ಜಿಲ್ಲಾ ವಕೀಲರ ಸಂಘದ ಚುನಾವಣೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ


ಕೊಪ್ಪಳ : ಏ.೪, ಇತ್ತೀಚಿಗೆ ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಜಿಲ್ಲಾ ವಕೀಲರ ಸಂಘದ ಚುನಾವಣೆ ಜರುಗಿದ್ದು ಅಧ್ಯಕ್ಷರಾಗಿ ಹೆಚ್.ಹೆಚ್. ಮುರಡಿ, ಉಪಾಧ್ಯಕ್ಷರಾಗಿ ಜಿ.ಸಿ. ಹಮ್ಮಿಗಿ, ಕಾರ್ಯದರ್ಶಿಯಾಗಿ ಬಿ.ವಿ. ಸಜ್ಜನ, ಜಂಟಿ ಕಾರ್ಯದರ್ಶಿಯಾಗಿ ಎಸ್.ಬಿ. ಪಾಟೀಲ, ಖಜಾಂಚಿಯಾಗಿ ಸುಭಾಷ ಬಂಡಿ ಇವರುಗಳು ಅಭೂತಪೂರ್ವ ಜಯ ಸಾಧಿಸಿದ್ದಾರೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ವಕೀಲರಾದ ಹನುಮಂತಪ್ಪ ಬಿ. ಆಲ್ವಿ ಸಂತಸ ವ್ಯಕ್ತಪಡಿಸಿದ್ದಾರೆ.
ಹೆಚ್.ಎಂ ಮುರಡಿಯವರು ೨೬೨ ಮತ, ಉಪಾಧ್ಯಕ್ಷರಾಗಿ ಆಯ್ಕೆಯಾದ ಜೆ.ಸಿ ಹಮ್ಮಿಗಿ ರವರು ೨೮೪, ಕಾರ್ಯದರ್ಶಿಯಾಗಿ ಆಯ್ಕೆಯಾದ ಬಿ.ವಿ. ಸಜ್ಜನ ರವರು ೨೩೪, ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದ ಎಸ್.ಬಿ. ಪಾಟೀಲ ೨೫೮, ಖಜಾಂಚಿಯಾಘಿ ಆಯ್ಕೆಯಾದ ಸುಭಾಷ ಬಂಡಿ ೧೭೮ ಮತಗಳನ್ನು ಪಡೆದು ವಕೀಲರ ಸಂಘದ ಚುನಾವಣೆಯಲ್ಲಿ ಜಯಶಾಲಿಯಾಗಿದ್ದಾರೆ.

Please follow and like us:
error