ಜಿಲ್ಲಾ ಕಸಾಪ ಚುನಾವಣೆ : ಮೇ 09 ರಂದು ಮತದಾನ

ಕೊಪ್ಪಳ,  : ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರ ಚುನಾವಣೆ-2021ರ ನಿಮಿತ್ತ ಮೇ 09 ಭಾನುವಾರ ದಂದು ಬೆಳಿಗ್ಗೆ 08 ಗಂಟೆಯಿAದ ಸಂಜೆ 04 ಗಂಟೆಯವರೆಗೆ ಮತದಾನ ನಡೆಯಲಿದೆ.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರ ಚುನಾವಣೆ-2021 ಅನ್ನು ನಡೆಸಲು ಕರ್ನಾಟಕ ಸರ್ಕಾರದ ಅಧಿಸೂಚನೆಯ ಮೇರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆಗಳAತೆ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಕೊಪ್ಪಳ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಗಳಾದ ವೀರಪ್ಪ ಮಲ್ಲಪ್ಪ ನಿಂಗೋಜಿ, ಶರಣೇಗೌಡ ಲಿಂಗನಗೌಡ ಪಾಟೀಲ್, ಹನುಮಪ್ಪ ನಿಂಗಪ್ಪ ಅಂಡಗಿ, ಹನುಮಂತಪ್ಪ ಯಂಕಪ್ಪ ವಡ್ಡರ ಸ್ಪರ್ಧಿಸಿದ್ದಾರೆ.
ಮತದಾರರು ಮತದಾನ ಕೇಂದ್ರಕ್ಕೆ ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಡ್ರೆöÊವಿಂಗ್ ಲೈಸೆನ್ಸ್, ಸೇವಾ ಗುರುತಿನ ಚೀಟಿ, ಬ್ಯಾಂಕ್/ಅAಚೆ ಕಚೇರಿ ನೀಡಿರುವ ಭಾವಚಿತ್ರ ಇರುವ ಪಾಸ್ ಬುಕ್, ಪಾನ್ ಕಾರ್ಡ್, ಕಾರ್ಮಿಕ ಸಚಿವಾಲಯದ ಯೋಜನೆ ಅಡಿಯಲ್ಲಿ ನೀಡಿರುವ ಸ್ಮಾರ್ಟ್ ಕಾರ್ಡ್, ಎಂ.ನರೇಗಾ ಜಾಬ್ ಕಾರ್ಡ್, ಕಾರ್ಮಿಕ ಸಚಿವಾಲಯದಿಂದ ನೀಡಿರುವ ಆರೋಗ್ಯ ವಿಮೆ ಕಾರ್ಡ್, ಭಾವಚಿತ್ರವಿರುವ ಪಿಂಚಣಿ ದಾಖಲೆ, ಎಂ.ಪಿ/ಎA.ಎಲ್.ಎ/ ಎಂ.ಎಲ್.ಸಿ ಗಳಿಗೆ ನೀಡಿರುವ ಗುರುತಿನ ಚೀಟಿ, ಆಧಾರ್ ಕಾರ್ಡ್ ದಾಖಲೆಯನ್ನು ಉಪಯೊಗಿಸಿ ಮತಚಲಾವಣೆ ಮಾಡಬಹುದಾಗಿದೆ ಎಂದು ಕೊಪ್ಪಳ ತಹಶೀಲ್ದಾರ್  ತಿಳಿಸಿದ್ದಾರೆ.

Please follow and like us:
error