ಲೋಕಸಭಾ ಚುನಾವಣೆ; ಅಕ್ರಮ ತಡೆ, ಮತದಾನ ಜಾಗೃತಿ

ಕೊಪ್ಪಳ;ಏಪ್ರಿಲ್-:  ಲೋಕಸಭಾ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ  ಏಪ್ರಿಲ್ 23 ರಂದು ಮತದಾನ ನಡೆಯಲಿದೆ. ಎಲ್ಲಾ ಮತದಾರರು ಅಂದು ತಪ್ಪದೇ ಮತ ಚಲಾಯಿಸಬೇಕು ಮತ್ತು ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ತಡೆಗಟ್ಟಲು ಯಾವ ರೀತಿ ಸಾರ್ವಜನಿಕರು ಸಹ ಕೈ ಜೋಡಿಸಬುದೆಂಬ ಕುರಿತು ಏಪ್ರಿಲ್ 14 ರಿಂದ 16 ರವರೆಗೆ ಮೂರು ದಿನಗಳ ಕಾಲ ಕೊಪ್ಪಳ ಕೇಂದ್ರೀಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ.  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೆದ್ದಪ್ಪಯ್ಯ ನವರು ವಸ್ತುಪ್ರದರ್ಶನ ಉದ್ಘಾಟಿಸಿದರು. ಅಪರ ಜಿಲ್ಲಾಧಿಕಾರಿ ಬಾಲಚಂದ್ರ, ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಡಿ.ಫಯಾಜ್, ಸಂಚಾರಿ ನಿಯಂತ್ರಕ ಬಿರಾದಾರ್, ವಾರ್ತಾಧಿಕಾರಿ ಧನಂಜಯ ಭಾಗವಹಿಸಿದ್ದರು.  ಮೊಬೈಲ್‍ನಲ್ಲಿಯೇ ಚುನಾವಣೆ ಕುರಿತು ಮಾಹಿತಿ ಪಡೆಯುವ ಕುರಿತು ಚುನಾವಣಾ ಆ್ಯಪ್ ಮೂಲಕ ಏನೆಲ್ಲಾ ಮಾಹಿತಿ ಪಡೆಯಬಹುದಾಗಿದೆ. ದಿವ್ಯಾಂಗರಿಗೆ ಉಚಿತ ಸಾರಿಗೆ, ಚುನಾವಣಾ ವೇಳಾಪಟ್ಟಿ, ಅಧಿಕಾರಿಗಳ ವಿವರ, ವ್ಹೀಲ್ ಚೇರ್ ಕಾಯ್ದಿರಿಸಿ, ಜಿಐಎಸ್, ಅಭ್ಯರ್ಥಿಗಳ ಮಾಹಿತಿ, ನಿಮ್ಮ ಹೆಸರು, ಗುರುತಿನ ಚೀಟಿ ವಿವರ ಹುಡುಕುವುದು, ಮತದಾನ ಕೇಂದ್ರಗಳ ವಿವರ ಈ ಆ್ಯಪ್ ಮೂಲಕ ಪಡೆಯಬಹುದಾಗಿದ್ದು ಡೌಲ್‍ಲೋಡ್ ಮಾಡಿಕೊಳ್ಳುವ ವಿವರ ಇದರಲ್ಲಿದೆ.  ಚುನಾವಣಾ ಅಕ್ರಮ ಕಂಡಲ್ಲಿ ಆಯೋಗಕ್ಕೆ ಸಾಕ್ಷಿ ಸಮೇತ ದೂರು ನೀಡಲು ಸಿವಿಜಿಲ್ ಆ್ಯಪ್ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರ ಮೂಲಕ ಮದ್ಯ ಮತ್ತು ಮಾದಕ ವಸ್ತು ವಿತರಣೆ, ಹಣ ವಿತರಣೆ, ಶಸ್ತ್ರಾಸ್ತ್ರ ಪ್ರದರ್ಶನ, ಉಡುಗೊರೆ ವಿತರಣೆ, ಪಾವತಿಸಿದ ಸುದ್ದಿ, ಬೆದರಿಕೆ, ನಕಲಿ ಸುದ್ದಿ, ಕೋಮು ಭಾಷಣ, ಆಸ್ತಿ ಹಾನಿ ಹಾಗೂ ಮತದಾರರ ಸಾಗಣೆ ಮತ್ತು ಇನ್ನಿತರೆ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ದೂರುಗಳ ಕುರಿತು ಚಿತ್ರೀಕರಿಸಿ ದೂರು ಸಲ್ಲಿಸಬಹುದಾಗಿದೆ.   ರಾಹುಲ್ ದ್ರಾವಿಡ್ ಕ್ರಿಕೆಟ್ ಆಟಗಾರ ಇವರ ಸಂದೇಶ ಎಲ್ಲರೂ ಚೆನ್ನಾಗಿ ಆಡಿದ್ರೆ ಮ್ಯಾಚ್ ಗೆಲ್ಲುತ್ತೇವೆ. ಪ್ರತಿಯೊಬ್ಬರು ಓಟ್ ಮಾಡಿದ್ರೆ ಪ್ರಜಾಪ್ರಭುತ್ವ ಗೆಲ್ಲುತ್ತದೆ, ಪ್ರಜಾಪ್ರಭುತ್ವ ಗೆಲ್ಲಿಸಿ, ಗಿರೀಶ್ ಎನ್.ಗೌಡ ಪ್ಯಾರ ಓಲಂಪಿಯನ್, ಪದ್ಮಶ್ರೀ ಪ್ರಶಸ್ತಿ ಪುರಸ್ಕøತರು ಇವರ ಸಂದೇಶ ಮಾಡಿ ಮಾಡಿ ಮತದಾನ, ಇರಲಿ ದೇಶದ ಮೇಲೆ ಅಭಿಮಾನ, ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು ಸೇರಿದಂತೆ ಇತರೆ ಗಣ್ಯ ವ್ಯಕ್ತಿಗಳ ಸಂದೇಶ ಹಾಗೂ ಚುನಾವಣಾ ದೂರುಗಳನ್ನು ನೀಡಲು ಟೋಲ್ ಫ್ರೀ ಸಂಖ್ಯೆ 1950 ಕರೆ ಮಾಡುವ ಕುರಿತಂತೆ ಮಾಹಿತಿ ಒಳಗೊಂಡಿದೆ.

Please follow and like us:
error