ನರೇಗಾ ಸಿಬ್ಬಂದಿ ಮಗನ ನಾಮಕರಣದಲ್ಲೂ ಮತದಾನ ಜಾಗೃತಿ


ಕೊಪ್ಪಳ  : ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಎಡಿಪಿಸಿ ನರೇಗಾ ಸಿಬ್ಬಂದಿ ಮಹಾಂತ ಸ್ವಾಮಿ ಎಂಬುವವರ ಮಗನ ನಾಮಕಾರಣ ಸಮಾರಂಭದಲ್ಲಿ ಮತದಾನ ಜಾಗೃತಿ ಮೂಡಿಸಲಾಯಿತು.
ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕೊಪ್ಪಳ ಜಿಲ್ಲಾ ಸ್ವೀಪ್ ಸಮಿತಿಯು ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದಕ್ಕೆ ಗಂಗಾವತಿಯ ಎಡಿಪಿಸಿ ನರೇಗಾ ಸಿಬ್ಬಂದಿ ಮಹಾಂತ ಸ್ವಾಮಿರವರು ಮತದಾನ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂಬ ನಿಟ್ಟಿನಲ್ಲಿ ಮಹಾಂತ ಸ್ವಾಮಿರವರು ತಮ್ಮ ಮಗನ ನಾಮಕರಣ ಸಮಾರಂಭಕ್ಕೆ ಆಗಮಿಸಿದ ಬಂಧು-ಬಳಗದವರಿಗೆ ಮತದಾನ ಜಾಗೃತಿ ಮೂಡಿಸಿದ್ದಾರೆ. ಇವರ ಈ ಕಾರ್ಯಕ್ರಮಕ್ಕೆ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ.
ಸಮಾರಂಭದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಕಡ್ಡಾಯ ಮತದಾನ ಮಾಡುವಂತೆ ಸಾರ್ವಜನಿಕ ಪ್ರತಿಜ್ಞಾವಿಧಿ ಭೋದಿಸಲಾಯಿತು ಹಾಗೂ ಅಣಕು ಮತದಾನವನ್ನು ಸಹ ಮಾಡಿಸಲಾಯಿತು. ಅಲ್ಲದೇ ಇ.ವಿ.ಎಂ. ಮತ್ತು ವಿ.ವಿ. ಪ್ಯಾಟ್ ಮತ ಖಾತ್ರಿ ಯಂತ್ರಗಳ ಕಾರ್ಯದ ಬಗ್ಗೆ ಮಾಹಿತಿಯನ್ನು ಇದೇ ಸಂದರ್ಭದಲ್ಲಿ ನೀಡಲಾಯಿತು. ಜಿಲ್ಲಾ ಸ್ವಿಪ್ ಸಮಿತಿಯ ಶ್ರೀನಿವಾಸ್ ಚಿತ್ರಗಾರ, ತಾನೋಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Please follow and like us:
error