ಮತ ಎಣಿಕೆ ಕಾರ್ಯ ಎಚ್ಚರಿಕೆಯಿಂದ ನಿಭಾಯಿಸಿ

ಚುನಾವಣಾಧಿಕಾರಿಗಳು ಮತ್ತು ಮಾಸ್ಟರ್ ಟ್ರೇರ‍್ಸ್ಗಳು ಮತ ಎಣಿಕೆ ಕಾರ್ಯ ಎಚ್ಚರಿಕೆಯಿಂದ ನಿಭಾಯಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಎಂ.ಪಿ.ಮಾರುತಿ ಹೇಳಬೇಕು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಬುಧವಾರ ಗ್ರಾಮ ಪಂಚಾಯತಿಗಳ ಸಾರ್ವತ್ರಿಕ ಚುನಾವಣೆ-2020ರ ನಿಮಿತ್ತ ಜಿಲ್ಲಾಡಳಿತ ವತಿಯಿಂದ ಮತ ಎಣಿಕೆ ಕಾರ್ಯದ ಬಗ್ಗೆ ಚುನಾವಣಾಧಿಕಾರಿಗಳಿಗೆ ಮತ್ತು ಮಾಸ್ಟರ್ ಟ್ರೇರ‍್ಸ್ಗಳಿಗೆ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಮಗೆ ಹಂಚಿಕೆಯಾದ ಗ್ರಾಮ ಪಂಚಾಯತಿ ಕ್ಷೇತ್ರ ಮತ್ತು ಕಟ್ಟಡ ಬಗ್ಗೆ, ಹಂಚಿಕೆಯಾದ ಎಣಿಕೆ ಕೊಠಡಿಯ ಮಾಹಿತಿ, ತಮಗೆ ಹಂಚಿಕೆಯಾದ ಟೇಬಲ್ ಸಂಖ್ಯೆ ತಿಳಿದುಕೊಳ್ಳಿ.  ಮತ ಎಣಿಕೆ ಮತ್ತು ಚುನಾವಣೆ ಅಭ್ಯರ್ಥಿಗಳ ಘೋಷಣೆ ನಿಮ್ಮ ಅತ್ಯಂತ ಗುರುತರ ಜವಾಬ್ದಾರಿಗಳಲ್ಲಿ ಒಂದಾಗಿರುತ್ತದೆ. ಆದುದರಿಂದ ನೀವು ಈ ಬಗ್ಗೆ ಹೆಚ್ಚಿನ ಗಮನ ಹರಿಸಿ ಸರಿಯಾದ ತಿಳುವಳಿಕೆಯನ್ನು ಹೊಂದುವುದು ಅವಶ್ಯಕವಾಗಿರುತ್ತದೆ. ಚುನಾವಣೆ ಫಲಿತಾಂಶವು ತಪ್ಪಾದ, ಕ್ರಮ ಬದ್ಧವಲ್ಲದ ನಿರ್ಲಕ್ಷö್ಯದ ಎಣಿಕೆಯಿಂದಾಗಿ ಶೂನ್ಯವಾಗಬಹುದು, ಎಣಿಕೆ ಸಮಯದಲ್ಲಿ ಅತ್ಯಂತ ಜಾಗರೂಕತೆಯಿಂದ ಕರ್ತವ್ಯ ನಿಭಾಯಿಸಿ ಎಂದರು.
ಮತ ಎಣಿಕೆ ಮೇಲ್ವಿಚಾರಕರು, ಎಣಿಕೆ ಸಿಬ್ಬಂದಿ ಮತ್ತು ಆರ್.ಓ. ಅವರಿಗೆ, ಮತ ಎಣಿಕೆಯ ಸಮಯದಲ್ಲಿ ಸಹಕರಿಸುವ ಸಿಬ್ಬಂದಿ, ರಾಜ್ಯ ಚುನಾವಣಾ ಆಯೋಗ ಮತ್ತು ಜಿಲ್ಲಾಧಿಕಾರಿಯವರಿಂದ ಅನುಮತಿಸಲುಪಟ್ಟ ವ್ಯಕ್ತಿಗಳಿಗೆ, ಕರ್ತವ್ಯದ ಮೇಲಿರುವ ಸರ್ಕಾರಿ ನೌಕರರು, ಅಭ್ಯರ್ಥಿಗಳ ಅವರವರ ಚುನಾವಣಾ ಏಜೆಂಟರಿಗೆ ಮಾತ್ರ ಮತ ಎಣಿಕೆ ಕೊಠಡಿಗಳಿಗೆ ಪ್ರೆವೇಶಕ್ಕೆ ಅನುಮತಿ ಇರುತ್ತದೆ ಎಂದು ಅವರು ತಿಳಿಸಿದರು.
ಬಳಿಕ ಜಿಲ್ಲಾ ಸಂಖ್ಯಾಸAಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಅವರು ಮತ ಎಣಿಕೆ ಕಾರ್ಯದ ಬಗ್ಗೆ ಚುನಾವಣಾಧಿಕಾರಿಗಳಿಗೆ ಮತ್ತು ಮಾಸ್ಟರ್ ಟ್ರೇರ‍್ಸ್ಗಳಿಗೆ ತರಬೇತಿ ನೀಡಿದರು.
ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಶರಣಸವರಾಜ, ಯೋಜನಾ ನಿರ್ದೇಶಕ ಟಿ.ಕೃಷ್ಣಮೂರ್ತಿ, ತಹಶೀಲ್ದಾರ್ ಜೆ.ಬಿ.ಮಜ್ಗಿ ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

Please follow and like us:
error