ಗ್ರಾಮ ಪಂಚಾಯತ ಚುನಾವಣೆ-2020 -ಮೊದಲನೇ ಹಂತದ ಚುನಾವಣೆಗೆ ಅಧಿಸೂಚನೆ ಪ್ರಕಟ


ಕೊಪ್ಪಳ, : 2020ರ ಡಿಸೆಂಬರ್ ಮಾಹೆಯವರೆಗೆ ಮುಕ್ತಾಯಗೊಳ್ಳುವ ಕೊಪ್ಪಳ ಜಿಲ್ಲೆಯ ಕೊಪ್ಪಳ, ಯಲಬುರ್ಗಾ ಮತ್ತು ಕುಕನೂರು ತಾಲ್ಲೂಕುಗಳಲ್ಲಿನ ಗ್ರಾಮ ಪಂಚಾಯತಿ ಚುನಾವಣೆಗೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಚುನಾವಣೆಯನ್ನು ನಡೆಸುವ) ನಿಯಮಗಳು, 1993 ರ 12ನೇ ನಿಯಮದ ಪ್ರಕಾರ ಚುನಾವಣೆ ವೇಳಾಪಟ್ಟಿಯನ್ನು ನಿಗದಿಪಡಿಸಿ, ಮೊದಲನೇ ಹಂತದ ಚುನಾವಣೆಗೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಅಧಿಸೂಚನೆ ಹೊರಡಿಸಿದ್ದಾರೆ.
ಅಧಿಸೂಚನೆಯ ವೇಳಾಪಟ್ಟಿಯನ್ವಯ ಡಿ.11 ರಂದು(ಶುಕ್ರವಾರ) ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಡಿ.12 ರಂದು(ಶನಿವಾರ) ನಾಮಪತ್ರ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಡಿ.14(ಸೋಮವಾರ) ಕೊನೆಯ ದಿನವಾಗಿದೆ. ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ(ಬೆಳಿಗ್ಗೆ 07 ಗಂಟೆಯಿAದ ಸಂಜೆ 05 ಗಂಟೆಯವರೆಗೆ) ಡಿ.22, ಚುನಾವಣೆ ಕೊನೆಗೊಳ್ಳುವ ದಿನಾಂಕ ಡಿ.31(ಗುರುವಾರ).
ಕೊಪ್ಪಳ ತಾಲ್ಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಕವಲೂರು-21, ಹಟ್ಟಿ-19, ಅಳವಂಡಿ-20, ಬೋಚನಹಳ್ಳಿ-20, ಬೆಟಗೇರಾ-15, ಮತ್ತೂರು-21, ಕಾತರಕಿ ಗುಡ್ಲಾನೂರು-19, ಬಿಸರಳ್ಳಿ-18, ಹಿರೇಸಿಂದೋಗಿ-18, ಕೋಳೂರು-21, ಹಲಗೇರಾ-18, ಓಜನಹಳ್ಳಿ-23, ಮಾದಿನೂರು-9, ಕಿನ್ನಾಳ-25, ಲೇಬಗೇರಾ-17, ಇರಕಲ್ಲಗಡಾ-24, ಚಿಕ್ಕಬೊಮ್ಮನಾಳ-19, ಹಾಸಗಲ್-20, ತಾವರಗೇರಾ-24, ಇಂದರಗಿ-14, ಬೂದಗುಂಪಾ-25, ಬಂಡಿಹರ್ಲಾಪುರ-20, ಶಿವಪುರ-14, ಹುಲಗಿ-20, ಮುನಿರಾಬಾದ್ ಯೋಜನಾ ಗ್ರಾಮ-25, ಹೊಸಳ್ಳಿ-29, ಅಗಳಕೇರಾ-13, ಹಿಟ್ನಾಳ-19, ಗುಳದಳ್ಳಿ-15, ಗಿಣಿಗೇರಾ-28, ಹಿರೇಬಗನಾಳ-24, ಕುಣಿಕೇರಾ-17, ಗೊಂಡಬಾಳ-17, ಬಹದ್ದೂರಬಂಡಿ-25, ಹಾಲವರ್ತಿ-17, ಕಲಕೇರಾ-14, ಬೇವಿನಹಳ್ಳಿ-14, ವಣಬಳ್ಳಾರಿ-15 ಸೇರಿದಂತೆ 736 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಯಲಬುರ್ಗಾ ತಾಲ್ಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಮುಧೋಳ-18, ಕರಮುಡಿ-18, ಬಳೂಟಗಿ-18, ಬಂಡಿ-16, ಗೆದಿಗೇರಿ-21, ವಜ್ರಬಂಡಿ-19, ಹಿರೇಅರಳಿಹಳ್ಳಿ-21, ಮಾಟಲದಿನ್ನಿ-18, ಹಿರೇವಂಕಲಕುAಟಾ-21, ತಾಳಕೇರಿ-16, ಗಾಣದಾಳ-20, ಗುನ್ನಾಳ-21, ಬೇವೂರ-20, ವಣಗೇರಿ-14, ಮುರಡಿ-20, ಚಿಕ್ಕಮ್ಯಾಗೇರಿ-20, ಸಂಗನಾಳ-8, ಕಲ್ಲೂರು-09, ತುಮ್ಮುರಗುದ್ದಿ-14, ಬೋದೂರು-13 ಸೇರಿದಂತೆ ಒಟ್ಟು 345 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಕುಕನೂರು ತಾಲ್ಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಕುದರಿಮೋತಿ-16, ಹಿರೇಬೀಡನಾಳ-14, ಮಂಗಳೂರು-28, ಬಳಿಗೇರಿ-18, ಶಿರೂರು-19, ಬೆಣಕಲ್-13, ಭಾನಾಪುರ-14, ತಳಕಲ್-19, ಇಟಗಿ-15, ಬನ್ನಿಕೊಪ್ಪ-13, ಮಂಡಲಗೇರಿ-17, ಯರೇಹಂಚಿನಾಳ-17, ರಾಜೂರು-16, ನೆಲಜೇರಿ-10, ಮಸಬಹಂಚಿನಾಳ-11 ಸೇರಿದಂತೆ ಒಟ್ಟು 240 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error