ರಾಷ್ಟಿಯ ಏಕತಾ ದಿವಸ : ಜಾಗೃತಿ ನಡಿಗೆಗೆ ಚಾಲನೆ

ಕೊಪ್ಪಳ ಅ.  : ಸರ್ದಾರ ವಲ್ಲಭಬಾಯಿ ಪಟೇಲ್ ಅವರ ಜನ್ಮ ದಿನಾಚರಣೆ ಅಂಗವಾಗಿ ಕೊಪ್ಪಳ ಜಿಲ್ಲಾ ಪೊಲೀಸ್ ವತಿಯಿಂದ ಇಂದು (ಅ.31) ಹಮ್ಮಿಕೊಳ್ಳಲಾದ ರಾಷ್ಟಿçಯ ಏಕತಾ ನಡಿಗೆ ಜಾಥಕ್ಕೆ ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.
ಸಾರ್ವಜನಿಕರಲ್ಲಿ ಏಕತೆಯ ಮಹತ್ವ ಮೂಡಿಸುವ ಉದ್ದೆÃಶದಿಂದ “ರಾಷ್ಟಿçÃಯ ಏಕತಾ ದಿವಸ” (ನ್ಯಾಷನಲ್ ಯುನಿಟೀ ಡೇ) ಕಾರ್ಯಕ್ರಮವನ್ನು ನಗರದ ಶ್ರಿà ಗವಿಸಿದ್ದೆÃಶ್ವರ ಮಠದ ಆವರಣದಲ್ಲಿ ಗುರುವಾರದಂದು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಗವಿಸಿದ್ದೆÃಶ್ವರ ಸ್ವಾಮೀಜಿರವರು ವಹಿಸಿದ್ದರು.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ಉಪ ವಿಭಾಗಾಧಿಕಾರಿ ಸಿ.ಡಿ. ಗೀತಾ, ಡಿ.ವೈ.ಎಸ್.ಪಿ ವೆಂಕಟಪ್ಪ ನಾಯಕ, ಜಿಲ್ಲಾ ಪಂಚಾಯತ್ ಸದಸ್ಯ ಗವಿಸಿದ್ದಪ್ಪ ಕರಡಿ, ನಗರಸಭೆ ಸದಸ್ಯ ಅಮಜದ ಪಟೇಲ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಹಲವು ಗಣ್ಯರು ಈ ಸದರ್ಭ ಉಪಸ್ಥಿತರಿದ್ದರು.
ಏಕತಾ ನಡಿಗೆ:
ಸಾರ್ವಜನಿಕರಲ್ಲಿ ಏಕತೆಯ ಮಹತ್ವ ಮೂಡಿಸುವ “ರಾಷ್ಟಿçÃಯ ಏಕತೆಗಾಗಿ ನಡಿಗೆ” (ರನ್ ಪಾರ್ ಯುನಿಟೀ) ಕಾರ್ಯಕ್ರಮವು ಗವಿಮಠದಿಂದ ಪ್ರಾರಂಭಗೊಂಡು, ಬಸವೇಶ್ವರ ವೃತ್ತ (ಗಂಜ್ ಸರ್ಕಲ್), ಗದಗ ರಸ್ತೆ ಮೂಲಕ ಅಶೋಕ ವೃತ್ತದಿಂದ ಹಸನ ರಸ್ತೆಯ ಮೂಲಕ ಗಡಿಯಾರ ಕಂಬದ ಮಾರ್ಗವಾಗಿ ಗವಿಮಠದವರೆಗೆ ಸಾಗಿತು.  ಏಕತಾ ನಡಿಗೆಯಲ್ಲಿ ಕೊಪ್ಪಳ ಕ್ರಿÃಡಾ ವಸತಿ ಶಾಲೆಯ ವಿದ್ಯಾರ್ಥಿಗಳು, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಜನಪ್ರತಿನಿಧಿಗಳು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡು, ಜಾಥಾದ ಮೂಲಕ ಏಕತೆಯ ಬಗ್ಗೆ ಜಾಗೃತಿ ಮೂಡಿಸಿದರು.
ಪ್ರತಿಜ್ಞಾವಿಧಿ ಸ್ವಿÃಕಾರ;
ರಾಷ್ಟಿçÃಯ ಏಕತಾ ದಿವಸ ಅಂಗವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ಅವರು ಏಕತೆಯ ಕುರಿತಾಗಿ,  ಜಿಲ್ಲಾ ಸಾಂಖ್ಯಿಕ ಅಧಿಕಾರಿ ಕೃಷ್ಣಮೂರ್ತಿ ದೇಸಾಯಿ ರಾಷ್ಟಿçÃಯ ಸಂಕಲ್ಪ ದಿವಸ ಕುರಿತಾಗಿ ಹಾಗೂ ಎಸಿಬಿ ಡಿವೈಎಸ್‌ಪಿ ರುದ್ರೆÃಶ ಎಸ್. ಉಜ್ಜನಕೊಪ್ಪ ಅವರು ಭ್ರಷ್ಟಾಚಾರ ನಿರ್ಮೂಲನೆ ಕುರಿತಾಗಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

Please follow and like us:
error