ಮತಗಟ್ಟೆ ನಿಷೇಧಿತ ವ್ಯಾಪ್ತಿಯಲ್ಲಿ ಅನಧಿಕೃತ ವ್ಯಕ್ತಿಗಳಿಗೆ ಪ್ರವೇಶವಿಲ್ಲ; ಡಿ.ವೈ.ಮಾಂಡಲಿಕ

ಕೊಪ್ಪಳ;ಏಪ್ರಿಲ್-೧೦  ಕೊಪ್ಪಳ ಲೋಕಭೆಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ಏಪ್ರಲ್ ೨೩ ರಂದು ಬೆಳಗ್ಗೆ ೭ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ಮತದಾನ ನಡೆಯಲಿದೆ. ಈ ವೇಳೆ ಮತಗಟ್ಟೆಯ ನಿಷೇಧಿತ ವ್ಯಾಪ್ತಿಯಲ್ಲಿ ಯಾವುದೇ ಅನಧಿಕೃತ ವ್ಯಕ್ತಿಗಳಿಗೆ ಪ್ರವೇಶ ಪೊಲೀಸ್ ವೀಕ್ಷಕರಾದ ಡಿಐಜಿಪಿ ಡಿ.ವೈ.ಮಾಂಡಲಿಕ ತಿಳಿಸಿದರು.
ಅವರು (ಏ.೧೦) ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳೊಂದಿಗೆ ನಡೆಸಿದ ಸಭೆಯಲ್ಲಿ ತಿಳಿಸಿದರು. ಮತದಾನ ದಿನದಂದು ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ಬಹಳ ಪ್ರಮುಖವಾಗಿದ್ದು ಯಾವುದೇ ತರಹದ ಅಹಿತಕರ ಘಟನೆಗಳಿಗೆ ಅವಕಾಶ ಇರುವುದಿಲ್ಲ. ಮತಗಟ್ಟೆ ವ್ಯಾಪ್ತಿಯಲ್ಲಿ ಮತದಾರರನ್ನು ಹೊರತುಪಡಿಸಿ ಇತರೆ ಯಾವುದೇ ಅನಧಿಕೃತ ವ್ಯಕ್ತಿಗಳಿಗೆ ನಿಷೇಧಿತ ವ್ಯಾಪ್ತಿಯಲ್ಲಿ ಇರಲು ಅವಕಾಶ ಇರುವುದಿಲ್ಲ. ಮತ್ತು ಅಭ್ಯರ್ಥಿ ಜೊತೆಯಲ್ಲಿ ಎಷ್ಟು ಜನರು ಇರಬೇಕೆಂದು ನಿಯಮವಿದೆ, ಅದನ್ನು ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದರು.
ಪೊಲೀಸ್ ಇಲಾಖೆಯಿಂದ ಚುನಾವಣಾ ಅಕ್ರಮಗಳ ತಡೆಗಟ್ಟಲು ಹದ್ದಿನ ಕಣ್ಣಿಟ್ಟಿದ್ದು ವಿವಿಧ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಪೊಲೀಸ್ ಇಲಾಖೆಗೆ ಸಂಬಂಧಿಸಿದ ನೀತಿ ಸಂಹಿತೆ ಉಲ್ಲಂಘನೆಯ ದೂರುಗಳನ್ನು ನನಗೆ ನೀಡಬಹುದಾಗಿದೆ. ಲೊಕೋಪಯೋಗಿ ಇಲಾಖೆ ಸರ್ಕ್ಯೂಟ್ ಹೌಸ್‌ನಲ್ಲಿ ಲಬ್ಯವಿರುತ್ತೇನೆ. ೯೧೦೮೯೧೨೦೧೮ ನನ್ನ ಮೊಬೈಲ್‌ಗೆ ಕರೆ ಮಾಡಿ ಮಾಹಿತಿ, ದೂರು ನೀಡಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಪಿ.ಸುನೀಲ್ ಕುಮಾರ್ ಮಾತನಾಡಿ ನೀತಿ ಸಂಹಿತೆ ಜಾರಿಯಲ್ಲಿದ್ದು ಅಭ್ಯರ್ಥಿಗಳು ಯಾವುದೇ ಜಾಹಿರಾತನ್ನು ಸಾಮಾಜಿಕ ಜಾಲತಾಣ, ವಿದ್ಯುನ್ಮಾನ ಮಾಧ್ಯಮ, ಕೇಬಲ್ ಟಿ.ವಿ., ರೇಡಿಯೋ, ಸಿನಿಮಾ ಹಾಲ್, ವೀಡಿಯೋ ವ್ಯಾನ್‌ಗಳ ಮೂಲಕ ಪ್ರಚಾರ ಮಾಡಲು ಎಂ.ಸಿ.ಸಿ.ಯಿಂದ ಪೂರ್ವ ಪ್ರಾಮಾಣೀಕರಣ ಪಡೆಯಬೇಕಾಗುತ್ತದೆ. ಆದರೆ ಪ್ರಸಾರಕ್ಕೂ ಮುನ್ನ ಅನುಮತಿ ಪಡೆಯದೇ ಪ್ರಸಾರ, ಪ್ರಚಾರ ಮಾಡಿದಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗಲಿದ್ದು ಕ್ರಮ ಕೈಗೊಳ್ಳಲಾಗುತ್ತದೆ. ಆದ್ದರಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದರು.

Please follow and like us:
error