ಕೊರೋನಾ ವೈರಸ್ : ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಚೆಕ್‌ಪೋಸ್ಟ್ ನಿರ್ಮಾಣ

ಕೊಪ್ಪಳ, :  ಜಿಲ್ಲೆಯ 05 ತಾಲ್ಲೂಕುಗಳಲ್ಲಿ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮವಹಿಸುವ ನಿಟ್ಟಿನಲ್ಲಿ 11 ಚೆಕ್‌ಪೋಸ್ಟಗಳನ್ನು ನಿರ್ಮಿಸಲಾಗಿದ್ದು, ವಿವಿಧ ಇಲಾಖೆಗಳ ಸಹಕಾರದೊಂದಿಗೆ ಸಿಬ್ಬಂದಿಗಳನ್ನು ನಿಯೋಜಿಸಿ ಕರ್ತವ್ಯ ನಿರ್ವಹಿಸುವಂತೆ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಅಧ್ಯಕ್ಷರಾದ ಪಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.


ಜಿಲ್ಲೆಯಲ್ಲಿ ಕೋವಿಡ್-19 ಅಪಾಯಕಾರಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಹಿನ್ನೆಲೆಯಲ್ಲಿ ಸೂಕ್ತ ಮುಂಜಾಗ್ರತಾ ಕ್ರಮ ಜರುಗಿಸುವುದು ಅತ್ಯವಶ್ಯಕವಾಗಿದ್ದು, ಜಿಲ್ಲೆಗೆ ಹೊರಜಿಲ್ಲೆಗಳಿಂದ ಜಿಲ್ಲೆಯ ಗಡಿ ಭಾಗದಲ್ಲಿ ಸಂಚರಿಸುವ ಪ್ರತಿ ವಾಹನದಲ್ಲಿ ಬರುವ ಜನರನ್ನು ಸ್ನೇಹ ಮನೋಭಾವದಿಂದ, ಗೌರವಯುತವಾಗಿ ಹಾಗೂ ಸ್ವಯಂ ಪ್ರೇರಣೆಯಿಂದ ಜಾಗೃತಗೊಳಿಸಿ ತಪಾಸಣೆ ಮಾಡಲು ಚೆಕ್‌ಪೋಸ್ಟ್ ನಿರ್ಮಾಣ ಮಾಡಲಾಗಿದೆ.
ಕುಷ್ಟಗಿ ತಾಲ್ಲೂಕಿನ ಕ್ಯಾದಿಗುಪ್ಪಾ, ಹನುಮನಾಳ, ಕಿಲ್ಲಾರಹಟ್ಟಿ ಗ್ರಾಮಗಳಲ್ಲಿ, ಕನಕಗಿರಿ ತಾಲ್ಲೂಕಿನ ಚನ್ನಳ್ಳಿ ಕ್ರಾಸ್, ಗಂಗಾವತಿ ತಾಲ್ಲೂಕಿನ ಚಿಕ್ಕಜಂತಕಲ್ ಮತ್ತು ಕಡೆಬಾಗಿಲು ಸೇತುವೆಗಳಲ್ಲಿ, ಯಲಬುರ್ಗಾ ತಾಲ್ಲೂಕಿನ ಬನ್ನಿಕೊಪ್ಪ, ಸಂಕನೂರು ಕ್ರಾಸ್, ಬಂಡಿ ಕ್ರಾಸ್‌ನಲ್ಲಿ, ಕೊಪ್ಪಳ ತಾಲ್ಲೂಕಿನ ಮೋನ್‌ಲೈಟ್ ಡಾಬಾ ಮತ್ತು ಬೆಳಗಟ್ಟಿ ಸ್ಥಳಗಳಲ್ಲಿ ಚೆಕ್‌ಪೋಸ್ಟ್ಗಳನ್ನು ನಿರ್ಮಿಸಲಾಗಿದೆ. ಪ್ರತಿ ಚೆಕ್‌ಪೋಸ್ಟ್ನಲ್ಲಿ ಗ್ರಾಮ ಪಂಚಾಯತ್, ಪೊಲೀಸ್, ವೈದ್ಯಕೀಯ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ತಂಡ ಸ್ವಯಂ ಪ್ರೇರಣೆಯಿಂದ ಕೊರೋನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ತಪಾಸಣೆ ಕರ್ತವ್ಯ ನಿರ್ವಹಿಸಲಿದೆ

Please follow and like us:
error