ಕೊಪ್ಪಳ ಜಿಲ್ಲೆಗೆ ಕಿಡ್ನಾಪ್ ಸಂಸ್ಕೃತಿಯನ್ನು ಬಿಜೆಪಿ ಪರಿಚಯಿಸಿದೆ-ಶಿವರಾಜ್ ತಂಗಡಗಿ ಆಕ್ರೋಶ

ಗಂಗಾವತಿ : ಕಾಂಗ್ರೆಸ್ ಸದಸ್ಯರು ‌ಸ್ವಯಂ ಪ್ರೇರಿತವಾಗಿ ಹೋಗಿದ್ದಾಗ ನಾವು ಸುಮ್ಮನಿದ್ದೆವು ಆಸೆ- ಆಮಿಷ ವೊಡ್ಡಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ನಿಂದ ಆಯ್ಕೆಯಾದ ಸದಸ್ಯರನ್ನು ಸೆಳೆದಾಗಲೂ ಸುಮ್ಮನಿದ್ದೆವು ಆದರೆ ಈಗ ಕೊಪ್ಪಳ ಜಿಲ್ಲೆಗೆ ಕಿಡ್ನಾಪ್ ಸಂಸ್ಕೃತಿಯನ್ನು ಬಿಜೆಪಿ ಪರಿಚಯಿಸಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಶಿವರಾಜ ತಂಗಡಗಿ ಆಕ್ರೊಶ ವ್ಯಕ್ತಪಡಿಸಿದ್ದಾರೆ.

ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರ ಗೃಹಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೀಗೆ ಗೂಂಡಾಗಿರಿ ಮಾಡಿದ್ರೆ ನಮ್ಮ ಕಾರ್ಯಕರ್ತರಿಗೂ ಬರುತ್ತೆ ನಿಮಗೆ ತಾಕತ್ತಿದ್ದರೆ ಮನೋಹರ ಸ್ವಾಮಿ ಮನವೊಲಿಸಿ ಕರೆದುಕೊಂಡು ಹೋಗಿ . ಅಧಿಕಾರಿಗಳು ತೀರಾ ಕೆಳಮಟ್ಟಕ್ಕೆ ಇಳಿದು ಕೆಲಸ ಮಾಡ್ತಿದ್ದಾರೆ ಕಾಂಗ್ರೆಸ್ ನಿಂದ ಆಯ್ಕೆಯಾದ ನಗರಸಭೆ ಸದಸ್ಯರಿಗೆ ತೊಂದರೆ ಕೊಡುವ ಕೆಲಸ ಪೊಲೀಸರು ಮಾಡುತ್ತಿದ್ದಾರೆ ಕೂಡಲೇ ಅಪಹರಣ ಮಾಡಿದ ಆರೋಪಿಗಳನ್ನು ಬಂಧಿಸಬೇಕು ನ.೨ಕ್ಕೆ ಸೂಕ್ತ ಭದ್ರತೆ ಒದಗಿಸಿ, ಚುನಾವಣೆ ನಡೆಸಬೇಕು ಬಿಜೆಪಿಯಿಂದ ಬಂದಿರೋ ಸದಸ್ಯೆಗೂ ಸೂಕ್ತ ಭದ್ರತೆ ನೀಡಬೇಕು ಕೊಪ್ಪಳದ ಬಿಜೆಪಿ ಶಾಸಕರು ಗೃಹ ಮಂತ್ರಿ ಮೇಲೆ ಒತ್ತಡ ಹಾಕ್ತಿದ್ದಾರೆ ಗೃಹ ಮಂತ್ರಿಗಳಿಂದ ಕೊಪ್ಪಳ ಎಸ್ಪಿಗೆ ಒತ್ತಾಡ ಹಾಕ್ತಿದ್ದಾರೆ ಗಂಗಾವತಿ ನಗರಸಭೆ ಬಿಜೆಪಿ ಪಾಲಾಗಲು ಹೆಲ್ಪ ಮಾಡುವಂತೆ ಒತ್ತಡ ಹಾಕ್ತಿದ್ದಾರೆ ಎಂದು ಆರೋಪ ಮಾಡಿದರು.

Please follow and like us:
error