿ ಸುತ್ತಮುತ್ತ ಸುಮಾರು 20 ಕ್ಕೂ ಹೆಚ್ಚು ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದ್ದು, ಎಲ್ಲಾ ವಾಹನಗಳನ್ನು ತಪಾಸಣೆ ಮಾಡುವ ದೃಶ್ಯ ಸಾಮಾನ್ಯವಾಗಿತ್ತು. ಶೋಭಾಯಾತ್ರೆಯ ನಿಷೇಧದ ನಡುವೆ ಹನುಮನ ಜನ್ಮಸ್ಥಳದಲ್ಲಿ ಹನುಮಮಾಲಾಧಾರಿಗಳು ಮಾಲೆಯನ್ನು ಶ್ರದ್ದಾ-ಭಕ್ತಿಯಿಂದ ವಿಸರ್ಜನೆ ಮಾಡಿದ್ರು.. ಅಲ್ಲದೆ ಈ ಭಾರಿ ಶೋಭಾಯಾತ್ರೆಯನ್ನು ಪೊಲೀಸ್ ಇಲಾಖೆ ನಿಷೇದ ಮಾಡಿದ್ರು ಇಡೀ ಕಾರ್ಯಕ್ರಮ ಶಾಂತಿಯುತವಾಗಿ ನಡೆದಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.