ಮತ್ತೇ ಸುಳ್ಳಿನ ಪ್ರಣಾಳಿಕೆ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ – ಕೆ.ವಿರುಪಾಕ್ಷಪ್ಪ

ಕೊಪ್ಪಳ-೦೯, ಮಸ್ಕಿ ವಿಧಾನಸಭಾ ಕ್ಷೇತ್ರದ ತುರ್ವಿಹಾಳ, ಬಳಗಾನೂರ, ಸಂತೆಕಲ್ಲೂರ ಹಾಗೂ ಮಸ್ಕಿ ಪಟ್ಟಣದಲ್ಲಿ ಕೊಪ್ಪಳ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮೈತ್ರಿ ಪಕ್ಷದ ಅಬ್ಯರ್ಥಿ ಕೆ.ರಾಜಶೇಖರ ಹಿಟ್ನಾಳ ಪರ ಮತಯಾಚನೆ ಹಾಗೂ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಜಿ ಸಂಸದ ಕೆ.ವಿರುಪಾಕ್ಷಪ್ಪನವರು ೨೦೧೪ರ ಚುನಾವಣಾ ಪ್ರಣಾಳಿಕೆಯ ಭರವಸೆಗಳನ್ನು ಈಡೇರಿಸದ ಪ್ರಧಾನಿ ನರೇಂದ್ರ ಮೋದಿಯವರು

೨೦೩೦ರವರೆಗಿನ ಸುಳ್ಳು ಭರವಸೆಗಳನ್ನು ದೇಶದ ಜನತೆಯ ಮುಂದೆ ತಂದಿದ್ದಾರೆ. ಮತ್ತೇ ರಾಮಮಂದಿನ ಕಟ್ಟುವ ಜಮ್ಮು-ಕಾಶ್ಮೀರಿನ ೩೭೦ ಕಲಂ ರದ್ದುಗೊಳಿಸುವ ಹಾಗೂ ೩೫ಎ ವಿಧಿ ರದ್ದತಿಗೆ ಪ್ರಸ್ಥಾಪನೆ ಮಾಡಿರುವುದು ಹಾಸ್ಯಾಸ್ಪದ. ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ ಎಂದು ಹೇಳಿರುವ ಪ್ರಧಾನಿಯವರು ಮೊದಲು ದೇಶದ ರೈತರ ಸಾಲ ಮನ್ನಾ ಮಾಡಲಿ ನಂತರ ರೈತರ ಬಗ್ಗೆ ಇರುವ ಕಾಳಜಿ ಗೊತ್ತಾಗುತ್ತದೆ. ಕೇವಲ ಮೊಸಳೆ ಕಣ್ಣೀರು ಹಾಕುವ ತಂತ್ರ ಇವರದು. ಇವರಿಂದ ದೇಶದ ಅಭಿವೃದ್ಧಿ ಅಸಾಧ್ಯ. ಕೊಪ್ಪಳ ಲೋಕಸಭಾ ಸಂಸಧರು ಸೋಲುವ ಭೀತಿಯಿಂದ ನಾಲಿಗೆ ಮೇಲಿನ ಹತೋಟಿಯನ್ನು ಕಳೆದುಕೊಂಡಿದ್ದಾರೆ. ವಿನಾಃ ಕಾರಣ ಅಸಂಬದ್ಧ ಹೇಳಿಕೆ ಕೊಡುತ್ತಿರುವುದು ಇವರ ಸೋಲಿನ ಕುರುಹು ಆಗಿದೆ ಎಂದು ಬಿ.ಜೆ.ಪಿ. ನಾಯಕರ ವಿರುದ್ಧ ಹಾಗೂ ಕೊಪ್ಪಳ ಸಂಸದ ಕರಡಿ ಸಂಗಣ್ಣನ ವಿರುದ್ಧ ಕಿಡಿಕಾರಿದರು.

ಇದೇ ಸಂದರ್ಭದಲ್ಲಿ ಅನೇಕ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಒಪ್ಪಿಕೊಂಡು ಕಾಂಗ್ರೆಸ್ ಪಕ್ಷದ ನಾಯಕರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರಿಕೊಂಡರು.

ಈ ಸಂದರ್ಭದಲ್ಲಿ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್, ಮಾಜಿ ಸಚಿವ ಬಸವರಾಜ ರಾಯರಡ್ಡಿ, ಶಿವರಾಜ ತಂಗಡಗಿ, ಹಂಪಯ್ಯ ನಾಯಕ, ಬಸನಗೌಡ ಬಾದರ್ಲಿ, ಮೈತ್ರಿ ಪಕ್ಷದ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ, ಮಾಜಿ ಸಂಸದ ಶಿವರಾಮೆಗೌಡ, ಎಂ.ಎಲ್.ಸಿ.ಗಳಾದ ಬಸವರಾಜ ಪಾಟೀಲ್ ಇಟಗಿ, ಶರಣಪ್ಪ ಮತ್ತೂರು, ಎನ್.ಎಸ್.ಬೋಸರಾಜ, ಮಾಲತಿ ನಾಯ್ಕ, ಬ್ಲಾಕ್ ಕಾಂಗೆಸ್ ಅಧ್ಯಕ್ಷ ಬಸವಂತರಾಯ ಕುರಿ, ಬಸವರಾಜ ಹಸ್ಮಕಲ್, ಅಮರೇಶ ಹಂಚಿನಾಳ, ಬಸವರಾಜಸ್ವಾಮಿ ಮಳಿಮಠ, ಮಲ್ಲನಗೌಡ ದೇವರಮನಿ, ದೊಡ್ಡಬಸಪ್ಪನಗೌಡ ಹಾಗೂ ನಗರಸಭಾ ಸದಸ್ಯ ಅಕ್ಬರ್ ಪಾಷಾ ಪಲ್ಟನ್ ಉಪಸ್ಥಿತರಿದ್ದರು.

Please follow and like us:
error