ಮಾದರಿ ನೀತಿ ಸಂಹಿತೆ ಪಾಲನೆಗೆ ವ್ಯಾಪಕ ಕ್ರಮ : ಚುನಾವಣಾಧಿಕಾರಿ ಪಿ.ಸುನೀಲ್ ಕುಮಾರ್ 

ಕೊಪ್ಪಳ ಏ. 11 : ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮೇಲೆ ತೀವ್ರ ಕಟ್ಟೆಚ್ಚರವಹಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಪಿ.ಸುನೀಲ್ ಕುಮಾರ್‌ರವರು ತಿಳಿಸಿದ್ದಾರೆ. 
ಕೊಪ್ಪಳ ಲೋಕಸಭಾ ಕ್ಷೆÃತ್ರದ ಸಾರ್ವತ್ರಿಕ ಚುನಾವಣೆಯು 2019ರ ಏಪ್ರಿಲ್. 23ರಂದು ಮತದಾನ ನಡೆಯಲಿದೆ. ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಯಾವುದೇ ಮಾದರಿ ನೀತಿ ಸಂಹಿತೆ ಉಲ್ಲಂಘನೆಗಳ ಬಗ್ಗೆ ನಿಗಾವಹಿಸಲು ವಿವಿಧ ತಂಡಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಅದಲ್ಲದೇ ಉಲ್ಲಂಘನೆಗಳ ಪ್ರಕರಣಗಳ ಬಗ್ಗೆ ತೀವ್ರ ನಿಗಾವಹಿಸಲು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಸಂಪರ್ಕ ಕೇಂದ್ರವನ್ನು ಸ್ಥಾಪಿಸಲಾಗಿದ್ದು ದಿನದ 24 ಗಂಟೆಯು 1950 ಟೋಲ್ ಫ್ರಿÃ ಸಂಖ್ಯೆಗೆ ಚುನಾವಣೆಗೆ ಸಂಬಂದಿಸಿದ ಯಾವುದೇ ಮಾಹಿತಿ, ದೂರು ನೀಡಬಹುದಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೊಳಿಸಿದ ದಿನಾಂಕದಿಂದ ಚೆಕ್‌ಪೋಸ್ಟ್ ತಂಡಗಳು, ಫ್ಲೆöÊಯಿಂಗ್ ಸ್ಕಾಡ್ ತಂಡಗಳು, ಪೊಲೀಸ್ ಹಾಗೂ ಅಬಕಾರಿ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಈವರೆಗೂ ಸಮಗ್ರವಾಗಿ 314 ಎಫ್‌ಐಆರ್‌ಗಳನ್ನು ದಾಖಲಿಸಿದ್ದು, 63,72,051 ಮೊತ್ತದ ವಿವಿಧ ವಸ್ತುಗಳು ಹಾಗೂ ಸಾಮಾಗ್ರಿಗಳನ್ನು ಅಂದರೆ 11,019 ಲೀ. ಮದ್ಯ ಹಾಗೂ ಇತರೆ ಚುನಾವಣಾ ಪ್ರಚಾರ ಸಾಮಾಗ್ರಿ, ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 1 ಲಾರಿ, 22 ಟು ವಿಲ್ಹರ್ ವೈಕಲ್, 1 ಟಿವಿಎಸ್ ಸ್ಕೂಟಿ, 1 ಹೆವ್ಹಿ ವೈಕಲ್, ಎರಡು ಸಾವಿರ ಪಾಂಪ್ಲೆÃಟ್ಸ್, 100 ಬ್ಯಾಡ್ಜ್ಸ್, 200 ಸ್ಟಿÃರ‍್ಸ್, 200 ಕ್ಯಾಂಡಲ್ಸ್, 200 ಬಿಜೆಪಿ ಫ್ಲಾö್ಯಗ್ಸ್ ಹಾಗೂ ಒಂದು ಸ್ಕಾರ್ಪಿಯೊ, ಒಳಗೊಂಡಿದೆ.
ಜಿಲ್ಲೆಯಾದ್ಯಂತ ವಿವಿಧೆಡೆ 11 ಚೆಕ್‌ಪೋಸ್ಟ್ಗಳನ್ನು ನಿರ್ಮಿಸಲಾಗಿದ್ದು, ಇವುಗಳ ನಿರ್ವಹಣೆಗಾಗಿ ವಿವಿಧ ಅಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಚೆಕ್‌ಪೋಸ್ಟ್ಗಳ ಸುತ್ತ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಈ ಕ್ಯಾಮೆರಾಗಳ ಮೂಲಕ ಚೆಕ್‌ಪೋಸ್ಟ್ಗಳನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಕಂಟ್ರೊÃಲ್ ರೂಮ್‌ನಿಂದ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಈ ಕಾರ್ಯದ ಸಲುವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಮಾದರಿ ನೀತಿ ಸಂಹಿತೆ ತಂಡಗಳಾದ 30 ಫ್ಲೆöÊಯಿಂಗ್ ಸ್ಕಾ÷್ವಡ್ ಮತ್ತು 106 ಸೆಕ್ಟರ್ ಆಫಿರ‍್ಸ್, ಎಲ್ಲಾ 136 ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದ್ದು, ಅಧಿಕಾರಿಗಳ ಕಾರ್ಯನಿರ್ವಹಣೆ ಹಾಗೂ ಚಲನವಲನಗಳನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಳವಡಿಸಲಾದ ಗಣಕಯಂತ್ರಗಳ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಭಾರತ ಚುನಾವಣೆ ಆಯೋಗವು ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ದೂರನ್ನು ಸಾರ್ವಜನಿಕರು ಕೂಡಲೇ ತಮ್ಮ ಮೋಬೈಲ್‌ಗಳ ಮೂಲಕ ಸೆರೆಹಿಡಿದು ಸಲ್ಲಿಸಲು ಅನುಕೂಲವಾಗುವಂತೆ ಹೊಸದಾಗಿ ಪರಿಚಯಿಸಲಾಗಿರುವ ಸಿವಿಜಿಲ್ ಅಪ್ಲಿಕೇಶನ್ ಅನ್ನು ಎಲ್ಲಾ ಮಾದರಿ ನೀತಿ ಸಂಹಿತೆ ತಂಡಗಳ ಅಧಿಕಾರಿಗಳಿಂದ ಉಪಯೋಗಿಸಲಾಗುತ್ತಿದ್ದು, ಸಮರ್ಪಕವಾಗಿ ಕಾರ್ಯನಿರ್ವಹಿಸಲಾಗುತ್ತಿದೆ. ಹಾಗೂ ಈ ಅಧಿಕಾರಿಗಳ ಮತ್ತು ಸಿವಿಜಿಲ್ ಅಪ್ಲಿಕೇಶನ್ ಮೂಲಕ ಸ್ವಿÃಕೃತವಾಗಿರುವ ದೂರುಗಳನ್ನು ಕೂಡ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಇದುವರೆಗೂ ಸಿವಿಜಿಲ್ ಮೂಲಕ 58 ದೂರುಗಳನ್ನು ಸ್ವಿÃಕರಿಸಲಾಗಿದ್ದು 30 ಪ್ರಕರಣಗಳನ್ನು ಸೂಕ್ತ ಮಾಹಿತಿ ಇಲ್ಲದ ಕಾರಣ ಕೈಬಿಡಲಾಗಿದೆ. ಉಳಿದ 28 ನೈಜ ಪ್ರಕರಣಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ.
ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ಮಾಧ್ಯಮದಲ್ಲಿ ಪ್ರಸಾರವಾಗುವ ಎಲ್ಲಾ ದೂರುಗಳ ಬಗ್ಗೆಯೂ ತೀವ್ರ ನಿಗಾವಹಿಸಲು ಹಾಗೂ ತುರ್ತು ಕ್ರಮ ವಹಿಸಲು ಅನುಕೂಲವಾಗುವಂತೆ ಕಂಟ್ರೊÃಲ್ ರೂಮ್‌ನಲ್ಲಿ ತಂಡವನ್ನು ರಚಿಸಲಾಗಿದ್ದು, 24*7 ರಂತೆ ತಂಡಗಳು ಎಲ್ಲಾ ಮಾಧ್ಯಮಗಳ ಮೇಲೆ ನಿಗಾವಹಿಸುತ್ತಿವೆ.
1950 ಜಿಲ್ಲಾ ಸಂಪರ್ಕ ಕೇಂದ್ರ :
***************************
ಮತದಾರರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಯಾವುದೇ ರೀತಿಯ ಮಾಹಿತಿ ಹಾಗೂ ದೂರುಗಳಿದ್ದಲ್ಲಿ ಸ್ಪಂದಿಸಲು ಆಯೋಗದ ನಿರ್ದೇಶನದಂತೆ ಟೋಲ್ ಫ್ರಿÃ ಸಂಖ್ಯೆ-1950 ಯೊಂದಿಗೆ ಜಿಲ್ಲಾ ಸಂಪರ್ಕ ಕೇಂದ್ರವನ್ನು ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ಸ್ಥಾಪಿಸಲಾಗಿದೆ. ಮತದಾರರು ಚುನಾವಣೆಗೆ ಸಂಬಂದಪಟ್ಟ ಯಾವುದೇ ರೀತಿಯ ದೂರುಗಳನ್ನು ಸಲ್ಲಿಸಬಹುದು. ಹಾಗೂ ಚುನಾವಣೆಗೆ ಸಂಬಂದಿಸಿದ ಯಾವುದೇ ರೀತಿಯ ಮಾಹಿತಿಗಾಗಿ ಜಿಲ್ಲಾ ಸಂಪರ್ಕ ಕೇಂದ್ರಕ್ಕೆ ಕರೆ ಮಾಡಿ ಪಡೆಯಬಹುದಾಗಿದೆ. ಈ ಕೇಂದ್ರವು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದೆ. ಇದುವರೆಗೆ 68 ದೂರುಗಳನ್ನು ದಾಖಲಿಸಲಾಗಿದ್ದು, 59 ವಿಲೇ ಮಾಡಲಾಗಿದೆ.
ಆಯೋಗದ ನಿರ್ದೇಶನದಂತೆ ಜಿಲ್ಲೆಯ ಎಲ್ಲಾ ಐದು ವಿಧಾನಸಭಾ ಕ್ಷೆÃತ್ರಗಳಲ್ಲಿ ಸಖಿ ಹಾಗೂ ಮಾದರಿ ಮತಗಟ್ಟೆಗಳನ್ನು ತಲಾ ಒಂದರಂತೆ ಸ್ಥಾಪಿಸಲಾಗುತ್ತಿದೆ. ಸಖಿ ಮತಗಟ್ಟೆಗಳಲ್ಲಿ ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಗಳಿಂದಲೇ ಕಾರ್ಯನಿರ್ವಹಿಸಲ್ಪಡುತ್ತವೆ.
ಸಖಿ ಮತಗಟ್ಟೆಗಳು :
*****************
ಕುಷ್ಟಗಿ ಮತಗಟ್ಟೆ ಸಂಖ್ಯೆ-174 ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ, ಕೃಷ್ಣಗಿರಿ ಕಾಲೋನಿ ಇಲ್ಲಿ ಪುರುಷ 245, ಮಹಿಳಾ 260 ಒಟ್ಟು 505 ಮತದಾರರು. ಕನಕಗಿರಿ ಮತಗಟ್ಟೆ ಸಂಖ್ಯೆ-73 ಜಿಎಲ್‌ಪಿ ಶಾಲಾ ಕಟ್ಟಡ, ದ್ಯಾಮವ್ವ ದೇವಸ್ಥಾನ ಹತ್ತಿರ, ಇಲ್ಲಿ ಪುರುಷ 309, ಮಹಿಳಾ 334 ಸೇರಿ 643 ಮತದಾರರು. ಗಂಗಾವತಿ ಮತಗಟ್ಟೆ ಸಂಖ್ಯೆ-122 ಹೆಚ್.ಆರ್. ಸರೋಜಮ್ಮ ಮೆಮೋರಿಯಲ್ ಬಾಲಕೀಯರ ಪ.ಪೂ. ಕಾಲೇಜು ಕಟ್ಟಡ, ಪಂಪಾನಗರ ಇಲ್ಲಿ ಪುರುಷ 168, ಮಹಿಳಾ 192 ಸೇರಿ 360 ಮತದಾರರು. ಯಲಬುರ್ಗಾ ಮತಗಟ್ಟೆ ಸಂಖ್ಯೆ 75 ಪಟ್ಟಣ ಪಂಚಾಯತಿ ಕಚೇರಿ ಇಲ್ಲಿ ಪುರುಷ 496, ಮಹಿಳಾ 548 ಒಟ್ಟು 1044 ಮತದಾರರು. ಕೊಪ್ಪಳ ಮತಗಟ್ಟೆ ಸಂಖ್ಯೆ-132 ಪಿಎಲ್‌ಡಿ ಬ್ಯಾಂಕ್ ಬಿಲ್ಡಿಂಗ್ ಗಿಣಗೇರಾ ರಸ್ತೆ ಕೊಪ್ಪಳ, ಇಲ್ಲಿ ಪುರುಷ 492 ಹಾಗೂ 507 ಮಹಿಳಾ ಮತದಾರರು ಸೇರಿ 999 ಒಟ್ಟು ಮತದಾರರಿದ್ದಾರೆ.
ಮಾದರಿ ಮತಗಟ್ಟೆಗಳು :
********************
ಕುಷ್ಟಗಿ ಮತಗಟ್ಟೆ ಸಂಖ್ಯೆ-192 ಸಹಾಯಕ ಇಂಜಿನಿಯರ್ ಲೋಕೋಪಯೋಗಿ ಕಚೇರಿ ಇಲ್ಲಿ 269 ಪುರುಷ, 328 ಮಹಿಳಾ ಸೇರಿ 597 ಮತದಾರರು. ಕನಕಗಿರಿ ಮತಗಟ್ಟೆ ಸಂಖ್ಯೆ-69 ಜಿಹೆಚ್‌ಎಸ್ ಬಿಲ್ಡಿಂಗ್, ಇಲ್ಲಿ 323 ಪುರುಷ, 314 ಮಹಿಳಾ ಸೇರಿ 637 ಮತದಾರರು. ಗಂಗಾವತಿ ಮತಗಟ್ಟೆ ಸಂಖ್ಯೆ-194 ಲೋಕೋಪಯೋಗಿ ಇಲಾಖೆ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿ, ಇಲ್ಲಿ 395 ಪುರುಷ ಹಾಗೂ 408 ಮಹಿಳೆಯರು ಸೇರಿ 803 ಮತದಾರರು. ಯಲಬುರ್ಗಾ ಮತಗಟ್ಟೆ ಸಂಖ್ಯೆ-196 ಪಟ್ಟಣ ಪಂಚಾಯತ್ ಕಚೇರಿ ಕುಕನೂರು ಇಲ್ಲಿ, 308 ಪುರುಷ, 281 ಮಹಿಳೆಯರು ಸೇರಿ 589 ಮತದಾರರು. ಕೊಪ್ಪಳ ಮತಗಟ್ಟೆ ಸಂಖ್ಯೆ-54 ಪಟ್ಟಣ ಪಂಚಾಯತ್ ಕಚೇರಿ ಭಾಗ್ಯನಗರ, ಇಲ್ಲಿ 550 ಪುರುಷ ಹಾಗೂ 542 ಮಹಿಳಾ ಮತದಾರರು ಸೇರಿ 1092 ಮತದಾರರಿದ್ದಾರೆ. ಮಾದರಿ ಮತಗಟ್ಟೆಗಳಲ್ಲಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ನೆರಳು, ಕುಡಿಯಲು ನೀರು, ಮಜ್ಜಿಗೆ ನೀಡಲಾಗುತ್ತದೆ. ಹಾಗೂ ಮತದಾರರನ್ನು ಸ್ವಾಗತಿಸಿ ಅವರಿಗೆ ಬೇಕಾದ ಸಹಾಯ ಮಾರ್ಗದರ್ಶನ ಮಾಡುವು ಮೂಲಕ ಮತದಾನ ಮಾಡಿದ ನಂತರ ವಂದನೆಗಳೊಂದಿಗೆ ಮತದಾರರನ್ನು ಬೀಳ್ಕೊಡಲಾಗುತ್ತದೆ.
ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಮತಗಟ್ಟೆ ಸಂಖ್ಯೆ-144 ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಳೇಯ ಕಟ್ಟಡ ಸ್ಟೆÃಶನ್ ರಸ್ತೆ, ಇಲ್ಲಿ ಒಂದು ವಿಕಲಚೇತನರ (PWD) ಮತಗಟ್ಟೆಯನ್ನು ಸ್ಥಾಪಿಸಲಾಗಿದ್ದು 334 ಪುರುಷ ಹಾಗೂ 335 ಮಹಿಳಾ ಮತದಾರರು ಸೇರಿ 669 ಮತದಾರರಿದ್ದಾರೆ. ಮತಗಟ್ಟೆಯು ಸಂಪೂರ್ಣವಾಗಿ ವಿಕಲಚೇತನರಿಂದಲೇ ಕಾರ್ಯನಿರ್ವಹಿಸಲ್ಪಡುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಪಿ.ಸುನೀಲ್ ಕುಮಾರ್‌ರವರು   ತಿಳಿಸಿದ್ದಾರೆ.

Please follow and like us:
error