ಕೊಪ್ಪಳ ಜಿಲ್ಲೆಯ ಮೊದಲ ಹಂತದ ಮತದಾನ ಶಾಂತಿಯುತ

ಶಾಸಕ ರಾಘವೇಂದ್ರ ಹಿಟ್ನಾಳ, ಹಾಲಪ್ಪ ಆಚಾರ್ , ಗವಿಸಿದ್ದಪ್ಪ ಕರಡಿ ಮತದಾನ

ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹಿಟ್ನಾಳ ಗ್ರಾಮದಲ್ಲಿ ಕುಕನಪಳ್ಳಿ ಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಗವಿಸಿದ್ದಪ್ಪ ಕರಡಿ ಕುಟುಂಬ ಸಮೇತ ಮತದಾನ ಮಾಡಿದರು.

ಕೊಪ್ಪಳ ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ-2020ರ ನಿಮಿತ್ತ ನಡೆದ ಮೊದಲ ಹಂತದಲ್ಲಿ ಕೊಪ್ಪಳ, ಯಲಬುರ್ಗಾ ಮತ್ತು ಕುಕನೂರು ತಾಲ್ಲೂಕುಗಳಲ್ಲಿ ಮಂಗಳವಾರ ಸುಗಮ ಹಾಗೂ ಶಾಂತಯುತವಾಗಿ ಮತದಾನ ಪ್ರಕ್ರಿಯೆ ನೆರವೇರಿತು.

ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ  ಹಿಟ್ನಾಳ ಗ್ರಾಮದಲ್ಲಿ ಮತದಾನ ಮಾಡಿದರು. ಕುಕನಪಳ್ಳಿ ಯಲ್ಲಿ  ಜಿಲ್ಲಾ ಪಂಚಾಯತ್ ಸದಸ್ಯ ಗವಿಸಿದ್ದಪ್ಪ ಕರಡಿ ಕುಟುಂಬ ಸಮೇತ ಮತದಾನ ಮಾಡಿದರು.

ಮತದಾನ ನಡೆಯುವ ಮೂರು ತಾಲ್ಲೂಕುಗಳಲ್ಲಿನ ಎಲ್ಲ ಮತಗಟ್ಟೆಗಳನ್ನು ಸ್ಯಾನಿಟೈಸ್ ಮಾಡಲಾಗಿತ್ತು. ಮತದಾನ ಕೇಂದ್ರಕ್ಕೆ ಆಗಮಿಸಿದ ಎಲ್ಲ ಮತದಾರರಿಗೆ ಥರ್ಮಲ್ ಸ್ಕಾö್ಯನಿಂಗ್ ಮಾಡಲಾಗಿತ್ತು. ಮಾಸ್ಕ್ ಕಡ್ಡಾಯಗೊಳಿಸಲಾಗಿತ್ತು. ಹಾಗಾಗಿ ಎಲ್ಲ ಮತದಾರರು ಮಾಸ್ಕ್ ಧರಿಸಿಕೊಂಡು ಮತ ಚಲಾಯಿಸಿದರು.
ಮತದಾನ ಕೇಂದ್ರಗಳ ಸುತ್ತಮುತ್ತಲ್ಲೂ ನಿಷೇಧಾಜ್ಞೆ ಜಾರಿ ಗೊಳಿಸಲಾಗಿತ್ತು. ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಸರತಿಸಾಲಿನಲ್ಲಿ ಆಗಮಿಸಿದ ಮಹಿಳೆಯರು, ಪುರುಷರು, ಯುವಕ-ಯುವತಿಯರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ಅಂಗವಿಕಲರು ಹಾಗೂ ಹಿರಿಯ ನಾಗರಿಕರನ್ನು ಜಾಗರೂಕತೆಯಿಂದ ಕರೆತರುವ ದೃಷ್ಟಿಯಿಂದ ವ್ಹೀಲ್ ಛೇರ್ ವ್ಯವಸ್ಥೆ ಮಾಡಲಾಗಿತ್ತು.
ಕೊಪ್ಪಳ ತಾಲ್ಲೂಕಿನ ಹಲಗೇರಿ ಗ್ರಾಮದ ಮತಗಟ್ಟೆಯಲ್ಲಿ ಜಿಲ್ಲಾ ಚುನಾವಣಾ ವೀಕ್ಷಕರಾದ ಡಾ.ಬಿ.ಷಣ್ಮುಖ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕುಕನೂರು ತಾಲ್ಲೂಕಿನ ಭಾನಾಪುರ ಗ್ರಾಮದ ಮತಗಟ್ಟೆಯಲ್ಲಿ  ಕೊರೊನಾ ಭಯದ ನಡುವೆಯೂ 85ರ ಇಳಿ ವಯಸ್ಸಿನ ಅಡಿವೆಮ್ಮ ಮತದಾನಕ್ಕೆ ಆಗಮಿಸುವ ಮೂಲಕ ಇತರರಿಗೆ ಮಾದರಿಯಾದರು.
ಮಾದರಿ ಮತಗಟ್ಟೆಗಳು;
ಕುಕನೂರು ತಾಲ್ಲೂಕಿನ ನಿಟ್ಟಾಲಿ, ಗೌರಾಳ ಹಾಗೂ ಮಸಬಹಂಚಿನಾಳ ಗ್ರಾಮದ ನಾಲ್ಕು  ಮತಗಟ್ಟೆಗಳನ್ನು ಮಾದರಿ ಮತಗಟ್ಟೆಗಳನ್ನಾಗಿ ಮಾಡಲಾಗಿತ್ತು. ಈ ಮೂಲಕ ‘ಮತದಾರ ಸ್ನೇಹಿ’ ಮತ ಕೇಂದ್ರಗಳನ್ನಾಗಿ ಮಾರ್ಪಡಿಸಲಾಗಿತ್ತು.
ಈ ಕೇಂದ್ರಗಳಲ್ಲಿನ ಪ್ರವೇಶ ಧ್ವಾರಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನಿಂಗ್ ಹಾಗೂ ಉಚಿತ ಮಾಸ್ಕ್ ವಿತರಿಸಲಾಯಿತು. ಮೂರು ಕೇಂದ್ರಗಳಲ್ಲಿ ಅಂಗವಿಕಲರಿಗೆ ಹಾಗೂ ಹಿರಿಯ ನಾಗರಿಕರಿಗೆ ಪ್ರತ್ಯೇಕ ಮತದಾನ ವ್ಯವಸ್ಥೆ ಮಾಡಲಾಗಿತ್ತು. ಆಸನ ವ್ಯವಸ್ಥೆ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಲಾಗಿತ್ತು. ಸಿಬ್ಬಂದಿಗಳಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿಸಿದೆ ಎಂದು ಈ ಮಾದರಿ ಮತದಾನ ಕೇಂದ್ರಗಳ ಉಸ್ತುವಾರಿ ವಹಿಸಿದ ಪಿಡಿಓ ಮಹೇಶ ತಿಳಿಸಿದರು.

Please follow and like us:
error