ಬಿಜೆಪಿ ಪ್ರಣಾಳಿಕೆ ‘ಸಂಕಲ್ಪ್ ಪತ್ರ’ ಬಿಡುಗಡೆ

ಹೊಸದಿಲ್ಲಿ, ಎ.8: ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿಯ ಪ್ರಣಾಳಿಕೆ ಸಂಕಲ್ಪ್ ಪತ್ರ ಇಲ್ಲಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಪ್ರಣಾಳಿಕೆ  ‘ಸಂಕಲ್ಪ್ ಪತ್ರ ‘ಬಿಡುಗಡೆಗೊಂಡಿತು.

ಪ್ರಧಾನ ಮಂತ್ರಿ ನರೇಂದ್ರ ಮೋದಿ   ಉಪಸ್ಥಿತಿಯಲ್ಲಿ 48 ಪುಟಗಳ ಪ್ರಣಾಳಿಕೆಯನ್ನು ಕೇಂದ್ರ ಸಚಿವ ರಾಜ್ ನಾಥ್ ಸಿಂಗ್   ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ ನಾಥ್ ಸಿಂಗ್  ಅವರು ರಾಷ್ಟ್ರೀಯ ಭಧ್ರತೆಯೇ ನಮ್ಮ ಪ್ರಮುಖ ಅಜೆಂಡಾವಾಗಿದೆ. ಎಂದರು.

ಪ್ರಣಾಳಿಕೆಯಲ್ಲಿರುವ ಪ್ರಮುಖ ಅಂಶಗಳು

*ಕೃಷ್ಷಿ,  ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಗೆ  ಒತ್ತು. 25 ಲಕ್ಷ ಕೋಟಿ ರೂ.ಹೂಡಿಕೆ

*ರೈತರ ಆದಾಯ ದ್ವಿಗುಣಗೊಳಿಸಲಾಗುವುದು

*ಕಿಸಾನ್ ಸಮ್ಮಾನ್ ಯೋಜನೆ ವಿಸ್ತರಣೆ

*ಸಂವಿಧಾನದ  35 ಎ ವಿಧಿ ರದ್ದು

*ರೈತರಿಗೆ ಬಡ್ಡಿರಹಿತ ಸಾಲ

*ರೈತರಿಗೆ ಕ್ರೆಡಿಟ್ ಕಾರ್ಡ್

*ರಾಮ ಮಂದಿರ ನಿರಮಾಣಕ್ಕೆ ಎಲ್ಲ ರೀತಿಯ ಪ್ರಯತ್ನ

ಭಯೋತ್ಪಾದನೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.

*ಮೂಲಸೌಕರ್ಯ ಅಭಿವೃದ್ಧಿಗೆ 100 ಲಕ್ಷ ಕೋಟಿ ರೂ. ಹೂಡಿಕೆ

*60 ವರ್ಷ ದಾಟಿದವರಿಗೆ ಪಿಂಚಣಿ ವ್ಯವಸ್ಥೆ

*ದೇಶಾದ್ಯಂತ ಕೃಷಿ ಉಗ್ರಾಣ ವ್ಯವಸ್ಥೆ

*ಎಲ್ಲರಿಗೂ ಶಿಕ್ಷಣ

*ಸಣ್ಣ ವ್ಯಾಪಾರಿಗಳಿಗೂ ಪಿಂಚಣಿ

*ಜಿಎಸ್ ಟಿ ಸರಳೀಕರಣ

*ಎಲ್ಲ  ಮನೆಗಳಿಗೂ  ವಿದ್ಯುತ್

*ದೇಶದಲ್ಲಿ ಸಾಮಾಜಿಕ ನ್ಯಾಯ ಜಾರಿಗೆ ಪ್ರಯತ್ನ

*ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಭನೆಗೆ ಪ್ರಯತ್ನ
* ಭೂದಾಖಲೆಗಳ ಡಿಜಿಟಲೀಕರಣ