ಯತ್ನಾಳ ಹೇಳಿಕೆಯ ಹಿಂದೆ ಪ್ರಭಾವಿಗಳ ಕೈವಾಡವಿದೆ,ಉತ್ತರ ಕರ್ನಾಟಕದವರು ಸಿಎಂ ಆದ್ರೆ ಸ್ವಾಗತ- ಹೊರಟ್ಟಿ

ಕೊಪ್ಪಳ :ಯತ್ನಾಳ ಅವರು ಮುಖ್ಯಮಂತ್ರಿಯಾದ್ರೆ ಸ್ವಾಗತ ಮಾಡ್ತಿವಿ. ಬಿಜೆಪಿಯಲ್ಲೇ ಆಂತರಿಕ‌‌ ಕಲಹ ಇದೆ ಎಂಬುದು ಈಗಾಗಲೇ ಸಾಬೀತಾಗಿದೆ. ಉತ್ತರ ಕರ್ನಾಟಕದವರು‌ ಯಾವುದೇ ಪಕ್ಷದವರು ಸಿಎಂ ಆದ್ರೂ ಸ್ವಾಗತ. ಬಿಜೆಪಿಯಲ್ಲಿ ಆಂತರಿಕ ಕಲಹ ಆರಂಭವಾಗಿದೆ ಯತ್ನಾಳ ಅವರು ಹೇಳಿರುವುದರಲ್ಲಿ ಏನೋ ಒಳ‌ ಅರ್ಥವಿದೆ ಅವರ ಹೇಳಿಕೆಯಲ್ಲಿ ಕೇಂದ್ರದ ಪ್ರಭಾವಿಗಳ ಪಾತ್ರವಿದೆ ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಹೇಳಿದರು. ಅವರಿಂದ ಪತ್ರಿಕಾ ಭವನದಲ್ಲಿ  ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ತಿಮ್ಮಯ್ಯ ಪುರ್ಲೆಯವರ ಪ್ರಚಾರಾರ್ಥವಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಬಸವರಾಜ್ ಪಾಟೀಲ್  ಯತ್ನಾಳ ಅವರ ಹೇಳಿಕೆಗೆ ಧೈರ್ಯ ದೆಹಲಿಯ ಪ್ರಭಾವ ಅವರ ಹೇಳಿಕೆ ಹಿಂದೆ ಯಾರದ್ದೋ ಕುಮ್ಮಕ್ಕು ಇದೆ ಇದು ನನ್ನ 42 ವರ್ಷದ ರಾಜಕೀಯ ಅನುಭವದ ಹಿನ್ನಲೆ ಹೇಳ್ತಾ ಇದೀನಿ ಅದೇನೆ ಆಗ್ಲಿ ಅವರ ನಡುವಿನ ಕಲಹ ಸರ್ಕಾರ ಇರುತ್ತೋ ಹೋಗುತ್ತೋ ಗೊತ್ತಿಲ್ಲ ಉತ್ತರ ಕರ್ನಾಟಕದವರು ಮುಖ್ಯಮಂತ್ರಿ ಆದ್ರೆ ಸ್ವಾಗತಿಸುತ್ತೇವೆ.

ಸರ್ಕಾರದಲ್ಲಿ ದುಡ್ಡಿಲ್ಲ ಅನ್ನೋದಕ್ಕಿಂತ ತಲೆ ಇಲ್ಲ ವಿದ್ಯಾಗಮ ಬೇಡ ಅಂದ್ರೂ ಆರಂಭಿಸಿದ್ರು, 72 ಶಿಕ್ಷಕರು ಸಾವನ್ನಪ್ಪಿದ್ರು ಪ್ರಾಥಮಿಕ ಹಂತದ ವಿದ್ಯಾರ್ಥಿಗಳನ್ನು ಬಿಟ್ಟು ಹೈಸ್ಕೂಲ್, ಪಿಯು ಹಾಗೂ ಪದವಿ ಶಿಕ್ಷಣ ಆರಂಭಿಸಲಿ ಶಿಕ್ಷಕರಿಗೆ, ಪ್ರಾಧ್ಯಾಪಕರಿಗೆ ವೇತನ ಕೊಡುತ್ತಿದ್ದಾರೆ ‌ಶಾಲೆ ಕಾಲೇಜು ಆರಂಭಿಸಲಿ ಶಾಲೆ ಆರಂಭವಾಗದಿದ್ದರೆ ಶಿಕ್ಷಣದಿಂದ ಮಕ್ಕಳು ದೂರು ಉಳಿಯುತ್ತಾರೆ ಸಂಪರ್ಕ ಮಕ್ಕಳಲ್ಲಿ ಕಡಿಮೆ ಆಗುತ್ತೆ ಸರ್ಕಾರ ನಿರ್ಧಾರಗಳು ತಪ್ಪಿ ಇವೆ ಪ್ರಾಥಮಿಕ ಶಾಲಾ ಶಿಕ್ಷಣ ಬಿಟ್ಟು ಉಳಿದ ತರಗತಿಗಳು ಆರಂಭಿಸಲಿ ಈಗಾಗಲೇ ಶಾಲಾ- ಕಾಲೇಜುಗಳನ್ನು ನಡೆಸುವ ಬಗ್ಗೆ ಪಟ್ಟಿ‌ ನೀಡಲಾಗಿದೆ ಆದ್ರೆ ಅದನ್ನೆಲ್ಲ ಕೇಳುವುದಕ್ಕೆ ಸರ್ಕಾರ ಸಿದ್ದವಿಲ್ಲ ಅಂತಾ ಅಸಮಾಧಾನ ವ್ಯಕ್ತಪಡಿಸಿದ್ರು. ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ನ ತಿಮ್ಮಯ್ಯ ಪುರ್ಲೆ ಗೆಲುವು ಶತಸಿದ್ದ. ಹೋರಾಟದ ಹಿನ್ನೆಲೆಯಿಂದ ಬಂದಂತಹ ಉಪನ್ಯಾಸಕರು. ಈವರೆಗೆ ಯಾರೂ ಶಿಕ್ಷಕರು ಈ ಕ್ಷೇತ್ರವನ್ನು ಪ್ರತಿನಿಧಿಸಿಲ್ಲ. ಈಗ ಶಿಕ್ಷಕರು ತಮಗಾಗಿ ಹೋರಾಟ ಮಾಡಿದವರನ್ನು ಆಯ್ಕೆ ಮಾಡುವುದು ಖಚಿತ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಕೆ.ಎಂ.ಸಯ್ಯದ್, ವಿರೇಶ್ ಮಹಾಂತಯ್ಯನಮಠ,ಜಿಲ್ಲಾಧಕ್ಷರು ಉಪಸ್ಥಿತರಿದ್ದರು. ನಂತರ ಕೆ.ಎಂ.ಸಯ್ಯದ್ ಮಾಲೀಕತ್ವದ ಶಿಲ್ಪಾ ಗ್ರಾಂಡ್ ಹೋಟಲ್ ನಲ್ಲಿ  ನಡೆದ ಸಮಾಲೋಚನಾ ಸಭೆಯಲ್ಲಿ ಹಿರಿಯ ಮುಖಂಡ ಪ್ರದೀಗೌಡ ಮಾಲಿಪಾಟೀಲ್, ವಕ್ತಾರ್ ಮೌನೇಶ್ ವಡ್ಡಟ್ಟಿ,  ಕಾರ್ಯಕರ್ತರು,ಪದಾಧಿಕಾರಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕೆ.ಎಂ.ಸಯ್ಯದ್ ಹೊರಟ್ಟಿಯವರನ್ನು ಆತ್ಮೀಯವಾಗಿ ಸನ್ಮಾನಿಸಿದರು.

Please follow and like us:
error