ಲೋಕಸಭಾ ಚುನಾವಣೆ : ಇಬ್ಬರು ನಾಮಪತ್ರ ವಾಪಸ್, ಕಣದಲ್ಲಿ ೧೪ ಅಭ್ಯರ್ಥಿಗಳು

ಕೊಪ್ಪಳ ಏ. ೦೮ : ಕೊಪ್ಪಳ ಲೋಕಸಭಾ ಸಾರ್ವತ್ರಿಕ ಚುನಾವಣೆ ನಡುಯುತ್ತಿದ್ದು ಇಬ್ಬರು ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದು, ಚುನಾವಣಾ ಕಣದಲ್ಲಿ ೧೪ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನವಾದ ಏಪ್ರಿಲ್ ೮ ರಂದು ಇಬ್ಬರು ಪಕ್ಷೇತರ ಅಭ್ಯರ್ಥಿಗಳಾದ ಬಸವರಾಜ್ ಕೆ ಮತ್ತು ಮಹಮ್ಮದ್ ನಜೀರುದ್ದೀನ್ ಮೂಲಿಮನಿ ತಮ್ಮ ಉಮ್ಮೀದುವಾರಿಕೆಯನ್ನು ವಾಪಸ್ ಪಡೆದಿದ್ದಾರೆ. ಅಂತಿಮವಾಗಿ ಚುನಾವಣಾ ಕಣದಲ್ಲಿ ೧೪ ಅಭ್ಯರ್ಥಿಗಳಿದ್ದಾರೆ.

Please follow and like us:
error