ಮತದಾನ ಒಂದು ಪವಿತ್ರ ಕಾರ್ಯ : ಎಂ ಚೆನ್ನಬಸಪ್ಪ

E
ಕೊಪ್ಪಳ ಮಾ.   ಮತದಾನ ಒಂದು ಪವಿತ್ರ ಕಾರ್ಯ ಎಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಚೆನ್ನಬಸಪ್ಪ ಅವರು ಹೇಳಿದರು.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಡಯಟ್, ಮುನಿರಾಬಾದ್ ಹಾಗೂ ಶಿಕ್ಷಣಾಧಿಕಾರಿಗಳ ಕಾರ್ಯಾಯಲಯ, ಕುಷ್ಟಗಿ ತಾಲೂಕಿನ ಕನ್ಯಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಮತದಾರರ ಸಾಕ್ಷರತಾ ಕ್ಲಬ್‌ಗಳನ್ನು ಎಲ್ಲಾ ಶಿಕ್ಷಣ ಸಂಸ್ಥೆಗಳಿಂದ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಳ್ಳಲಾದ ಎರಡು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮತದಾನ ಒಂದು ಪವಿತ್ರ ಕಾರ್ಯವಾಗಿದ್ದು, ೧೮ ಮೇಲ್ಪಟ್ಟ ಪ್ರತಿಯೊಬ್ಬರು ಕಡ್ಡಾಯವಾಗಿ ಮತ ಚಲಾಯಿಸಿ ಸುಭದ್ರ ಸರ್ಕಾರ ರಚನೆಗೆ ಸಹಕರಿಸಬೇಕು. ಮತದಾನ ಪ್ರಜಾ ಪ್ರಭುತ್ವದ ಭದ್ರ ಬುನಾದಿಯಾಗಿದೆ. ಆದ್ದರಿಂದ ಸಂವಿದಾನಬದ್ಧವಾಗಿ ನೀಡಲಾದ ಮತದಾನದ ಹಕ್ಕನ್ನು ಚಲಾಯಿಸಿ ಎಂದು ಬಿ.ಇ.ಓ. ಎಂ. ಚೆನ್ನಬಸಪ್ಪ ಅವರು ಹೇಳಿದರು.
ಬಿ.ಆರ್.ಸಿ. ಸಮನ್ವಯಾಧಿಕಾರಿ ಶ್ರಿಶ್ರೆತ್ ಸೋಮನಕಟ್ಟೆ ಅವರು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷ ಆರ್.ಎಚ್. ಪತ್ತಾರ, ಉಪನ್ಯಾಸಕಿ ವಿಜಯಲಕ್ಷ್ಮಿ ಒಡೆಯರ್, ವ್ಹಿ.ಬಿ. ದಾದ್ಮಿ, ಚಂದುಸಾಬ್, ಸಂಪಮ್ಮೂಲಾಧಿಕಾರಿ ಡಿ.ಎಲ್.ಎಮ್.ಟಿ. ಅರವಿಂದ ಕುಮಾರ, ಟಿ.ಎಲ್.ಎಮ್.ಟಿ.ಗಳಾದ ಆರ್.ವ್ಹಿ ಡಾಣಿ, ದಾವಲಸಾಬ್ ವಾಲಿಕಾರ್, ಬಂಡೆಪ್ಪ, ಮುಖ್ಯೋಪಾಧ್ಯಯರಾದ ಗೀರಿಜಾದೇವಿ ಸೇರಿದಂತೆ ಸಹ ಶಿಕ್ಷಕರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error