ಅಂಗಡಿಗಳನ್ನು ತೆರೆಯಲು ಅನುಮತಿ ನೀಡಬಾರದೆಂದು Imdad Trust bahaddur bandi ಮನವಿ

ಕೊಪ್ಪಳ ನಗರದಾದ್ಯಂತ ಬಟ್ಟೆ ಅಂಗಡಿ, ಶೂಜ್(ಚಪ್ಪಲಿ) ಅಂಗಡಿ ಜುವೇಲರ್‍ಸ್ ಅಂಗಡಿ, ಬಳಿ  ಅಂಗಡಿ ಇನ್ನು ಮುತಾಂದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಬಾರದೆಂದು ವಿನಂತಿ
ರಮಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಅತೀ ಹೆಚ್ಚು ಬಟ್ಟಿ ಅಂಗಡಿ, ಶೂಜ್(ಚಪಲ್) ಅಂಗಡಿ ಜುವೇಲರ್‍ಸ್ ಅಂಗಡಿಗಳಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸುತ್ತಾರೆ, ಇದರಿಂದ ಪ್ರಸಕ್ತ ಕೋವಿಡ್-೧೯ ಪ್ರಯುಕ್ತ ಸರಕಾರವು ವಿಧಿಸಿರುವ ಸಾಮಾಜಿಕ ಅಂತರ ನಿಯಮವು ಪಾಲನೆ ಆಗುವುದಿಲ್ಲ, ರೋಗ ಹರಡುವ ಸಂಭವನೀಯತೆಯು ಅತೀ ಹೆಚ್ಚಾಗುತ್ತದೆ.

ಇದಲ್ಲದೇ, ಈಗಾಗಲೇ ಕೆಲವು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲ ತಾಣಗಳಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂದು ಇಲ್ಲಸಲ್ಲದ ಆರೋಪಗಳನ್ನ ಮಾಡುತ್ತಾ, ಕೊಮು ಸೌರ್ಹಾದ್ಯಕ್ಕೆ ಧಕ್ಕೆ ಯಾಗುವಂತೆ ಹಾಗೂ ಮುಸ್ಲಿಂ ಸಮುದಾಯದ ವಿರುದ್ದ ಅನ್ಯ ಕೊಮುಗಳಲ್ಲಿ ದ್ವೇಷ ಭಾವನೆ ಬೆಳೆಯುವಂತೆ ಕೆಲವು ಷಡ್ಯಂತ್ರಿಗಳು ಹುನ್ನಾರ ನಡೆಸುತ್ತಿದ್ದಾರೆ. ರಮ್ಜಾನ್ ಹಬ್ಬಕ್ಕೆ ಬಟ್ಟೆ ಖರೀದಿಸಲು ಬರುವ ಮುಸ್ಲಿಂ ಸಮುದಾಯದ ಜನರನ್ನು ಗುರಿ ಮಾಡಿಕೊಂಡು, ಇದನ್ನೇ ನೆಪ ಮಾಡಿಕೊಂಡು, ಮುಂದೇನಾದರೂ ಅನಾಹುತಗಳು ಆದಲ್ಲಿ ಮುಸ್ಲಿಂ ಸಮುದಾಯದ ತಲೆಗೆ ಆರೋಪ ಕಟ್ಟುವ ಷಡ್ಯಂತ್ರವು ವ್ಯವಸ್ಥಿತವಾಗಿ ಆಗುವುದರಲ್ಲಿ ಸಂದೇಹವೇ ಇಲ್ಲ.
ಇಷ್ಟು ದಿನಗಳವರೆಗೆ ಕೊಪ್ಪಳ ಜಿಲ್ಲೆಯಾದ್ಯಂತ ಅತೀ ಕಟ್ಟು ನಿಟ್ಟಿನ ಕ್ರಮ ಕೈಗೊಂಡ, ಯಾವುದೇ ಕೋವಿಡ್-೧೯ ಪ್ರಕರಣ ಆಗದಂತೆ ತಾವುಗಳು ಶ್ರಮಿಸಿದ್ದು ಅತ್ಯಂತ ಶ್ಲಾಘನೀಯ, ತಮ್ಮಂತಹ ದಕ್ಷ ಅಧಿಕಾರಿಗಳಿಂದ ಮಾತ್ರ ಇದು ಸಾಧ್ಯವಾಯಿತು. ತಮ್ಮಂತಹ ದಕ್ಷ ಹಾಗೂ ಕರ್ತವ್ಯ ನಿಷ್ಠ ಅಧಿಕಾಧಿಗಳನ್ನು ಹೊಂದಿರುವುದು ನಮಗೆ ಅತ್ಯಂತ ಹೇಮ್ಮಯ ವಿಷಯ.

ಕಾರಣ ತಾವುಗಳು ನಮ್ಮ ಈ ಮನಿವಿಯನ್ನು ಪರಿಗಣಿಸುತ್ತಾ, ಮನುಷ್ಯನಿಗೆ ಅಗತ್ಯ ಇರುವ ಆಹಾರ ಪದಾರ್ಥಗಳ ಅಂಗಡಿಗಳನ್ನು ಹೊರತು ಪಡಿಸಿ, ಉಳಿದ ಕೊಪ್ಪಳ ನಗರದಾದ್ಯಂತ ಯಾವುದೇ ತರಹದ ಬಟ್ಟೆ ಅಂಗಡಿ, ಶೂಜ್(ಚಪ್ಪಲಿ) ಅಂಗಡಿ ಜುವೇಲರ್‍ಸ್ ಅಂಗಡಿ,ಇನ್ನು ಮುತಾಂದ ಅಂಗಡಿಗಳನ್ನು ತೆರೆಯದಂತೆ ತಾವುಗಳು ಕಟ್ಟುನಿಟ್ಟಿನ ಆದೇಶ ಮಾಡಬೇಕೆಂದು ತಮ್ಮಲ್ಲಿ ಕಳಕಳಿಯಿಂದ ವಿನಂತಿಸಿಕೊಳ್ಳತ್ತೇವೆ.
ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷರಾದ ಖಲಂದರ ಪಾಶಾ ಮಾಲಿಪಾಟೀಲ್, ಕಾರ್ಯದರ್ಶಿಗಳಾದ ಮುಸ್ತಫಾ ಹುಡೇದ, ಖಜಾಂಜಿಯವರಾದ ದಾದಾಪೀರ ಮುದಗಲ್, ಸದಸ್ಯರಾದ ಮಹೆಬೂಬ ಮಣ್ಣೂರು, ಹಾಜಿ ಮಹಮ್ಮದ ಹಿರೇಮಸೂತಿ, ಲಾಲಸಾಬ ಹಿರೇಮಸೂತಿ ಇತರರು ಉಪಸ್ಥಿತರಿದ್ದರು.

Please follow and like us:
error