ಗ್ಲವ್ಸ್ ಇಲ್ಲದೆ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಿ ಅದೇ ಸೋಂಕಿಗೆ ಬಲಿಯಾದ ಇಟಲಿ ವೈದ್ಯ

ರೋಮ್ : ಇಟೆಲಿಯ ಕೊಡೊಗ್ನೊ ನಗರದ ಆಸ್ಪತ್ರೆಯಲ್ಲಿ ಹಲವಾರು ಕೊರೋನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡಿ ಕೊನೆಗೆ ಅದೇ ಸೋಂಕಿಗೆ ಬಲಿಯಾದ  ವೈದ್ಯ ಮಾರ್ಸೆಲ್ಲೊ ನಟಾಲಿ ಅವರು ಕೊರೋನಾ ಪಾಸಿಟಿವ್ ಆಗುವ ಕೆಲವೇ ದಿನಗಳ ಮೊದಲು ಟಿವಿ ಸಂದರ್ಶನವೊಂದರಲ್ಲಿ ಸೋಂಕಿತರ ಆರೈಕೆ ಮಾಡುತ್ತಿರುವ ವೈದ್ಯರ ದಾರುಣ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದರು.

ಆ ಟಿವಿ ಸಂದರ್ಶನದಲ್ಲಿ ಅವರ ಕೈಯ್ಯೊಂದರಲ್ಲಿ ಸ್ಯಾನಿಟೈಸರ್ ಇತ್ತು ಹಾಗೂ ಮುಖಕ್ಕೆ ಮಾಸ್ಕ್ ಕೂಡ ಇತ್ತು. ಆದರೆ ಕೈಗಳಿಗೆ ಗ್ಲವ್ಸ್ ಇರಲಿಲ್ಲ. ಇದು ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ ಅತ್ಯಗತ್ಯ. ”ಅವುಗಳೆಲ್ಲಾ ಖಾಲಿಯಾಗಿವೆ, ಇಂತಹ ಪರಿಸ್ಥಿತಿಗೆ ನಾವು ಸಿದ್ಧರಾಗಿರಲಿಲ್ಲ” ಎಂದು ಅವರು ಆಗ ಹೇಳಿದ್ದರು.

ನಟಾಲಿ ಅವರು ಎರಡು ಬಾರಿ ನ್ಯುಮೋನಿಯಾ ಸೋಂಕಿಗೊಳಗಾಗಿ ಕೊನೆಗೆ ಬುಧವಾರ ನಿಧನರಾದರು. ವೈದ್ಯರೊಬ್ಬರ ಪುತ್ರನಾಗಿರುವ 57 ವರ್ಷದ ನಟಾಲಿ, ಇಟಲಿಯಲ್ಲಿ  ಕೊರೋನಾ ಮೊದಲು ಕಾಣಿಸಿಕೊಂಡಿದ್ದ ಕೊಡೊಗ್ನೊ ಎಂಬಲ್ಲಿನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು ಹಾಗೂ ಇಬ್ಬರು ಮಕ್ಕಳ ತಂದೆಯಾಗಿದ್ದರು.

ಕೊರೋನಾ ಸೋಂಕಿತರ ಚಿಕಿತ್ಸೆಯಲ್ಲಿ ನಿರಂತರಾಗಿ ಮರಣವನ್ನಪ್ಪಿದ ದೇಶದ 13 ವೈದ್ಯರಲ್ಲಿ ನಟಾಲಿ ಕೂಡ ಒಬ್ಬರು.

Please follow and like us:
error