ಸೀಳು ಮೊಟ್ಟೆಗಳ ಬಳಕೆ ಸಾಂಕ್ರಮಿಕ ರೋಗಕ್ಕೆ ಆಹ್ವಾನ

ಗಿಣಿಗೇರಾ ಕೋಳಿ ಫಾರಂಗಳಿಗೆ ಆಹಾರ ಸುರಕ್ಷತಾ ಅಧಿಕಾರಿ ದೀಡಿರ್ ಭೇಟಿ

ಕೊಪ್ಪಳ,  : ತಾಲೂಕಿನ ಗಿಣಿಗೇರಾ ಸಮೀಪದ ಕೋಳಿ ಫಾರಂಗಳಿಗೆ ಇತ್ತೀಚೆಗೆ (ಮಾ.19ರಂದು) ಆಹಾರ ಸುರಕ್ಷತೆ ಹಾಗೂ ಗುಣಮಟ್ಟದ ಇಲಾಖೆಯ ಅಂಕಿತ ಅಧಿಕಾರಿಗಳಾದ ಡಾ.ಅಲಕನಂದಾ ಡಿ. ಮಳಗಿ ಅವರು ಹಾಗೂ ಸಿಬ್ಬಂದಿ ವರ್ಗದವರು ಧೀಡಿರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಅವರು ಸೀಳಿದ ಮೊಟ್ಟೆಗಳ ಬಳಕೆ ಮಾಡುವುದರಿಂದ ಹಾಗೂ ಅದನ್ನು ಆಹಾರವಾಗಿ ಸೇವಿಸುವುದರಿಂದ ಸಾಂಕ್ರಮಿಕ ರೋಗಕ್ಕೆ ಆಹ್ವಾನ ಮಾಡಿದಂತಹ ಆಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ದಿನಾಂಕ ಮೀರಿದ ಮೊಟ್ಟೆಗಳನ್ನು ಸಾರ್ವಜನಿಕರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡದೇ ಮಾನವೀಯ ದೃಷ್ಟಿಯಿಂದ ಅವುಗಳನ್ನು ಹಸಿಕಸಕ್ಕೆ ಎಸೆಯಲು ಖಡಕ್ ಸೂಚನೆ ನೀಡಿದರು.
ದುಷ್ಪರಿಣಾಮಗಳು;
ಸೀಳಿದ(ಒಡೆದ) ಮೊಟ್ಟೆ ಬಳಕೆಯಿಂದ ಮನುಷ್ಯರ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳು ಇಂತಿವೆ.  ಬೀದಿಬದಿಯ ಸಣ್ಣ ಅಂಗಡಿಯ ಆಹಾರ ತಯಾರಕರು, ಮಾರಾಟಗಾರರು ಹಾಗೂ ಹೋಟೆಲ್‌ಗಳ ವ್ಯಾಪಾರಸ್ಥರು ಸೀಳಿದ ಮೊಟ್ಟೆಗಳನ್ನು ಕೋಳಿ ಫಾರಂಗಳಿAದ ಕಡಿಮೆ ಬೆಲೆಗೆ ಖರೀದಿಸಿ ಆಮ್ಲೆಟ್, ಎಗ್ಗ್ರೈಸ್ ಇತ್ಯಾದಿ ಖಾದ್ಯಗಳನ್ನು ತಯಾರಿಸಿ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ಈ ಖಾದ್ಯಗಳು ಸಹಜವಾಗಿ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ದೊರಕುತ್ತವೆ.  ಸೀಳಿದ ಮೊಟ್ಟೆಯಿಂದ ತಯಾರಿಸಿದ ಖಾದ್ಯಗಳನ್ನು ಗ್ರಾಹಕರು ಕಡಿಮೆ ಹಣದಲ್ಲಿ ಹೊಟ್ಟೆ ತುಂಬ ಊಟ ಸಿಕ್ಕಿದೆ ಎಂಬ ಖುಷಿಯಲ್ಲಿ ಬಾಯಿ ಚಪ್ಪರಿಸಿ ಸೇವಿಸುತ್ತಾರೆ ಹಾಗೂ ಹೋಟೆಲ್ ವ್ಯಾಪಾರಸ್ಥರನ್ನು ಹರಸುತ್ತಾರೆ. ಆದರೆ ಗ್ರಾಹಕರಿಗೆ ತಮ್ಮ ಆರೋಗ್ಯದ ಮೇಲೆ ಮುಂದೆ ಉಂಟಾಗುವ ದುಷ್ಪರಿಣಾಮದ ಬಗ್ಗೆ ಅರಿವು ಇರುವದಿಲ್ಲ.
ಸೀಳಿದ ಮೊಟ್ಟೆಗಳನ್ನು ಹಸಿಯಾಗಿ ಸೇವಿಸುವುದು, ಕುದಿಸಿ ಸೇವಿಸುವುದಿಂದ ಅಥವಾ ಆಮ್ಲೆಟ್, ಎಗ್ಗ್ರೈಸ್ ಇತ್ಯಾದಿ ಖಾದ್ಯಗಳನ್ನಾಗಿ ಮಾಡಿ ಸೇವಿಸುವುದರಿಂದ ಕಾಲರಾ, ಟೈಫಾಯಿಡ್, ಆಮಶಂಕೆ ಮುಂತಾದ ಸಾಂಕ್ರಾಮಿಕ ರೋಗಗಳು ಉಂಟಾಗುತ್ತವೆ.  ಬ್ಯಾಕ್ಟೇರಿಯಾಗಳು ಅತೀ ಸೂಕ್ಷö್ಮವಾಗಿದ್ದು ಬರಿಗಣ್ಣಿಗೆ ಕಾಣಿಸುವುದಿಲ್ಲ. ಇಂತಹ ಬ್ಯಾಕ್ಟೇರಿಯಾಗಳು ಅತೀ ಸಣ್ಣದಾಗಿರುವ ಸೀಳಿನ ಮೂಲಕ ಮೊಟ್ಟೆಯ ಒಳಭಾಗವನ್ನು ಸೇರುತ್ತವೆ. ಹೊರಗಿನ ಉಷ್ಣಾಂಶದಲ್ಲಿ ಬ್ಯಾಕ್ಟೇರಿಯಾಗಳು ಬೇಗನೆ ದ್ವಿಗುಣಗೊಳುತ್ತವೆ. ಇಂಥ ಮೊಟ್ಟೆಗಳನ್ನು ಅಥವಾ ಮೊಟ್ಟೆಯಿಂದ ತಯಾರಿಸಲ್ಪಟ್ಟ ಖಾದ್ಯ ಸೇವಿಸುವುದರಿಂದ ಸಾಲ್ಮೊನೆಲ್ಲಾ ಟೈಫಾಯಿಡ್ ರೋಗವು ತಗಲುತ್ತದೆ. ಜ್ವರ ಬರುವುದು, ವಾಂತಿ, ಭೇದಿ ಉಂಟಾಗುತ್ತದೆ.
ಸಾಮಾನ್ಯರು, ಬಡಜನರು, ಹಳ್ಳಿಗರು ಹಣಕಾಸಿನ ಸೀಮಿತ ಶಕ್ತಿಯಲ್ಲಿ ತಾತ್ಕಾಲಿಕ ಆರೋಗ್ಯ ಸೇವೆಯನ್ನು ಅಥವಾ ನಾಟಿ ವೈದ್ಯರಲ್ಲಿ ಔಷಧಿ ತೆಗೆದುಕೊಂಡು ತಾತ್ಕಾಲಿಕವಾಗಿ ವಿಶ್ರಾಂತಿಯನ್ನು ಪಡೆಯುತ್ತಾರೆ. ಆದರೆ ಮತ್ತೆ ತಿಂಗಳೊಪ್ಪತ್ತಿನಲ್ಲಿ ಮತ್ತೇ ಇಂತಹದ್ದೆ ಜ್ವರ, ವಾಂತಿ-ಭೇದಿ, ಗಂಟಲು ನೋವಿಗೆ ಒಳಗಾಗುತ್ತಾರೆ. ತಮ್ಮಲ್ಲಿದ್ದ ಹಣವನ್ನೆಲ್ಲಾ ಔಷಧಿಗಳಿಗೆ ಖರ್ಚು ಮಾಡುತ್ತಾರೆ. ಗ್ರಾಹಕರು ತಮ್ಮ ರೋಗ ನಿರೋಧಕ ಶಕ್ತಿಯನ್ನು ಕ್ರಮೇಣವಾಗಿ ಕಳೆದುಕೊಳ್ಳುತ್ತಾರೆ. ಇದೇ ಆವೃತಿ ಮುಂದುವರೆದರೆ ಇಂಟೆಷ್ನಲ್ ಅಬ್‌ಸ್ಟçಕ್ಷನ್ ಗಳಿಗೂ ಒಳಗಾಗುತ್ತಾರೆ ಹಾಗೂ ಜೀವನ ಪರ್ಯಂತ ಟೈಫಾಯಿಡ್ಕೇರ್ ಆಗಿರುತ್ತಾರೆ. ಅಷ್ಟೇ ಅಲ್ಲದೆ ಒಬ್ಬರಿಂದ ಮತ್ತೊಬ್ಬರಿಗೆ ರೋಗ ಹರಡಿ ಸಾಂಕ್ರಾಮಿಕ ರೋಗ ಕೂಡ ಈ ಸೀಳು ಮೊಟ್ಟೆಯ ಬಳಕೆಯಿಂದ ಹರಡುತ್ತದೆ ಎಂದು ಸೀಳು ಮೊಟ್ಟೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸವಿಸ್ತಾರವಾದ ವಿವರಣೆ ನೀಡುವ ಮೂಲಕ ಎಚ್ಚರಿಕೆ ನೀಡಿದರು.
ಕಾನೂನು ಅಪರಾಧ;
ಗ್ರಾಹಕರು ಯಾರೂ ಸೀಳು ಮೊಟ್ಟೆ ತೆಗೆದುಕೊಳ್ಳಬಾರದು. ಸೀಳುಮೊಟ್ಟೆ ಬಳಸಿ ತಯಾರಿಸಿ ಬೀದಿಬದಿಯ ಆಹಾರವನ್ನು ಸೇವಿಸಬಾರದು. ಮೊಟ್ಟೆ ವ್ಯಾಪರಸ್ಥರು ಸೀಳುಮೊಟ್ಟೆ ಮಾರಾಟ ಮಾಡುವುದು  Food Safety and Standards Authority of India (FSSAI)  ಆ್ಯಕ್ಟ್ ಪ್ರಕಾರ ಕಾನೂನು ಅಪರಾಧವಾಗಿದ್ದು,  ಈ ನಿಟ್ಟಿನಲ್ಲಿ ಕೋಳಿ ಫಾರಂಗಳ ಮಾಲೀಕರು ಕಾಯ್ದೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿ ವರ್ಗದವರು ಹಾಗೂ ಫಾರಂನಿನ ಮಾಲೀಕರು ಮತ್ತು ಕಾರ್ಮಿಕರು ಸಹ ಇದ್ದರು.

Please follow and like us:
error