ಹೆಣ್ಣು ಮಕ್ಕಳಲ್ಲಿ ಆತ್ಮವಿಶ್ವಾಸ ಜಾಗೃತಿ ಅವಶ್ಯ- ಡಾ. ಶೃತಿ.


ಯಲಬುರ್ಗಾ : ಸಂಗನಹಾಲ ಸರ್ಕಾರಿ ಪ್ರೌಡ ಶಾಲೆಯಲ್ಲಿ ಮಹಿಳಾ ವಿಧ್ಯಾರ್ಥಿಗಳಿಗೆ ಯುನಿಸೆಫ್ ಮತ್ತು ಸ್ವಚ್ಚ ಭಾರತ ಮಿಷನ್(ಗ್ರಾ) ಗ್ರಾ.ಪಂ. ಸಹಯೋಗದಲ್ಲಿ ವಾಷ್ ಕಾರ್ಯಕ್ರಮದಡಿಯಲ್ಲಿ ಮಹಿಳೆಯರಿಗೆ ಋತು ಸ್ರಾವ ಜಾಗೃತಿ ಹಾಗೂ ತ್ಯಾಜ್ಯ ನಿರ್ವಹಣೆ ಕಾರ್ಯಕ್ರಮಕ್ಕೆ ಚಾಲನೆ ಮಾಡಿ ಪ್ರೌಢಾವಸ್ಥೆ ಎನ್ನುವುದು ಹೆಸರೇ ಹೇಳುವಂತೆ ಬಾಲ್ಯಾವಸ್ಥೆಯಿಂದ ಹದಿಹರೆಯದ ಪ್ರೌಢಿಮೆಗೆ ಕಾಲಿಡುವ ವಿಶಿಷ್ಟವಾದ ಹಂತ. ಇದು ಸಂತಾನೋತ್ಪತ್ತಿಯ ಹೆಬ್ಬಾಗಿಲು ಎನ್ನುವುದು ಹೆಚ್ಚು ಸಮಂಜಸ.ವಯಸ್ಸಿಗನುಗುಣವಾಗಿ ತುಲನೆ ಮಾಡಿದಾಗ ಹೆಣ್ಣು ಮಕ್ಕಳಲ್ಲಿ ೧೦ ರಿಂದ ೧೨ ನೇ ವಯಸ್ಸು ಮತ್ತು ಗಂಡು ಮಕ್ಕಳಲ್ಲಿ ೧೪ ರಿಂದ ೧೭ ನೇ ವಯಸ್ಸಿನಲ್ಲಿ ಈ ಅನುಭವ ಆಗುವುದು. ಬೌಧ್ದಿಕ ಹಾಗೂ ದೈಹಿಕವಾದ ಮಾರ್ಪಾಡುಗಳ ಸಂಕ್ರಮಣ ಕಾಲ. ಈ ಎಲ್ಲಾ ಬದಲಾವಣೆಗಳಿಗೆ ಮೂಲ ಕಾರಣವೇ ಹೆಣ್ಣು ಗಂಡಿನ ದೇಹದಲ್ಲಿ ಬದಲಾವಣೆ ಹಾರ್ಮೋನಗಳು. ಹೆಣ್ಣು ಮಕ್ಕಳಲ್ಲಿ ಪ್ರಥಮ ಋತುಸ್ರಾವದಿಂದ ಪ್ರಕಟಗೊಳ್ಳುತ್ತದೆ. ಮಹಿಳೆಯರ ನೈಜ ಸಬಲೀಕರಣ. ಋತುಸ್ರಾವದ ಬಗ್ಗೆ ವೈಜ್ಞಾನಿಕ ಅರಿವು ಮೂಡಿಸುವುದು. ಋತುಸ್ರಾವದ ಸಮಯದಲ್ಲಿ ಅನುಸರಿಸಬೇಕಾದ ಸುಚಿತ್ವದ ಕ್ರಮಗಳು ಹೆಣ್ಣುಮಕ್ಕಳಲ್ಲಿ ಆತ್ಮವಿಶ್ವಾಶ ಹಾಗೂ ಆತ್ಮ ಗೌರವಹೆಚ್ಚಿಸುವುದು. ಸಾಮಾಜಿಕ ಕಟ್ಟು ಪಾಡುಗಳ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯವೆಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾದಿಕಾರಿಗಳಾದ ಡಾ.ಶೃತಿ ಮಾತನಾಡಿದರು.
ಕೊಪ್ಪಳ ಜಿಲ್ಲೆಯ ೬ ರಿಂದ ೧೦ ನೇ ತರಗತಿಯ ಶಾಲಾ ಮಕ್ಕಳು ಈ ಅಭಿಯಾನದ ಗುರಿ.೨೦೧೧ ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿರುವ ಮಹಿಳೆಯರ ಜಿಲ್ಲೆಯಲ್ಲಿ ೧೧ ರಿಂದ ೪೯ ರ ಪ್ರಾಯದ ಒಟ್ಟು ಮಹಿಳೆಯರ ಪ್ರತಿ ತಿಂಗಳು ವಿದ್ಯಾರ್ಥಿಗಳು ಸೇರಿದಂತೆ ಪ್ಯಾಡ್/ನ್ಯಾಪ್‌ಕಿನ್ ಬಳಸುವವರ ಸಂಖ್ಯೆ ಪ್ರತಿ ತಿಂಗಳು ಜಿಲ್ಲೆಯಲ್ಲಿ ಉಪಯೋಗಿಸಲಾಗುವ ಸರಾಸರಿ ಪ್ಯಾಡ್ ಮತ್ತು ನ್ಯಾಪ್‌ಕಿನ್‌ಗಳ ಒಬ್ಬ ಮಹಿಳೆಗೆ ಸರಾಸರಿ ತಿಂಗಳಿಗೆ ೮ ಪ್ಯಾಡ್‌ಗಳು `ಮೊದಲ ಋತುಮತಿಯಾದಂದಿನಿಂದ ಪ್ರತೀ ತಿಂಗಳಿಗೆಒಮ್ಮೆಯಂತೆ ೨೮ ರಿಂದ ೩೦ ದಿನಗಳ ಅವಧಿಯಲ್ಲಿ ನಿಯಮಿತವಾಗಿ ಹೆಣ್ಣು ಋತುಸ್ರಾವವನ್ನು ಅನುಭವಿಸುತ್ತಾಳೆ. ತಿಂಗಳ ಋತುಸ್ರಾವ ಸುಮಾರು ೫ ರಿಂದ ೭ ದಿನಗಳವರೆಗೆ ಇರಬಹುದು. ದಿನದಲ್ಲಿ ೨ ರಿಂದ ೩ ಪ್ಯಾಡ್‌ಗಳ ಬದಲಾವಣೆಯ ಅವಶ್ಯಕತೆ ಇದು ಸಹಜ ಋತುಸ್ರಾವದ ಸಂಕೇತ.ಒಬ್ಬ ಸ್ತ್ರೀ ತಿಂಗಳ ಮುಟ್ಟಿನ ಸ್ರಾವದಿಂದಾಗಿ ಸರಿ ಸುಮಾರು ೮೦ರಿಂದ ೧೨೦ ಮಿ.ಲೀಟರ್‌ಗಳಷ್ಟು ಶುದ್ಧ ರಕ್ತವನ್ನು ಕಳೆದುಕೊಳ್ಳುತ್ತಾಳೆ.೧೦ ರಿಂದ ೧೨ ವರ್ಷದಲ್ಲಿ ಪ್ರಾರಂಭವಾಗುವ ಋತುಸ್ರಾವ ೪೫ರಿಂದ ೫೦ ವಯಸ್ಸಿನವರೆಗೆ ಮುಂದುವರೆಯುವುದು.ಹೆಣ್ಣು ಮಕ್ಕಳಲ್ಲಿ ಪ್ರಾರಂಭಿಕ ಹಂತದ ಋತುಸ್ರಾವದಲ್ಲಿ ಹೊಟ್ಟೆನೋವು ಕಾಣಿಸಿಕೊಳ್ಳಬಹು ಆಯಾಸ ಇವು ಸಹಜ ಕ್ರಿಯೆಗಳು ಮಾನಸಿಕ ಗೊಂದಲ, ಚಂಚಲತೆ, ಕಿರಿಕಿರಿ, ದ್ವಂದ ಹಾಗೂ ಮಾನಸಿಕ ಖಿನ್ನತೆ ಕಾಡಬಹುದು. ಈ ಸಂದರ್ಭದಲ್ಲಿ ದೇಹದ ಪ್ರತಿರೋಧ ಶಕ್ತಿ ಕಡಿಮೆಯಾಗಿ ಸೋಂಕು ತಗಲುವ ಸಂಭವವಿರುತ್ತದೆ ಅದಕ್ಕಾಗಿ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಗೋಡೆ ಬರಹಗಳನ್ನು ಶಿಕ್ಷಕರ ಸಹಕಾರದೊಂದಿಗೆ ಜಾಗೃತಿ ಮೂಡಿಸ ಬೇಕಾಗಿದೆಂದು ಸ್ವಚ್ಚ ಬಾರತ ಮಿಷನ್ (ಗ್ರಾ) ಸಮಾಲೋಚಕಿ ಶ್ರೀಮತಿ ಬಸಮ್ಮ ಹುಡೇದ ಅವರು ಮಾತನಾಡಿದರು
ಯುನಿಸೆಫ್ ಸಮಾಲೋಚಕ ಭೀಮಪ್ಪ ಹವಳಿ ಮಾತನಾಡಿ ಸಾರ್ವಜನಿಕ ಮನಸ್ಥಿತಿಯಲ್ಲಿ ಬದಲಾವಣೆ ತರುವುದು. ಋತುಸ್ರಾವ ನಿರ್ವಹಣೆ ಕುರಿತು ಮುಕ್ತವಾಗಿ ಹೆಚ್ಚಿನ ಜಾಗೃತಿ ಮೂಡಿಸಬೇಕೆಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಸಂಗನಹಾಲ ಗ್ರಾಮ ಪಂಚಾಯತಿ.ಅಭಿವೃದ್ದಿ.ಅಧಿಕಾರಿಗಳಾದ .ರಮೇಶ.ದೊಡ್ಡಮನಿ. ಶಾಲಾ ಮುಖ್ಯೋಪಾದ್ಯಾಯ ಸುರೇಶ ಮತ್ತು ಸಹ ಶಿಕ್ಷಕರು ಆರೋಗ್ಯ ಸಹಾಯಕಿಯರು ಆಶಾ ಕಾರ್ಯಕರ್ತೆಯರು ಹಾಜರಿದ್ದರು.

Please follow and like us:
error