ನಗರದ ವಿವಿಧಡೆ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಹಡಪದ ಪ್ರಚಾರ


ಕೊಪ್ಪಳ : ಏ.೧೩, ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾದ ಮಲ್ಲಿಕಾರ್ಜುನ ಹಡಪದ ಕೊಪ್ಪಳದಲ್ಲಿ ಬಿರುಸಿನ ಪ್ರಚಾರವನ್ನು ನಡೆಸಿದಿರು. ಕೊಪ್ಪಳದಲ್ಲಿ ಮನೆ ಮನೆಗೆ ತೆರಳಿ ಅವರು ಪ್ರಚಾರವನ್ನು ಮಾಡಿದರು.
ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದು ಮತದಾರರು ನನ್ನನ್ನು ಭರ್ಜರಿ ಬಹುಮತದಿಂದ ಆಯ್ಕೆ ಮಾಡಿ ಕಳಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿಕೊಂಡರು.
ನನ್ನ ಗುರುತಿನ ಚಿಹ್ನೆಯಾದ ಕ್ರಮ ಸಂಖ್ಯೆ ೧೧ ರ ಕುಕ್ಕರ್ ಗುರುತಿಗೆ ಮತನೀಡಬೇಕು ಎಂದು ಹೇಳಿದರು. ಕೊಪ್ಪಳದಲ್ಲಿ ಯಾವುದೇ ಮೋದಿಯ ಅಲೆಯು, ಇಲ್ಲ ಪ್ರಿಯಾಂಕ ಗಾಂಧಿಯವರ ಅಲೆಯು ಇಲ್ಲ, ಇಲ್ಲಿರುವದು ಜನಗಳ ಅಲೆ. ಜನರು ಮನಸ್ಸು ಮಾಡಿದರೆ ಪಕ್ಷೇತರ ಅಭ್ಯರ್ಥಿಯಾದ ನನ್ನನ್ನು ಆಯ್ಕೆ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು ಯಾಕಂದರೆ ಈ ಭಾಗದಲ್ಲಿ ಕಾಂಗ್ರೇಸ್‌ನ ದೊಡ್ಡ ಅಲೆ ಇದ್ದಂತಹ ಸಂಧಂರ್ಭದಲ್ಲಿಯು ಪಕ್ಷೇತರ ಅಭ್ಯರ್ಥಿಯಾಗಿ ಶಿವಮೂರ್ತಿಸ್ವಾಮಿ ಅಳವಂಡಿ ಯವರನ್ನು ಸಹ ಪಕ್ಷೇತರ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದು ಉಂಟು. ನಾನು ಯಾವುದೇ ಕಾರು, ಹೆಲಿಕ್ಯಾಪ್ಟರ್ ಮೂಲಕ ಪ್ರಚಾರ ಮಾಡಲ್ಲ. ಪ್ರತಿಯೊಂದು ಊರಿಗೂ ಬಸ್ಸಲ್ಲಿ ತಿರುಗಿ ಜನರ ಬಳಿಗೆ ಹೋಗಿ ಮತ ಕೇಳುವೆ. ಆಯ್ಕೆಯಾದರೆ ಈ ಭಾಗದ ಪ್ರತಿಯೊಂದು ಸಮಸ್ಯೆಯನ್ನು ಅರಿತಿದ್ದೇನೆ, ರೈತರ ಆತ್ಮ ಹತ್ಯೆಯನ್ನು ತಡೆಯುವಲ್ಲಿ ಸರಕಾರಗಳು ವಿಪಲವಾಗಿವೆ. ನೊಂದತಹ ರೈತರ ಧ್ವನಿಯಾಗಿ ನಿಲ್ಲಬೇಕು, ದೀನದಲಿತರು, ಬಡವರ ಅಂತರಂಗದಲ್ಲಿದುಕೊಂಡು ಕೆಲಸ ಮಾಡಬೇಕು ಎಂದುಕೊಂಡು ಸ್ಪರ್ಧೆಗೆ ಇಳಿದಿದ್ದೇನೆ. ಜನರು ಈ ಸಾರಿ ಪಕ್ಷೇತರ ಅಭ್ಯರ್ಥಿಯಾದ ನನ್ನನ್ನು, ನನ್ನ ಗುರುತಾದ ಕುಕ್ಕರ್ ಚಿಹ್ನೆಗೆ ಮತ ನೀಡಿ ಭರ್ಜರಿ ಬಹುಮತದಿಂದ ನನ್ನನು ಆಯ್ಕೆ ಮಾಡಬೇಕೆಂದು ತಿಳಿಸಿದರು.

Please follow and like us:
error