ಅಂಗವಿಕಲರಿಗೆ ಸುವರ್ಣ ಉದ್ಯೋಗ ಅವಕಾಶ

ಕೊಪ್ಪಳ : ಸಮರ್ಥನಂ ಅಂಗವಿಕಲರಸಂಸ್ಥೆಯ ವತಿಯಿಂದ ವಿಕಲಚೇತನರ ಶ್ರೇಯೋಭಿವೃದ್ದಿಗಾಗಿ ಗದಗನ ಪಂಚಾಕ್ಷಾರಿ ನಗರ ೪ನೇ ಕ್ರಾಸ್ ದೂದಿಹಳ್ಳಿ ಬಿಲ್ಡಿಂಗ್‌ನಲ್ಲಿ ಎಸ್‌ಎಸ್ ಪಾಟೀಲ ಮನೆಯ ಹತ್ತಿರ ಎಸ್‌ಎಸ್‌ಎಲ್‌ಸಿ ಮುಗಿಸಿದ ೧೮ ರಿಂದ ೩೦ ವರ್ಷದ ಒಳಗಿನ ಅಂಗವಿಕಲರು ಹಾಗೂ ಸಾಮಾನ್ಯ ಜನರಿಗೆ ಊಟ ವಸತಿಯೊಂದಿಗೆ ಮೂರು ತಿಂಗಳ ಕಾಲ ಕಂಪ್ಯೂಟರ್ ಕೋರ್ಸ, ಸ್ಪೊಕನ್ ಇಂಗ್ಲೀಷ ತರಬೇತಿಯನ್ನು ಉಚಿತವಾಗಿ ನೀಡುವುದರ ಉದ್ಯೋಗ ಅವಕಾಶವನ್ನು ಸಹ ಒದಗಿಸಲಾಗುತ್ತದೆ. 
ಜೊತೆಗೆ ಎಸ್‌ಎಸ್‌ಎಲ್‌ಸಿ ಮುಗಿಸಿದ ಅಂಗವಿಕಲರು ಹಾಗೂ ಸಾಮಾನ್ಯ ಜನರಿಗೆ ಕಾಲೇಜಿಗೆ ಹೋಗುವ ಇಶ್ಛೆಯುಳ್ಳ ವಿದ್ಯಾರ್ಥಿಗಳಿಗೆ ಕಾಲೇಜು ಫೀ, ಊಟ ವಸತಿಯನ್ನು ಸಹ ಕಲ್ಪಿಸಲಾಗುತ್ತದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೋ : ೯೪೪೮೧೨೪೬೬೦, ೯೭೪೨೭೫೧೦೬೫ ಸಂಪರ್ಕಿಸಲು ಕೋರಲಾಗಿದೆ.

Please follow and like us:
error