ಕೊಪ್ಪಳ ಜಿಲ್ಲೆಯಲ್ಲಿ ಶಾಂತಿಯುತ ಮತದಾನ; ಶೇ. 80.86 ರಷ್ಟು ಮತ ಚಲಾವಣೆ

ವಿಧಾನ ಪರಿಷತ್ ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಚುನಾವಣೆ
: ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಮತಕ್ಷೇತ್ರಕ್ಕೆ ಇಂದು (ಅ.28 ರಂದು) ನಡೆದ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಶಾಂತಿಯುತ ಮತದಾನವಾಗಿದ್ದು, ಸ್ಥಾಪಿಸಲಾಗಿದ್ದ 20 ಮತದಾನ ಕೇಂದ್ರಗಳಲ್ಲಿ ಒಟ್ಟು 2,539 ಶಿಕ್ಷಕ ಮತದಾರರ ಪೈಕಿ 2,053 ಮತದಾರರು ಮತದಾನ ಮಾಡಿದ್ದು ಶೇ.80.86 ರಷ್ಟು ಮತದಾನವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ ಅವರು ತಿಳಿಸಿದ್ದಾರೆ.
ಮತದಾನ ಕೇಂದ್ರಗಳ ವಿವರದನ್ವಯ ಗಂಗಾವತಿಯ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ 401 ಮತದಾರರಲ್ಲಿ 318 ಮತದಾರರು ಮತದಾನ ಮಾಡಿದ್ದು ಶೇ. 79.30 ರಷ್ಟು, ವೆಂಕಟಗಿರಿಯ ಗ್ರಾ.ಪಂ ಕಾರ್ಯಾಲಯದಲ್ಲಿ 58 ಮತದಾರರಲ್ಲಿ 41 ಮತದಾರರು ಮತದಾನ ಮಾಡಿದ್ದು ಶೇ.70.69 ರಷ್ಟು, ಮರಳಿಯ ಗ್ರಾ.ಪಂ.ಕಾರ್ಯಾಲಯದಲ್ಲಿ 55 ಮತದಾರರಲ್ಲಿ 44 ಮತದಾರರು ಮತದಾನ ಮಾಡಿದ್ದು ಶೇ.80 ರಷ್ಟು ಮತದಾನವಾಗಿದೆ.
ಕಾರಟಗಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಪಿ.ಯು. ವಿಭಾಗ ಕಟ್ಟಡದಲ್ಲಿ 120 ಮತದಾರರಲ್ಲಿ 88 ಮತದಾರರು ಮತದಾನ ಮಾಡಿದ್ದು ಶೇ.73.33 ರಷ್ಟು, ಸಿದ್ದಾಪುರದ ಗ್ರಾ.ಪಂ. ಕಾರ್ಯಾಲಯದಲ್ಲಿ 36 ಮತದಾರರಲ್ಲಿ 31 ಮತದಾರರು ಮತದಾನ ಮಾಡಿದ್ದು, ಶೇ.86.11 ರಷ್ಟು, ಕನಕಗಿರಿಯ ಉಪತಹಶೀಲ್ದಾರ ಕಚೇರಿಯಲ್ಲಿ 71 ಮತದಾರರಲ್ಲಿ 52 ಮತದಾರರು ಮತದಾನ ಮಾಡಿದ್ದು, ಶೇ.73.24 ರಷ್ಟು ಮತದಾನವಾಗಿದೆ.
ಕುಷ್ಟಗಿಯ ತಹಶೀಲ್ದಾರ ಕಚೇರಿಯ ಸಿಬ್ಬಂದಿ ಕೊಠಡಿಯಲ್ಲಿ 192 ಮತದಾರರಲ್ಲಿ 166 ಮತದಾರರು ಮತದಾನ ಮಾಡಿದ್ದು, ಶೇ.86.46 ರಷ್ಟು,, ಕುಷ್ಟಗಿಯ ತಹಶೀಲ್ದಾರ ಕಚೇರಿಯ ಸರ್ವೇ ಕಚೇರಿಯಲ್ಲಿ 81 ಮತದಾರರಲ್ಲಿ 68 ಮತದಾರರು ಮತದಾನ ಮಾಡಿದ್ದು, ಶೇ.83.95 ರಷ್ಟು, ಹನಮನಾಳದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 69 ಮತದಾರರಲ್ಲಿ 52 ಮತದಾರರು ಮತದಾನ ಮಾಡಿದ್ದು, ಶೇ.75.36 ರಷ್ಟು, ಹನಮಸಾಗರದ ಗ್ರಾ.ಪಂ. ಕಾರ್ಯಾಲಯದಲ್ಲಿ 101 ಮತದಾರರಲ್ಲಿ 84 ಮತದಾರರು ಮತದಾನ ಮಾಡಿದ್ದು, ಶೇ.83.17 ರಷ್ಟು, ತಾವರಗೇರಾ ಪಟ್ಟಣ ಪಂಚಾಯತ ಕಚೇರಿಯಲ್ಲಿ 73 ಮತದಾರರಲ್ಲಿ 56 ಮತದಾರರು ಮತದಾನ ಮಾಡಿದ್ದು, ಶೇ.76.71 ರಷ್ಟು ಮತದಾನವಾಗಿದೆ.
ಕುಕನೂರಿನ ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ 240 ಮತದಾರರಲ್ಲಿ 191 ಮತದಾರರು ಮತದಾನ ಮಾಡಿದ್ದು, ಶೇ.79.58 ರಷ್ಟು, ಮಂಗಳೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ(ಪೂರ್ವ ಭಾಗ)ಯಲ್ಲಿ 30 ಮತದಾರರಲ್ಲಿ 26 ಮತದಾರರು ಮತದಾನ ಮಾಡಿದ್ದು, ಶೇ.86.67 ರಷ್ಟು, ಯಲಬುರ್ಗಾದ ಸರ್ಕಾರಿ ಪಿ.ಯು.ಕಾಲೇಜ್(ಹೈಸ್ಕೂಲ್ ವಿಂಗ್) ಹೊಸ ಕಟ್ಟಡ(ದಕ್ಷಿಣ ಭಾಗ)ದಲ್ಲಿ 182 ಮತದಾರರಲ್ಲಿ 157 ಮತದಾರರು ಮತದಾನ ಮಾಡಿದ್ದು, ಶೇ.86.26 ರಷ್ಟು, ಹಿರೇವಂಕಲಕುAಟಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ(ಮಧ್ಯ ಭಾಗ)ಯಲ್ಲಿ 49 ಮತದಾರರಲ್ಲಿ 40 ಮತದಾರರು ಮತದಾನ ಮಾಡಿದ್ದು, ಶೇ.81.63 ರಷ್ಟು ಮತದಾನವಾಗಿದೆ.
ಅಳವಂಡಿಯ ಗ್ರಾ.ಪಂ. ಕಾರ್ಯಾಲಯದಲ್ಲಿ 72 ಮತದಾರರಲ್ಲಿ 58 ಮತದಾರರು ಮತದಾನ ಮಾಡಿದ್ದು, ಶೇ.80.56 ರಷ್ಟು, ಇರಕಲ್‌ಗಡಾ ಗ್ರಾ.ಪಂ. ಕಾರ್ಯಾಲಯದಲ್ಲಿ 51 ಮತದಾರರಲ್ಲಿ 40 ಮತದಾರರು ಮತದಾನ ಮಾಡಿದ್ದು, ಶೇ.78.43 ರಷ್ಟು, ಕೊಪ್ಪಳ ತಾ.ಪಂ.ಕಾರ್ಯಾಲಯದಲ್ಲಿ 537 ಮತದಾರರಲ್ಲಿ 442 ಮತದಾರರು ಮತದಾನ ಮಾಡಿದ್ದು, ಶೇ.82.31 ರಷ್ಟು, ಕೊಪ್ಪಳದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 56 ಮತದಾರರಲ್ಲಿ 41 ಮತದಾರರು ಮತದಾನ ಮಾಡಿದ್ದು, ಶೇ.73.21 ರಷ್ಟು, ಹಿಟ್ನಾಳ ಗ್ರಾ.ಪಂ.ಕಾರ್ಯಾಲಯದಲ್ಲಿ 65 ಮತದಾರರಲ್ಲಿ 58 ಮತದಾರರು ಮತದಾನ ಮಾಡಿದ್ದು, ಶೇ.89.23 ರಷ್ಟು ಮತದಾನವಾಗಿದೆ.
ಕಲಬುರಗಿ ವಿಭಾಗದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾನ ನಡೆದಿದ್ದು, ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿAದ ಯಾವುದೇ ಮತ ಚಲಾವಣೆ ನಡೆದಿಲ್ಲ ಎಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error