ಕೊಪ್ಪಳ ಮತ ಎಣಿಕೆ : ಪೊಲೀಸ್ ಬಂದೋಬಸ್ತ್ ವಾಹನಗಳ ಸಂಚಾರ ಮಾರ್ಗ ಬದಲಾವಣೆ ಹಾಗೂ ಪಾರ್ಕಿಂಗ್ ವ್ಯವಸ್ಥೆ

ಕೊಪ್ಪಳ ಮೇ. :   ಕೊಪ್ಪಳ ಲೋಕಸಭಾ ಕ್ಷೆÃತ್ರದ ಮತ ಎಣಿಕೆಯು ಮೇ. 23 ರಂದು ನಗರದ ಶ್ರಿÃ ಗವಿಸಿದ್ಧೆÃಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ನಡೆಯಲಿದ್ದು ಕೊಪ್ಪಳ ಜಿಲ್ಲಾ ಪೊಲೀಸ್‌ವತಿಯಿಂದ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಕೆ.ಸುಕುಮಾರ್ ರವರು ತಿಳಿಸಿದ್ದಾರೆ.
ಮತ ಎಣಿಕೆ ಸಮಯದಲ್ಲಿ ಗವಿಮಠ ರಸ್ತೆಗೆ ಬರುವ ದಿನನಿತ್ಯದ ವಾಹನಗಳ ಸಂಚಾರವನ್ನು ನಿರ್ಭಂಧಿಸಲಾಗಿದ್ದು, ಮತ ಎಣಿಕೆ ಕಾರ್ಯಕ್ಕೆ ಗಡಿಯಾರಕಂಭದ ಮೂಲಕ ಹಾಗೂ ಬಸವೇಶ್ವರ ಸರ್ಕಲ್ ಮೂಲಕ ಗಮಿಮಠದ ರಸ್ತೆ ಬರುವ ವಾಹನಗಳ ಸಂಚಾರ ಹಾಗೂ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.
ಪಾರ್ಕಿಂಗ್;
ಕೊಪ್ಪಳ ನಗರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಿಂದ ಮತ ಎಣಿಕೆ ಕೇಂದ್ರಕ್ಕೆ ಬರುವ ಸಾರ್ವಜನಿಕರ ನಾಲ್ಕು ಚಕ್ರ ಹಾಗೂ ದ್ವಿÃಚಕ್ರ ವಾಹನಗಳಿಗೆ ಎಪಿಎಮ್‌ಸಿ ಆವರಣದಲ್ಲಿ ಮತ್ತು ಮತ ಎಣಿಕಾ ಕರ್ತವ್ಯಕ್ಕೆ ಬರುವ ಅಧಿಕಾರಿ ಮತ್ತು ಸಿಬ್ಬಂದಿಗಳ ನಾಲ್ಕು ಚಕ್ರ ಹಾಗೂ ದ್ವಿÃಚಕ್ರ ವಾಹನಗಳಿಗೆ ಶಾರದಮ್ಮ ಕೊತಬಾಳ ಬಿ.ಬಿ.ಎಮ್ ಕಾಲೇಜಿನ ಮುಂಭಾಗದ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ವಾಹನಗಳ ಮಾರ್ಗ ಬದಲಾವಣೆ;
ಮೇ. 22 ರಂದು ಮಧ್ಯಾಹ್ನ 02 ಗಂಟೆಯಿಂದ ಮೇ. 24 ರಂದು ಬೆಳಿಗ್ಗೆ 06 ಗಂಟೆಯವರೆಗೆ ಮತ ಎಣಿಕೆಗೆ ಬರುವ ವಾಹನ ಹೊರತುಪಡಿಸಿ ಬೇರೆಲ್ಲಾ ಭಾರಿ ವಾಹನಗಳನ್ನು ಹಳೇ ಡಿಸಿ ಕ್ರಾಸ್, ಸಾಲಾರಜಂಗ್ ರಸ್ತೆ, ಶಾರದಾ ಟಾಕೀಸ್, ಗಡಿಯಾರ ಕಂಭದ ಮೂಲಕ ಅಥವಾ ಬಸ್ ನಿಲ್ದಾಣ, ಹಸನ್ ವೃತ್ತ, ಸಿಂಪಿ ಲಿಂಗಣ್ಣ ರಸ್ತೆ, ಗಡಿಯಾರ ಕಂಭದ ಮುಖಾಂತರ ಹಾಲವರ್ತಿ, ಸಿಂಧೋಗಿ ಕಡೆಗೆ ಹೋಗಬಹುದಾಗಿದೆ.
ಅದೇ ರೀತಿ ಮೇ. 22 ರಂದು ಮಧ್ಯಾಹ್ನ 02 ಗಂಟೆಯಿಂದ ಮೇ. 24 ರಂದು ಬೆಳಿಗ್ಗೆ 06 ಗಂಟೆಯವರೆಗೆ ಹಾಲವರ್ತಿ, ಕುಣಿಕೇರಿ ಮಾರ್ಗವಾಗಿ ನಗರಕ್ಕೆ ಆಗಮಿಸುವ ಎಲ್ಲಾ ವಾಹನಗಳು ಹಾಲವರ್ತಿ ಕ್ರಾಸ್, ಗಡಿಯಾರ ಕಂಭ, ಶಿವಾಜಿ ವೃತ್ತ, ಸಿಂಪಿ ಲಿಂಗಣ್ಣ ರಸ್ತೆಯ ಮುಖಾಂತರ ಹೋಗಬಹುದಾಗಿದೆ.
ವಿಜಯೋತ್ಸವ ಹಾಗೂ ರಾಜಕೀಯ ಸಭೆ ಸಮಾರಂಭಗಳ ನಿಷೇಧ;
ಮೇ. 23 ರಂದು ಕೊಪ್ಪಳ ಲೋಕಸಭಾ ಕ್ಷೆÃತ್ರದ ಮತ ಎಣಿಕೆಯು ಕಾರ್ಯವು ನಗರದ ಶ್ರಿÃ ಗವಿಸಿದ್ಧೆÃಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಜರುಗಲಿದ್ದು ಮತ ಎಣಿಕೆ ಸಮಯದಲ್ಲಿ ಹಾಗೂ ನಂತರದಲ್ಲಿ ಕೊಪ್ಪಳ ಜಿಲ್ಲೆಯಾದ್ಯಂತ ಪಟಾಕಿ ಸಿಡಿಸುವುದು, ವಿಜಯೋತ್ಸವ, ಮೆರವಣಿಗೆ, ರಾಜಕೀಯ ಸಭೆ, ಸಮಾರಂಭ, ವಾಹನ ಜಾಥಾ ಅಥವಾ ರ‍್ಯಾಲಿ ಮುಂತಾದ ಯಾವುದೇ ಚಟುವಟಿಕೆ ನಡೆಸುವುದು, ಸ್ಪೊÃಟಕ ಅಥವಾ ದಹನ ವಸ್ತುಗಳು, ಮಾರಕ ಆಯುಧಗಳನ್ನು ಹೊಂದಿರುವುದು ಅಥವಾ ಹಿಡಿದು ಓಡಾಡುವುದು ಮುಂತಾದವುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

Please follow and like us:
error