ಗ್ರಾಪಂ. ಚುನಾವಣೆ ಅದೃಷ್ಟ ಪರೀಕ್ಷೆಗಿಳಿದ ಪತ್ರಕರ್ತ

ಕೊಪ್ಪಳ: ಗ್ರಾಮ ಪಂಚಾಯ್ತಿ ಚುನಾವಣೆಗೆ ಪತ್ರಕರ್ತರೊಬ್ಬರು ಅಖಾಡಕ್ಕೆ ಇಳಿದು ಅದೃಷ್ಟ ಪರೀಕ್ಷೆಗೆ  ಮುಂದಾಗಿದ್ದಾರೆ. ಪತ್ರಕರ್ತ ಪ್ರಭು ಜಾಗಿರದಾರ್ ಗ್ರಾಮ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯ ಗೊಂಡಬಾಳ ಗ್ರಾಮ ಪಂಚಾಯ್ತಿಯ ಕ್ಷೇತ್ರದ 1 ನೇ ವಾರ್ಡ್ ಗೆ ಸ್ಪರ್ಧೆ ಮಾಡುತ್ತಿದ್ದಾರೆ.

ನಿರಂತರವಾಗಿ ಜನಸಾಮಾನ್ಯರ ಜೊತೆಗೆ ಇರುವ ಸಂಪರ್ಕ ಮತ್ತು ತಮ್ಮ ಹುಟ್ಟೂರು ಗೊಂಡಬಾಳಿನಲ್ಲಿ ಹಲವಾರು ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುವುದನ್ನು ಪರಿಗಣಿಸಿ ತಮ್ಮನ್ನು ವಾರ್ಡಿನ ಜನ ಆಯ್ಕೆ ಮಾಡುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಪ್ರಭು ಜಾಗೀರದಾರ

ಜನಸೇವೆಗೆ ಅನುವು ಮಾಡಿಕೊಡಲು  ನನ್ನನ್ನು ಅರಸಿ ಆರಿಸಿ ತರುವಂತೆ ಅಭ್ಯರ್ಥಿ ಮತದಾರರಲ್ಲಿ ಮನವಿ ಮಾಡಿದ್ದಾರೆ.

 

Please follow and like us:
error