ಯೋಗ, ಪ್ರಾಣಾಯಾಮದಿಂದಆರೋಗ್ಯ ಸದೃಢ -ಡಾ.ಕೆ.ಬಿ.ಹಿರೇಮಠ

ಕೊಪ್ಪಳ: ಭಾರತೀಯ ಸಂಸ್ಕೃತಿ ಉತ್ತಮವಾಗಿದ್ದು,  ಪುರಾತನವಾದದ್ದು ಆಗಿದೆ. ಪ್ರಾಣಾಯಾಮ ಮತ್ತುಯೋಗದಿಂದಆರೋಗ್ಯವನ್ನು ಸದೃಢವಾಗಿರಿಸಿ ಕೊಳ್ಳಬಹುದು ಎಂದು ಡಾ.ಕೆ.ಬಿ.ಹಿರೇಮಠ ಹೇಳಿದರು.ನಗರದ ಗವಿಸಿದ್ದೇಶ್ವರ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ವಿಜ್ಞಾನ ವಿಭಾಗದ ವತಿಯಿಂದ ನಡೆದರಾಷ್ಟ್ರೀಯ ವಿಜ್ಞಾನ ದಿನಾಚರಣೆಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮಾನಸಿಕ ಒತ್ತಡವನ್ನು ನಿವಾರಣೆ ಮಾಡಿಕೊಳ್ಳುವುದು ಹೇಗೆ ಎಂಬ ಆತಂಕಎಲ್ಲರಲ್ಲೂಇರುತ್ತದೆ.ಪಾಲಕರು ಬೇಡುವ ಅಂಕಗಳಿಂದಾಗಿ ವಿದ್ಯಾರ್ಥಿಗಳಲ್ಲಿ ಒತ್ತಡ ಹೆಚ್ಚಾಗಿದೆ. ಹಾಗಾಗಿ ಯೋಗ್ಯ, ನಡಿಗೆ ಮತ್ತು ವ್ಯಾಯಾಮಗಳಂತಹ ಹವ್ಯಾಸಗಳನ್ನು ಬೆಳೆಸಿಕೊಳ್ಳಬಹುದು. ಐಎಎಸ್, ಐಪಿಎಸ್ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಒತ್ತಡವಿದ್ದರೂಅವರುಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಏಕೆಂದರೆಚಿಕ್ಕಂದಿನಿಂದಲೇಅವರು ಮನಸ್ಸನ್ನು ಸದೃಢವಾಗಿರಿಕೊಂಡಿರುತ್ತಾರೆ.ಇಂತಹದೊಡ್ಡವ್ಯಕ್ತಿತ್ವ ವಿಸಕನ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು.ದೊಡ್ಡದೊಡ್ಡ ಸಾಧಕರುಯಾರೂ ವ್ಯಕ್ತಿತ್ವ ವಿಸಕನ ತರಬೇತಿ ಪಡೆದಿಲ್ಲ. ಹಾಗಾಗಿ ನೀವೆಲ್ಲರೂದೊಡ್ಡದೊಡ್ಡ ಮಹನೀಯರ ಚರಿತ್ರೆಗಳನ್ನು ಅಧ್ಯಯನ ಮಾಡಬೇಕು. ಅತಿಯಾದ ಮೊಬೈಲ್ ಬಳಕೆ ಹಾಗೂ ಟಿವಿ ನೋಡುವುದರಿಂದ ಅನೇಕ ರೋಗಗಳು ಬರುತ್ತವೆ. ದೃಷ್ಠಿ ಬಹಳ ಮುಖ್ಯವಾಗಿದ್ದು, ಅದನ್ನು ಕಾಪಾಡಿಕೊಳ್ಳುವುದು ನಿಮ್ಮೆಲ್ಲರಜವಾಬ್ದಾರಿಯಾಗಿದೆ.ನಿದ್ದೆಯಿಂದಲೂ ಮನಸ್ಸಿಗೆ ಶಾಂತಿ ಸಿಗುತ್ತದೆ.ಆತ್ಮಸ್ತೈರ್ಯ ಮತ್ತು ಶಕ್ತಿಯನ್ನು ಅಳವಡಿಸಿಕೊಳ್ಳಬೇಕು.ಜ್ಞಾನಕ್ಕಿಂತಅನುಭವದೊಡ್ಡದು. ಅಧ್ಯಯನ, ಅಧ್ಯಾಪನ ವಿದ್ವತನ್ನು ಅಳವಡಿಸಿಕೊಳ್ಳಬೇಕು.ಶಿಕ್ಷಕರನ್ನು ಹೊರತು ಪಡಿಸಿ, ನಮ್ಮ ಸುತ್ತಮುತ್ತಲಿನ ಪ್ರಕೃತಿ ಹಾಗೂ ಪ್ರಾಣಿಗಳಿಂದಲೂ ಪಾಠಕಲಿಯಬಹುದು.ಆರೋಗ್ಯವನ್ನುಯಾವರೀತಿಯಾಗಿ ಕಾಪಾಡಿಕೊಳ್ಳಬೇಕು.ಮಾನಸಿಕ ಹಾಗೂ ದೈಹಿಕವಾಗಿ ಸದೃಢ ವಾಗಿರಬೇಕು.ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕಾಗಿದೆ.ಇದಕ್ಕಾಗಿ ಉಪವಾಸ, ಹೆಚ್ಚು ನೀರು ಸೇವಿಸುವುದು ಉತ್ತಮವಾಗಿದೆ.ಅಲ್ಲದೇಎಣ್ಣೆ ತಿನಿಸುಗಳನ್ನು ಸೇವನೆ ಕಡಿಮೆ ಮಾಡಬೇಕು.ದೂಮಪಾನ ಮತ್ತು ಮದ್ಯಪಾನದಂತಹ ದುಶ್ಚಟಗಳಿಗೆ ದಾಸರಾಗದಿದ್ದರೆಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದುಎಂದರು.ಪುರಾತನಕಾಲದಲ್ಲಿ ಭಾರತ ಸಂಸ್ಕೃತಿಅದ್ಭುತವಾದದು.ಮೊದಲು ಭಾರತದಲ್ಲಿ ೧೪೦ ವ?ಆಯಸ್ಸುಇತ್ತು.ಆದರೆಇಂದು ೩೦-೪೦ ವ?ಕ್ಕೆ ಸಾವನ್ನಪ್ಪುತ್ತಿದ್ದಾರೆ.ಭಾರತೀಯ ಪದ್ಧತಿ ಪ್ರಕಾರ ಹೋದರು ವ್ಯಾದಿಗಳು ಬರುವುದಿಲ್ಲ. ಭಾರತೀಯರಜೀವನ ಶೈಲಿ ಉತ್ತಮವಾಗಿತ್ತು.ಆದರೆ ಇಂದಿನ ಜನರಜೀವನ ಶೈಲಿ ಸರಿಯಾಗಿಲ್ಲ. ಹಾಗಾಗಿ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದೇವೆ. ಮೊದಲು ನಮ್ಮಆಹಾರ ಪದ್ಧತಿಉತ್ತಮವಾಗಿತ್ತು.ಆದರೆ ಪ್ರಸ್ತುತಆಹಾರ ಪದ್ಧತಿ ಸರಿಯಾಗಿಲ್ಲ. ಹಾಗಾಗಿ ಸಮತೋಲನ ಆಹಾರವನ್ನು ಸೇವಿಸಬೇಕು.ನಾಲಿಗೆಗೆ ಸಿಹಿಯಾದದ್ದು, ದೇಹಕ್ಕೆ ಕಹಿ.ಯೋಗ, ಪ್ರಾಣಾಯಾಮ ಅಳವಡಿಸಿಕೊಳ್ಳಬೇಕು.ಈ ವಯಸ್ಸಿನಲ್ಲಿ ತಲೆನೋವು, ಎಸಿಡಿಟಿ ಸೇರಿದಂತೆ ಅನೇಕ ರೋಗಗಳು ಬರುತ್ತವೆ. ವ್ಯಾಯಾಮಗಳಿಂದ ಆಹಾರ ಸರಿಯಾಗಿ ಪಚನವಾಗುತ್ತದೆ.ಟ್ರಸ್ಟನಕಾರ್ಯನಿರ್ವಾಹಣಾಧಿಕಾರಿಏಕನಾಥಏಕಬೋಟೆ, ಮಾತನಾಡಿ ,ಜ್ಞಾನವೇ ಬೇರೆ, ಧರ್ಮವೇ ಬೇರೆ. ವಿಜ್ಞಾನ ಮಾತ್ರ ಸತ್ಯಎನ್ನುವುದುತಪ್ಪು. ಪರೀಕ್ಷೆ ಗೆ ಒಳಪಡುವುದೆಲ್ಲವೂ ವಿಜ್ಞಾನ. ಮೌಲ್ಯಗಳು ಯೋಗ್ಯವಾದ ವಿಜ್ಞಾನಎಂದು ಹೇಳಿದರು.ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ ಕಾಲೇಜು ಪ್ರಾಚಾರ್ಯ ಪ್ರೊ.ಎಂ.ಎಸ್.ದಾದ್ಮಿಅವರು ಮಾತನಾಡುತ್ತಇಂತಹಜ್ಞಾನಾಧಾರಿತಕಾರ್ಯಕ್ರಮದಲ್ಲಿತಾವೆಲ್ಲರುಆಸಕ್ತಿಯಿಂದ ಭಾಗವಹಿಸುವ ಹಂಬಲ ವಿದ್ಯಾರ್ಥಿಗಳಲ್ಲಿ ಸದಾಇರಬೇಕುಅಂದಾಗ ಹೊಸ ಹೊಸ ಜ್ಞಾನ ಪಡೆಯಲು ಸಾಧ್ಯವಾಗುವದುಎಂದು ಹೇಳಿದರು. ವಿದ್ಯಾರ್ಥಿಒಕ್ಕೂಟದ ರಶ್ಮಿ, ಪ್ರಾಧ್ಯಪಕರಾದಡಾ.ಬಸವರಾಜ ಪೂಜಾರ, ಡಾ. ಜೆ.ಎಸ್. ಪಾಟೀಲ್, ಅನಿಲ ಬಾಚನಳ್ಳಿ, ಮಂಜುನಾಥ ಗಾಳಿ, ಅರುಣಕುಮಾರ, ಇದ್ದರು.ಪ್ರಾಧ್ಯಪಕಡಾ.ನಾಗರಾಜದಂಡೋತಿ ಹೆಬ್ಬಾಳ ನಿರೂಪಿಸಿದರು. ಡಾ. ಶಶಿಕಾಂತ ಉಮ್ಮಾಪುರೆ ಸ್ವಾಗತಿಸಿದರು. ಡಾ.ಚನ್ನಬಸವ ಸಾಹಾಕಾರ ಪ್ರಾಸ್ತಾವಿಕ ಮಾತನಾಡಿದರು.ಪ್ರಶಾಂತಕೊಂಕಲ್. ವಂದಿಸಿದರು.

Please follow and like us:
error