ಗ್ರಾ.ಪಂ. ಚುಣಾವಣೆಗೆ ಮೊದಲನೇ ಹಂತಕ್ಕೆ ಡಿ.07 ರಂದು ಜಿಲ್ಲಾ ಮಟ್ಟದ ಅಧಿಸೂಚನೆ ಹೊರಡಿಸಲಾಗಿದೆ : ವಿಕಾಸ್ ಕಿಶೋರ್ ಸುರಳ್ಕರ್


Kannadanet : ರಾಜ್ಯ ಚುನಾವಣಾ ಆಯೋಗದಿಂದ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಗಳು-2020 ರಲ್ಲಿ ಕೊಪ್ಪಳ ಜಿಲ್ಲೆಯ ಮೊದಲನೇ ಹಂತದ ಚುನಾವಣೆಗೆ ಡಿ.07 ರಂದು ಜಿಲ್ಲಾ ಮಟ್ಟದ ಅಧಿಸೂಚನೆ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಗಳು-2020 ರ ಅಂಗವಾಗಿ ಮೊದಲನೇ ಹಂತದ ಚುನಾವಣೆಗೆ ಅಧಿಸೂಚನೆ ಹೊರಡಿಸುವ ಕುರಿತಂತೆ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಎರಡು ಹಂತದಲ್ಲಿ ಗ್ರಾ.ಪಂ.ಚುನಾವಣೆಗಳು ನಡೆಯಲಿವೆ. ಅದರಲ್ಲಿ ಮೊದಲನೇ ಹಂತದ ಚುನಾವಣೆಗೆ ಇಂದು ಅಧಿಸೂಚನೆ ಹೊರಡಿಸಲಾಗಿದ್ದು, ಈ ಅಧಿಸೂಚನೆ ಅನ್ವಯ ಮೊದಲನೇ ಹಂತದಲ್ಲಿ ಜಿಲ್ಲೆಯ ಕೊಪ್ಪಳ, ಯಲಬುರ್ಗಾ, ಕುಕನೂರು ತಾಲ್ಲೂಕು ವ್ಯಾಪ್ತಿಯ ಗ್ರಾ.ಪಂ. ಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದ ಚುನಾವಣೆಗೆ ಡಿ.07 ರಿಂದ ಡಿ.11 ರವರೆಗೆ ನಾಮಪತ್ರ ಸಲ್ಲಿಕೆ ನಡೆಯಲಿದೆ. ಡಿ.12 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಡಿ.14 ಕೊನೆಯ ದಿನವಾಗಿದೆ. ಡಿ.22 ರಂದು ಬೆಳಿಗ್ಗೆ 07 ಗಂಟೆಯಿAದ ಸಂಜೆ 05 ಗಂಟೆಯವರೆಗೆ ಮತದಾನ ನಡೆಯಲಿದೆ. ಮರು ಮತದಾನದ ಅಗತ್ಯವಿದ್ದಲ್ಲಿ ಡಿ.24 ರಂದು ಬೆಳಿಗ್ಗೆ 07 ಗಂಟೆಯಿAದ ಸಂಜೆ 05 ಗಂಟೆಯವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ಡಿ.30 ರಂದು ಮತ ಎಣಿಕೆ ನಡೆಯಲಿದ್ದು, ಡಿ.31 ಕ್ಕೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಅವರು ಚುನಾವಣಾ ವೇಳಾಪಟ್ಟಿಯನ್ನು ತಿಳಿಸಿದರು.
ಜಿಲ್ಲೆಯ ತಾಲ್ಲೂಕುಗಳಾದ ಕೊಪ್ಪಳದಲ್ಲಿ 38, ಗಂಗಾವತಿಯಲ್ಲಿ 18, ಯಲಬುರ್ಗಾದಲ್ಲಿ 22, ಕುಷ್ಟಗಿಯಲ್ಲಿ 36, ಕುಕನೂರಿನಲ್ಲಿ 15, ಕಾರಟಗಿಯಲ್ಲಿ 13, ಕನಕಗಿರಿಯಲ್ಲಿ 11 ಸೇರಿದಂತೆ ಒಟ್ಟು 153 ಗ್ರಾಮ ಪಂಚಾಯತಿಗಳಿವೆ. ಅವುಗಳಲ್ಲಿ ಯಲಬುರ್ಗಾದ ಹಿರೇಮ್ಯಾಗೇರಿ ಮತ್ತು ಸಂಕನೂರು, ಕಾರಟಗಿಯ ಸಿದ್ದಾಪುರ ಮತ್ತು ಮುಸ್ಟೂರು ಗ್ರಾಮ ಪಂಚಾಯತಗಳ ಅವಧಿ 2021 ರ ಜುಲೈ ಮಾಹೆಯ ನಂತರ ಮುಕ್ತಾಯವಾಗುವುದರಿಂದ ಈ ನಾಲ್ಕು ಗ್ರಾ.ಪಂ. ಗಳನ್ನು ಹೊರತು ಪಡಿಸಿ ಒಟ್ಟು 149 ಗ್ರಾ.ಪಂ ಗಳಲ್ಲಿ ಚುನಾವಣೆ ನಡೆಯಲಿದೆ.
ಅವುಗಳಲ್ಲಿ ಮೊದಲನೇ ಹಂತದ ಚುನಾವಣೆಯಲ್ಲಿ ಕೊಪ್ಪಳ ತಾಲ್ಲೂಕಿನ 38 ಗ್ರಾ.ಪಂ ಗಳ 269 ಕ್ಷೇತ್ರಗಳಲ್ಲಿ 328 ಮತಗಟ್ಟೆಗಳಿದ್ದು, 736 ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಕ್ಷೇತ್ರಗಳಲ್ಲಿ 1,11,556 ಪುರುಷ ಮತದಾರರು, 1,11,001 ಮಹಿಳಾ ಮತದಾರರು, ಇತರೆ 06 ಸೇರಿದಂತೆ ಒಟ್ಟು 2,22,563 ಮತದಾರರು ಮತದಾನ ಮಾಡಲಿದ್ದಾರೆ.
ಯಲಬುರ್ಗಾ ತಾಲ್ಲೂಕಿನ 20 ಗ್ರಾ.ಪಂ ಗಳ 129 ಕ್ಷೇತ್ರಗಳಲ್ಲಿ 157 ಮತಗಟ್ಟೆಗಳಿದ್ದು, 345 ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಕ್ಷೇತ್ರಗಳಲ್ಲಿ 53,404 ಪುರುಷ ಮತದಾರರು, 52,396 ಮಹಿಳಾ ಮತದಾರರು, ಇತರೆ 03 ಸೇರಿದಂತೆ ಒಟ್ಟು 1,05,803 ಮತದಾರರು ಮತದಾನ ಮಾಡಲಿದ್ದಾರೆ.
ಕುಕನೂರು ತಾಲ್ಲೂಕಿನ 15 ಗ್ರಾ.ಪಂ ಗಳ 92 ಕ್ಷೇತ್ರಗಳಲ್ಲಿ 108 ಮತಗಟ್ಟೆಗಳಿದ್ದು, 240 ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಕ್ಷೇತ್ರಗಳಲ್ಲಿ 38,377 ಪುರುಷ ಮತದಾರರು, 37,802 ಮಹಿಳಾ ಮತದಾರರು, ಇತರೆ 02 ಸೇರಿದಂತೆ ಒಟ್ಟು 76,181 ಮತದಾರರು ಮತದಾನ ಮಾಡಲಿದ್ದಾರೆ.
ಮೊದಲನೇ ಹಂತದ ಚುನಾವಣೆಯಲ್ಲಿ ಕೊಪ್ಪಳ, ಯಲಬುರ್ಗಾ ಮತ್ತು ಕುಕನೂರು ತಾಲ್ಲೂಕುಗಳ ಒಟ್ಟು 73 ಗ್ರಾ.ಪಂ. ಗಳ 490 ಕ್ಷೇತ್ರಗಳಲ್ಲಿ 593 ಮತಗಟ್ಟೆಗಳಿದ್ದು, ಒಟ್ಟು 1,321 ಸದಸ್ಯರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಒಟ್ಟು 2,03,337 ಪುರುಷ ಮತದಾರರು, 2,01,199 ಮಹಿಳಾ ಮತದಾರರು ಮತ್ತು ಇತರೆ 11 ಸೇರಿದಂತೆ ಒಟ್ಟು 4,04,547 ಮತದಾರರು ಮತದಾನ ಮಾಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಚುನಾವಣೆ ನಡೆಯಲಿರುವ ಗ್ರಾ.ಪಂ ಗೆ ಒಬ್ಬ ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅಧಿಕಾರಿಗಳು ನಿಗದಿತ ದಿನಾಂಕದAದು ನಾಮಪತ್ರಗಳನ್ನು ಸ್ವೀಕರಿಸುತ್ತಾರೆ ಎಂದು ತಿಳಿಸಿದ ಅವರು, ಕೊಪ್ಪಳ ತಾಲ್ಲೂಕಿನಲ್ಲಿ 269 ಮೂಲ ಮತದಾನ ಕೇಂದ್ರಗಳು, 59 ಆಕ್ಸಿಲರಿ ಮತಗಟ್ಟೆಗಳು ಸೇರಿದಂತೆ ಒಟ್ಟು 328 ಮತಗಟ್ಟೆಗಳಿವೆ. ಯಲಬುರ್ಗಾ ತಾಲ್ಲೂಕಿನಲ್ಲಿ 132 ಮೂಲ ಮತದಾನ ಕೇಂದ್ರಗಳು, 25 ಆಕ್ಸಿಲರಿ ಮತಗಟ್ಟೆಗಳು ಸೇರಿದಂತೆ ಒಟ್ಟು 157 ಮತಗಟ್ಟೆಗಳಿವೆ. ಕುಕನೂರು ತಾಲ್ಲೂಕಿನಲ್ಲಿ 92 ಮೂಲ ಮತದಾನ ಕೇಂದ್ರಗಳು, 16 ಆಕ್ಸಿಲರಿ ಮತಗಟ್ಟೆಗಳು ಸೇರಿದಂತೆ ಒಟ್ಟು 108 ಮತಗಟ್ಟೆಗಳಿಗೆ. ಗಂಗಾವತಿ ತಾಲ್ಲೂಕಿನಲ್ಲಿ 130 ಮೂಲ ಮತದಾನ ಕೇಂದ್ರಗಳು, 29 ಆಕ್ಸಿಲರಿ ಮತಗಟ್ಟೆಗಳು ಸೇರಿದಂತೆ ಒಟ್ಟು 159 ಮತಗಟ್ಟೆಗಳಿವೆ. ಕಾರಟಗಿಯಲ್ಲಿ 72 ಮೂಲ ಮತದಾನ ಕೇಂದ್ರಗಳು, 25 ಆಕ್ಸಿಲರಿ ಮತಗಟ್ಟೆಗಳು ಸೇರಿದಂತೆ ಒಟ್ಟು 97 ಮತಗಟ್ಟೆಗಳಿವೆ. ಕನಕಗಿರಿಯಲ್ಲಿ 77 ಮೂಲ ಮತದಾನ ಕೇಂದ್ರಗಳು, 12 ಆಕ್ಸಿಲರಿ ಮತಗಟ್ಟೆಗಳು ಸೇರಿದಂತೆ ಒಟ್ಟು 89 ಮತಗಟ್ಟೆಗಳಿವೆ. ಕುಷ್ಟಗಿ ತಾಲ್ಲೂಕಿನಲ್ಲಿ 239 ಮೂಲ ಮತದಾನ ಕೇಂದ್ರಗಳು, 61 ಆಕ್ಸಿಲರಿ ಮತಗಟ್ಟೆಗಳು ಸೇರಿದಂತೆ ಒಟ್ಟು 300 ಮತಗಟ್ಟೆಗಳಿವೆ. ಜಿಲ್ಲೆಯಲ್ಲಿ ಒಟ್ಟು 1011 ಮೂಲ ಮತದಾನ ಕೇಂದ್ರಗಳು, 227 ಆಕ್ಸಿಲರಿ ಮತಗಟ್ಟೆಗಳು ಸೇರಿದಂತೆ ಒಟ್ಟು 1238 ಮತಗಟ್ಟೆಗಳಿವೆ ಎಂದು ಅವರು ಮತಗಟ್ಟೆಗಳ ಮಾಹಿತಿ ನೀಡಿದರು.
ವ್ಯವಸ್ಥಿತ ಚುನಾವಣಾ ಪ್ರಕ್ರಿಯೆಗೆ ಸಂಬAಧಿಸಿದAತೆ ಮೊದಲ ಹಂತದ ಚುನಾವಣೆಗೆ 593 ಮತಗಟ್ಟೆಗಳಿಗೆ 712 ಪ್ರಿಸೈಡಿಂಗ್ ಅಧಿಕಾರಿಗಳು, 712 ಮೊದಲನೇ ಪೋಲಿಂಗ್ ಅಧಿಕಾರಿಗಳು, 712 ಎರಡನೇ ಪೋಲಿಂಗ್ ಅಧಿಕಾರಿಗಳು, 712 ಮೂರನೇ ಪೋಲಿಂಗ್ ಅಧಿಕಾರಿಗಳು, 593 ಡಿ-ದರ್ಜೆ ನೌಕರರು ಸೇರಿದಂತೆ ಒಟ್ಟು 3,441 ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನೇಮಕ ಮಾಡಲಾಗಿದೆ. ಚುನಾವಣಾ ನೀತಿ ಸಂಹಿತೆಯು ನವೆಂಬರ್ 30 ರಿಂದ ಆರಂಭವಾಗಿದ್ದು, ಡಿಸೆಂಬರ್ 31 ರವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದAತೆ ತೀವ್ರ ನಿಗಾ ವಹಿಸಲು ತಾ.ಪಂ. ಗಳ ಕಾರ್ಯನಿರ್ವಾಹಕ ಅಧಿಕಾರಿ, ಪೊಲೀಸ್ ಇಲಾಖೆ, ಅಬಕಾರಿ ಇಲಾಖೆಗಳನ್ನು ಒಳಗೊಂಡAತೆ ತಂಡಗಳನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದರು.
ವಿವಿಧ ಸಾರ್ವತ್ರಿಕ ಚುನಾವಣೆಗಳಲ್ಲಿ ಅತಿ ಹೆಚ್ಚು ಜನ ಭಾಗವಹಿಸುವ ಚುನಾವಣೆ ಎಂದರೆ ಅದು ಗ್ರಾಮ ಪಂಚಾಯತಿ ಚುನಾವಣೆಗಳು. ಇಲ್ಲಿ ಗ್ರಾಮೀಣ ಭಾಗದ ಜನರು ಹೆಚ್ಚು ಸಕ್ರಿಯರಾಗಿರುತ್ತಾರೆ ಮತ್ತು ಹೆಚ್ಚಿನ ಜನ ಸೇರುತ್ತಾರೆ. ಪ್ರಸ್ತುತ ಕೋವಿಡ್-19 ತುರ್ತು ಪರಿಸ್ಥಿತಿ ಇರುವುದರಿಂದ ಸೋಂಕು ಹರಡುವಿಕೆ ತಡೆಗಟ್ಟಲು ಗ್ರಾಮ ಪಂಚಾಯತಿಗಳ ಚುನಾವಣೆಗೆ ಜಿಲ್ಲಾಡಳಿತದಿಂದ ಕೋವಿಡ್-19 ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದರಂತೆ ಗ್ರಾ.ಪಂ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯು ಕಡ್ಡಾಯವಾಗಿ ಆರ್‌ಟಿಪಿಸಿಆರ್ ವಿಧಾನದ ಮೂಲಕ ಕೋವಿಡ್ ಪರೀಕ್ಷೆಯನ್ನು ಮಾಡಿಸಬೇಕು. ಸೋಂಕು ದೃಢಪಟ್ಟ ಅಭ್ಯರ್ಥಿ ನಾಮಪತ್ರವನ್ನು ಸೂಚಕನ ಮೂಲಕ ಸಲ್ಲಿಸಬೇಕು. ನಾಮಪತ್ರ ಸಲ್ಲಿಕೆ ಮತ್ತು ಚುನಾವಣಾ ಪ್ರಚಾರದ ವೇಳೆ ಅಭ್ಯರ್ಥಿ ಮತ್ತು ಇತರರು ಕಡ್ಡಾಯವಾಗಿ ಮಾಸ್ಕ್ ಮತ್ತು ಕೈಗವಸುಗಳನ್ನು ಧರಿಸಬೇಕು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಗ್ರಾ.ಪಂ ಚುನಾವಣೆಯು ಪಕ್ಷ ರಹಿತ ಚುನಾವಣೆ ಆಗಿರುವುದರಿಂದ ಅಭ್ಯರ್ಥಿಗಳ ಪ್ರಚಾರವು ಕ್ಷೇತ್ರಕ್ಕೆ ಸೀಮಿತವಾಗಿರುತ್ತದೆ. ಕಡಿಮೆ ಸಂಖ್ಯೆಯ(ಗರಿಷ್ಠ 05 ಜನ) ಬೆಂಬಲಿಗರೊAದಿಗೆ ಮನೆ ಮನೆಗೆ ಭೇಟಿ ನೀಡಿ ಪ್ರಚಾರ ಮಾಡಬಹುದಾಗಿದೆ. ಸಾಧ್ಯವಾದಷ್ಟು ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಪ್ರಚಾರ ಮಾಡಬೇಕು. ನಿಯಮಾನುಸಾರ ಮುದ್ರಿಸಿದ ಕರಪತ್ರಗಳನ್ನು ಹಂಚುವವರು ಕಡ್ಡಾಯವಾಗಿ ಫೇಸ್ ಮಾಸ್ಕ್, ಕೈಗವಸು ಧರಿಸಿರಬೇಕು ಹಾಗೂ ಸ್ಯಾನಿಟೈಸರ್ ಬಳಸಬೇಕು. ಗುಂಪು ಗುಂಪಾಗಿ ಪ್ರಚಾರ ಮಾಡುವಂತಿಲ್ಲ. ಕೋವಿಡ್-19 ಪಾಸಿಟಿವ್ ಅಭ್ಯರ್ಥಿಗಳು ವಿದ್ಯುನ್ಮಾನ ಮಾದ್ಯಮಗಳ ಮೂಲಕ ಪ್ರಚಾರ ಮಡಬೇಕು. ಖುದ್ದಾಗಿ ಸಾಮಾನ್ಯ ಜನರೊಂದಿಗೆ ಅಥವಾ ಸಮುದಾಯದಲ್ಲಿ ಪ್ರಚಾರ ಮಾಡಲು ಅವಕಾಶವಿಲ್ಲ ಎಂದು ಅವರು ತಿಳಿಸಿದರು.
ಮತಗಟ್ಟೆಗಳಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಸರತಿ ಸಾಲುಗಳನ್ನು ಸಾಮಾಜಿಕ ಅಂತರದಲ್ಲಿ ನಿಗದಿಪಡಿಸಲಾಗುವುದು. ಕೋವಿಡ್-19 ಪಾಸಿಟಿವ್ ಮತದಾರರಿಗೆ ಮತದಾನದ ದಿನ ಕೊನೆಯಲ್ಲಿ ಒಂದು ಗಂಟೆಯ ಅವಧಿಯನ್ನು ಪ್ರತ್ಯೇಕವಾಗಿ ನೀಡಲಾಗುವುದು. ಕೋವಿಡ್ ನಿಯಮಾನುಸಾರ ಪಾಸಿಟಿವ್ ವ್ಯಕ್ತಿ ಮತದಾನ ಮಾಡಬಹುದು. ಈ ಕುರಿತಂತೆ ಚುನಾವಣಾ ಆಯೋಗದಿಂದ ನಿರ್ದೇಶನ ಬಂದ ನಂತರ ಹೆಚ್ಚಿನ ಮಾಹಿತಿ ನೀಡಲಾಗುತ್ತದೆ ಎಂದರು.
ಗ್ರಾ.ಪಂ. ಚುನಾವಣೆ ಸಂಬAಧ ಜಿಲ್ಲೆಯಲ್ಲಿ 7 ತಾಲ್ಲೂಕುಗಳಲ್ಲಿ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕೇಂದ್ರ ಹಾಗೂ ಮತ ಎಣಿಕೆ ಕೇಂದ್ರಗಳನ್ನು ಗುರುತಿಸಲಾಗಿದೆ. ಕೊಪ್ಪಳ ತಾಲ್ಲೂಕಿನಲ್ಲಿ ಕೊಪ್ಪಳ ನಗರದ ಶ್ರೀ ಗವಿಸಿದ್ದೇಶ್ವರ ಪ್ರೌಢ ಶಾಲೆಯಲ್ಲಿ ಮಸ್ಟರಿಂಗ್, ಡಿ-ಮಸ್ಟರಿಂಗ್ ಮತ್ತು ಮತ ಎಣಿಕೆ ಕಾರ್ಯ ನಡೆಯಲಿದೆ. ಕುಷ್ಟಗಿ ತಾಲ್ಲೂಕಿನಲ್ಲಿ ಕುಷ್ಟಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್, ಡಿ-ಮಸ್ಟರಿಂಗ್ ಮತ್ತು ಮತ ಎಣಿಕೆ ಕಾರ್ಯ ನಡೆಯಲಿದೆ. ಗಂಗಾವತಿ ತಾಲ್ಲೂಕಿನಲ್ಲಿ ಗಂಗಾವತಿ ನಗರದ ಲಯನ್ಸ್ ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗದಲ್ಲಿ ಮಸ್ಟರಿಂಗ್, ಡಿ-ಮಸ್ಟರಿಂಗ್ ಮತ್ತು ಮತ ಎಣಿಕೆ ಕಾರ್ಯ ನಡೆಯಲಿದೆ. ಕಾರಟಗಿ ತಾಲ್ಲೂಕಿನಲ್ಲಿ ಕಾರಟಗಿ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮಸ್ಟರಿಂಗ್ ಮತ್ತು ಸಿ.ಮಲ್ಲಿಕಾರ್ಜುನ ನಾಗಪ್ಪ ಮಹಾವಿದ್ಯಾಲಯದಲ್ಲಿ ಡಿ-ಮಸ್ಟರಿಂಗ್ ಹಾಗೂ ಮತ ಎಣಿಕೆ ನಡೆಯಲಿದೆ. ಕನಕಗಿರಿ ತಾಲ್ಲೂಕಿನಲ್ಲಿ ಕನಕಗಿರಿಯ ಸರ್ಕಾರಿ ಪ್ರೌಢಶಾಲೆ(ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣ) ದಲ್ಲಿ ಮಸ್ಟರಿಂಗ್, ಡಿ-ಮಸ್ಟರಿಂಗ್ ಮತ್ತು ಮತ ಎಣಿಕೆ ಕಾರ್ಯ ನಡೆಯಲಿದೆ. ಯಲಬುರ್ಗಾ ತಾಲ್ಲೂಕಿನಲ್ಲಿ ಯಲಬುರ್ಗಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್, ಡಿ-ಮಸ್ಟರಿಂಗ್ ಮತ್ತು ಮತ ಎಣಿಕೆ ಕಾರ್ಯ ನಡೆಯಲಿದೆ. ಕುಕನೂರು ತಾಲ್ಲೂಕಿನಲ್ಲಿ ಕುಕನೂರಿನ ವಿದ್ಯಾನಂದ ಗುರುಕುಲ ಶಿಕ್ಷಣ ಸಂಸ್ಥೆಯಲ್ಲಿ ಮಸ್ಟರಿಂಗ್, ಡಿ-ಮಸ್ಟರಿಂಗ್ ಮತ್ತು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿಯನ್ನು ಆರಂಭಿಸಲಾಗಿದ್ದು, ಚುನಾವಣಾ ಸಂಬAಧಿತ ದೂರು ಅಥವಾ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 08539-225001 ಕರೆ ಮಾಡಬಹುದು ಎಂದು ಅವರು ತಿಳಿಸಿದರು.
ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗ್ರಾಮ ಪಂಚಾಯತಿ ಚುನಾವಣೆಗೆ ಸಂಬAಧಿಸಿದAತೆ ಈಗಾಗಲೇ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಚುನಾವಣೆಯ ಪ್ರಕ್ರಿಯೆ, ಮಹತ್ವ, ಉದ್ದೇಶ ಹಾಗೂ ಮತದಾನದ ಬಗ್ಗೆ ಮತದಾರರಲಲಿ ಜಾಗೃತಿ ಮೂಡಿಸಲು ಗ್ರಾಮ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಸಾರ್ವಜನಿಕ ಹಾಗೂ ಸರ್ಕಾರಿ ಸ್ಥಳಗಳಲ್ಲಿ ಚುನಾವಣೆ ಕುರಿತು ಜಾಗೃತಿ ಭಿತ್ತಿ ಪತ್ರಗಳನ್ನು ಅಂಟಿಸಲಾಗುತ್ತಿದೆ. ಕೋವಿಡ್-19 ತುರ್ತು ಪರಿಸ್ಥಿತ ಕಾರಣ ಸಾರ್ವಜನಿಕರು ಸ್ವ-ಇಚ್ಛೆಯಿಂದ ಕೋವಿಡ್ ನಿಯಮಗಳನ್ನು ಪಾಲಿಸಿ ಆರೋಗ್ಯಯುತ ಚುನಾವಣೆ ನಡೆಸಲು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ ಮಾತನಾಡಿ, ಗ್ರಾ.ಪಂ. ಚುನಾವಣೆಗಳಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಗೆ ಜಿಲ್ಲೆಯ ಪೊಲೀಸ್, ಸಶಸ್ತç ಪಡೆ, ಹೋಂ ಗಾರ್ಡ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಸಮಸ್ಯಾತ್ಮಕ ಗ್ರಾ.ಪಂ. ಕ್ಷೇತ್ರಗಳ ಪಟ್ಟಿ ಕಾರ್ಯ ನಡೆದಿದೆ. ಪ್ರತಿ ತಾಲ್ಲೂಕಿಗೆ ಒಬ್ಬ ಉಸ್ತುವಾರಿ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ರೌಡಿ ಶೀಟರ್‌ಗಳ ಪಟ್ಟಿ ಮಾಡಲಾಗುತ್ತಿದ್ದು, ಕಾನೂನು ಸುವ್ಯವಸ್ಥೆಗೆ ಭಂಗ ತರುವವರನ್ನು ಗಡೀಪಾರು ಮಾಡಲಾಗುವುದು. ಸನ್ನಡತೆ ಆಧಾರದಲ್ಲಿ ಕೆಲವರಿಂದ ಮುಚ್ಚಳಿಕೆ ಪತ್ರವನ್ನು ಪಡೆಯಲಾಗುತ್ತಿದೆ. ಪರವಾನಗಿ ಇಲ್ಲದ ಮತ್ತು ಪರವಾನಗಿ ಅವಧಿ ಮುಗಿದ ಶಸ್ತಾçಸ್ತçಗಳನ್ನು ಪೊಲೀಸ್ ವಶಕ್ಕೆ ಪಡೆಯಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭ ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ವರ್ಣಿತ್ ನೇಗಿ, ಅಪ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಅಬಕಾರಿ ಡಿಸಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error