ಗ್ರಾ.ಪಂ ಚುನಾವಣೆ: 2,686 ಅಭ್ಯರ್ಥಿಗಳು ಆಯ್ಕೆ

ಕೊಪ್ಪಳ  : ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ-2020ರ ಮತ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಒಟ್ಟು 2,686 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಜಿಲ್ಲೆಯ ಕೊಪ್ಪಳ, ಯಲಬುರ್ಗಾ, ಕುಕನೂರು, ಗಂಗಾವತಿ, ಕಾರಟಗಿ, ಕನಕಗಿರಿ ಹಾಗೂ ಕುಷ್ಟಗಿ ತಾಲ್ಲೂಕುಗಳಲ್ಲಿನ ಒಟ್ಟು 149 ಗ್ರಾಮ ಪಂಚಾಯತಿಗಳ 2696 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಇದರಲ್ಲಿ 2413 ಅಭ್ಯರ್ಥಿಗಳು ಮತದಾನದ ಮೂಲಕ ಆಯ್ಕೆಯಾಗಿದ್ದರೆ, ಇನ್ನುಳಿದ 283 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರಿಂದ ಒಟ್ಟು 2,696 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ತಾಲ್ಲೂಕುವಾರು ವಿವರ:
ಕೊಪ್ಪಳ ತಾಲ್ಲೂಕಿನಲ್ಲಿನ ಒಟ್ಟು 38 ಗ್ರಾಮ ಪಂಚಾಯತಿಗಳ 736 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಇದರಲ್ಲಿ 682 ಅಭ್ಯರ್ಥಿಗಳು ಮತದಾನದ ಮೂಲಕ ಆಯ್ಕೆಯಾಗಿದ್ದರೆ, ಇನ್ನುಳಿದ 54 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರಿಂದ ಒಟ್ಟು 736 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಯಲಬುರ್ಗಾ ತಾಲ್ಲೂಕಿನಲ್ಲಿನ ಒಟ್ಟು 20 ಗ್ರಾಮ ಪಂಚಾಯತಿಗಳ 345 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಇದರಲ್ಲಿ 305 ಅಭ್ಯರ್ಥಿಗಳು ಮತದಾನದ ಮೂಲಕ ಆಯ್ಕೆಯಾಗಿದ್ದರೆ, ಇನ್ನುಳಿದ 40 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರಿಂದ ಒಟ್ಟು 345 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಕುಕನೂರು ತಾಲ್ಲೂಕಿನಲ್ಲಿನ ಒಟ್ಟು 15 ಗ್ರಾಮ ಪಂಚಾಯತಿಗಳ 240 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಇದರಲ್ಲಿ 223 ಅಭ್ಯರ್ಥಿಗಳು ಮತದಾನದ ಮೂಲಕ ಆಯ್ಕೆಯಾಗಿದ್ದರೆ, ಇನ್ನುಳಿದ 17 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರಿಂದ ಒಟ್ಟು 240 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಗಂಗಾವತಿ ತಾಲ್ಲೂಕಿನಲ್ಲಿನ ಒಟ್ಟು 18 ಗ್ರಾಮ ಪಂಚಾಯತಿಗಳ 347 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಇದರಲ್ಲಿ 324 ಅಭ್ಯರ್ಥಿಗಳು ಮತದಾನದ ಮೂಲಕ ಆಯ್ಕೆಯಾಗಿದ್ದರೆ, ಇನ್ನುಳಿದ 23 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರಿಂದ ಒಟ್ಟು 347 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಕಾರಟಗಿ ತಾಲ್ಲೂಕಿನಲ್ಲಿನ ಒಟ್ಟು 11 ಗ್ರಾಮ ಪಂಚಾಯತಿಗಳ 207 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಇದರಲ್ಲಿ 172 ಅಭ್ಯರ್ಥಿಗಳು ಮತದಾನದ ಮೂಲಕ ಆಯ್ಕೆಯಾಗಿದ್ದರೆ, ಇನ್ನುಳಿದ 35 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರಿಂದ ಒಟ್ಟು 207 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಕನಕಗಿರಿ ತಾಲ್ಲೂಕಿನಲ್ಲಿನ ಒಟ್ಟು 11 ಗ್ರಾಮ ಪಂಚಾಯತಿಗಳ 196 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಇದರಲ್ಲಿ 141 ಅಭ್ಯರ್ಥಿಗಳು ಮತದಾನದ ಮೂಲಕ ಆಯ್ಕೆಯಾಗಿದ್ದರೆ, ಇನ್ನುಳಿದ 55 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರಿಂದ ಒಟ್ಟು 196 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಕುಷ್ಟಗಿ ತಾಲ್ಲೂಕಿನಲ್ಲಿನ ಒಟ್ಟು 36 ಗ್ರಾಮ ಪಂಚಾಯತಿಗಳ 625 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಇದರಲ್ಲಿ 566 ಅಭ್ಯರ್ಥಿಗಳು ಮತದಾನದ ಮೂಲಕ ಆಯ್ಕೆಯಾಗಿದ್ದರೆ, ಇನ್ನುಳಿದ 59 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರಿಂದ ಒಟ್ಟು 625 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

Please follow and like us:
error