ಪಶ್ಚಿಮ ಪದವೀಧರ ಕ್ಷೇತ್ರದ ಪಕ್ಷೇತರ ಅಬ್ಯರ್ಥಿ ಬಸವರಾಜ ಗುರಿಕಾರ ಅವರಿಗೆ ಎಸ್,ಎಫ್, ಐ. ಬೆಂಬಲ

ಗಜೇಂದ್ರಗಡ: ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಅವರನ್ನು, ಎಸ್. ಎಫ್. ಐ ಬೆಂಬಲಿಸಲಿದೆ ಎಂದು ಎಸ್. ಎಫ್‌. ಐ. ರಾಜ್ಯ ಅಧ್ಯಕ್ಷರಾದ ಅಮರೇಶ ಕಡಗದ ತಿಳಿಸಿದರು.

ನಗರದ ಎಸ್. ಎಫ್. ಐ ಕಚೇರಿಯಲ್ಲಿ ಇಂದು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷ ಜನಸಾಮಾನ್ಯರ ಬದುಕನ್ನು ಸಂಕಷ್ಟಕ್ಕೆ ದೂಡುವಂತೆ ಮಾಡಿದೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ರಾಜ್ಯದ ಜನರ ನೆರವಿಗೆ ಧಾವಿಸುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇನ್ನೊಂದೆಡೆ ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ಭಾವನೆ ತಾಳುತ್ತಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಲೇ ಇದೆ.

ಕಾಂಗ್ರೆಸ್ ಪಕ್ಷವೂ ಸಹ ಪ್ರಬಲ ವಿರೋಧ ಪಕ್ಷವಾಗಿ ಆಡಳಿತ ಪಕ್ಷಕ್ಕೆ ಪ್ರತಿರೋಧ ತೋರುವಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಬಿಜೆಪಿ ಸರ್ಕಾರದ ಧೋರಣೆಗಳನ್ನು ಪ್ರಬಲವಾಗಿ ಖಂಡಿಸುವಲ್ಲಿ ಹಿಂದೆ ಬಿದ್ದಿದೆ. ಈ ಹಿನ್ನಲೆಯಲ್ಲಿ ರಾಜ್ಯದ ನಾಲ್ಕ ಪ್ರದೇಶದಲ್ಲಿ ನಡೆಯುತ್ತಿರುವ ಪದವೀಧರರ ಚುನಾವಣೆಯಲ್ಲಿ ಎಸ್ ಎಫ್ ಐ ಪಶ್ಚಿಮ ಪದವೀಧರರ ಮತಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಸವರಾಜ ಗುರಿಕಾರ ಅವರನ್ನು ಬೆಂಬಲಿಸಿದೆ. ಪದವೀಧರ ಮತದಾರರು ಕ್ಷೇತ್ರದಲ್ಲಿ ಬದಲಾವಣೆ ತರುವ ಮೂಲಕ ಗುರಿಕಾರ ಅವರಿಗೆ ಮತ ನೀಡಿ, ನಿಸ್ವಾರ್ಥ ಸೇವೆಗೆ ಅವಕಾಶ ಕಲ್ಪಿಸಬೇಕಿದೆ ಎಂದರು.

ವಿದ್ಯಾರ್ಥಿ ಯುವಜನರ ಪ್ರಶ್ನೆಗಳಿಗೆ ಮತ್ತು ಶಿಕ್ಷಕರ ಪದವೀಧರರ ಹಲವಾರು ಬೇಡಿಕಗಳಿಗೆ ಸ್ಪಂದಿಸುವ ಮನಸ್ಸು ಗುರಿಕಾರ ಅವರಿಗಿದೆ ಯಾಕೆಂದರೆ ಅವರು ನಿರಂತರ ಸಂಘಟನೆ ಕಟ್ಟುತ್ತಾ ಹೋರಾಟ ಮಾಡುತ್ತಾ ಬಂದಿದ್ದಾರೆ ಅವರು ಶಿಕ್ಷಕರಾಗಿ ಸೇವೆ ಸಲ್ಲಿಸುವ ಮೂಲಕ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷರಾಗಿ ಸುಮಾರು ಮೂರು ದಶಕಗಳ ಕಾಲ ಶಿಕ್ಷಕರ ಅನೇಕ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಅಲ್ಲದೆ ರಾಜ್ಯದಲ್ಲಿರುವ ನಿರುದ್ಯೋಗಿಗಳ ಸಮಸ್ಯೆಗಳುನ್ನು ಚೆನ್ನಾಗಿ ಅರ್ಥಮಾಡಿಕೊಂಡು ಸ್ಪಂದಿಸುವ ವ್ಯಕ್ತಿಯಾಗಿದ್ದಾರೆ ಇಂತವರು ಪ್ರಸ್ತುತ ಇಂದಿನ ದಿನಮಾನದಲ್ಲಿ ವಿಧಾನಪರಿಷತ್ತಿನಲ್ಲಿ ಇರುವುದು ಅವಶ್ಯಕವಾಗಿದೆ ಹಾಗಾಗಿ ಬಸವರಾಜ ಗುರಿಕಾರ ಅವರಿಗೆ ವಿದ್ಯಾರ್ಥಿ ಯುವಜನರು ಪದವೀಧರರು ಪ್ರಥಮ ಪ್ರಾಶಸ್ತ್ಯ ಮತ ನೀಡಬೇಕೆಂದು ವಿನಂತಿ.

ಈ ಸಂದರ್ಭದಲ್ಲಿಎಸ್. ಎಫ್ .ಐ. ಮುಖಂಡರಾದ ಗಣೇಶ ರಾಠೋಡ, ಶಿವಾನಂದ ಬೊಸ್ಲೆ, ವಿರೇಶ ಬೆನಹಾಳ, ಬಸವರಾಜ್, ಚಂದ್ರು ರಾಠೋಡ, ಮುತ್ತು ಲಮಾಣಿ ಉಪಸ್ಥಿತರಿದ್ದರು.

Please follow and like us:
error