ಕೊಪ್ಪಳದಲ್ಲಿ ಮೋದಿ ಅಲೆ : ಮತ್ತೊಮ್ಮೆ ಕರಡಿ ಕುಣಿತ

ಕೊಪ್ಪಳ : ಬಹಳಷ್ಟು ಜಿದ್ದಾಜಿದ್ದಿಯಿಂದ ಕೂಡಿದ್ದ ಈ ಸಲದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯಬೇರಿ ಬಾರಿಸಿದೆ. ಅಬ್ಬರಿಸಿದೆ. ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಎರಡನೇ ಬಾರಿ ಜಯಭೇರಿ ಬಾರಿಸಿದ್ದಾರೆ. ಸದ್ಯ ಕೊಪ್ಪಳದಲ್ಲಿ ಬಿಜಿಪಿ ಕಾರ್ಯಕರ್ತರಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದ್ದು ಪಟಾಕಿ ಸಿಡಿಸಿ ಸಿಹಿ ಹಂಚಿ ಪಟಾಕಿ ಸಿಡಿಸಿ ಜಿಲ್ಲೆಯಲ್ಲಿ ವಿಜಯೋತ್ಸವ ಆಚರಿಸುತ್ತಿದ್ದಾರೆ.

ಏಪ್ರಿಲ್ 23 ರಂದು ನಡೆದ‌‌ ಮತದಾನ‌ ನಂತರ  ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದ ಸಂಗಣ್ಣ ‌ಎರಡನೇ ಬಾರಿ ಗೆಲುವನ್ನು ಸಾಧಿಸಿದ್ದಾರೆ. ಬೆಳಿಗ್ಗೆ ಮತ ಎಣಿಕೆ‌‌ ಆರಂಭದಿಂದಲೂ ಕರಡಿ ಸಂಗಣ್ಣ ಮುನ್ನಡೆಯನ್ನು ಸಾಧಿಸಿದ್ದು, ಒಟ್ಟು 21 ಸುತ್ತುಗಳ ಮತ ಎಣಿಕೆಯಲ್ಲಿ‌‌ ಮುನ್ನಡೆ ಸಾಧಿಸಿ ಜಯಭೇರಿಯಾಗಿದ್ದಾರೆ. ಕೊಪ್ಪಳ, ಗಂಗಾವತಿ, ಯಲಬುರ್ಗಾ, ಕನಕಗಿರಿ, ಕುಷ್ಟಗಿ, ಸಿಂಧನೂರು, ಮಸ್ಕಿ ಸಿರುಗುಪ್ಪ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಸಿರುಗುಪ್ಪ ಒಂದೇ ಕ್ಷೇತ್ರ ಕಾಂಗ್ರೆಸ್ ಗೆ ಲೀಡ್ ಕೊಟ್ಟಿದೆ. ಉಳಿದ ಕ್ಷೇತ್ರಗಳು ಬಿಜೆಪಿಗೆ ಲೀಡ್ ಕೊಟ್ಟಿವೆ. ಅದರಲ್ಲಿ ಕೊಪ್ಪಳ ಅತ್ಯಂತ ಹೆಚ್ವು ಲೀಡ ಕೊಟ್ಟಿದ್ದು ಸಂಗಣ್ಣ ಗೆಲುವಿಗೆ ಕೊಪ್ಪಳ‌ ವಿಧಾನಸಭಾ ಕ್ಷೇತ್ರದ ಮತದಾರರು ಕಾರಣವಾಗಿದ್ದಾರೆ. ಜಯಶಾಲಿಯಾದ ನಂತರ ಕರಡಿ ಸಂಗಣ್ಣ ಮಾಧ್ಯಮದವರೊಂದಿಗೆ ಮಾತನಾಡಿ, ಮೋದಿ ಅಲೆ ಇರುವುದರಿಂದ ನನ್ನ‌ ಗೆಲವು ಸಾಧ್ಯವಾಯಿತು. ಮತದಾರರು ಬುದ್ಧಿವಂತರು. ಮೋದಿ ಹಾಗೂ ನನ್ನ ಅಭಿವೃದ್ಧಿ ಕೆಲಸಗಳನ್ನು‌ ನೋಡಿ ನನಗೆ ಮತ ಹಾಕಿ ಮತ್ತೊಮ್ಮೆ ಆಶೀರ್ವಾದ ನೀಡಿದ್ದಾರೆ ಅಂತ ಅಭಿಪ್ರಾಯ ವ್ಯಕ್ತಪಡಿಸಿದರು . ಕಳೆದ 2014 ರ ಲೋಕಸಭೆ ಚುನಾವಣೆಯಲ್ಲಿ ಒಟ್ಟು 486383 ಮತಗಳನ್ನು ಪಡೆಯು ಮೂಲಕ ಪ್ರತಿ ಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಹಿಟ್ನಾಳ ಅವರನ್ನು 32414 ಮತಗಳಿಂದ ಸೋಲಿಸಿದ್ದರು. 2019 ರ ಚುನಾವಣೆಯಲ್ಲಿ  ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ  584997 ಮತಗಳನ್ನು ಪಡೆದಿದದು,  ಪ್ರತಿ ಸ್ಪರ್ಧಿ ಕಾಂಗ್ರೆಸ್‌‌ನ ರಾಜಶೇಖರ ಹಿಟ್ನಾಳಗೆ 547573 ಮತಗಳನ್ನು ಪಡೆದಿದ್ದಾರೆ. ಸಂಗಣ್ಣ ಕರಡಿ 37424 ಅಂತರದಲ್ಲಿ ಮತ್ತೊಮ್ಮೆ ಭೇರಿ ಸಾಧಿಸಿದ್ದಾರೆ.

ಈ ಸಲದ ಗೆಲವು ಸುಲಭವಲ್ಲ ಎನ್ನುವಂತಹ ಮಾತುಗಳು ಕೇಳಿಬಂದಿದ್ದರೂ ಕೊನೆಗೆ ಮತದಾರ ಸಂಗಣ್ಣವರ ಕೈ ಹಿಡಿದಿದ್ದಾನೆ. ಎರಡನೇ ಬಾರೀ ಲೋಕಸಭೆಗೆ ಸಂಗಣ್ಣ ಕರಡಿ ಆಯ್ಕೆಯಾಗಿದ್ಧಾರೆ.

ಮತ ಎಣಿಕೆ ಕಾರ್ಯವೂ ಯಾವುದೇ ಗದ್ದಲ ಗಲಾಟೆ ಇಲ್ಲದೇ ಶಾಂತಿಯುತವಾಗಿ ನಡೆಯಿತು. ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. 100 ಮೀಟರ್ ಒಳಗೆ ಯಾವುದೇ ಸಂಭ್ರಮಾಚರಣೆಗಳು ನಡೆಯದಂತೆ ನಿಷೇಧ ಮಾಡಲಾಗಿತ್ತು. ಬೆಳಿಗ್ಗೆ ಸರಿಯಾಗಿ 8 :00 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಿ 12:00 ಗಂಟೆಗೆಲ್ಲ ಅಂಚೆ ಮತಗಳ ಮಾಹಿತಿ ಹೊರತು ಪಡಿಸಿ, ಇವಿಎಂನ‌ 21 ಸುತ್ತಿನ ಮಾಹಿತಿಯನ್ನು ನೀಡಲಾಯಿತು.‌ ಸುಸಜ್ಜಿತವಾಗಿ‌‌ ಕುಡಿಯು ನೀರಿನ ವ್ಯವಸ್ಥೆ, ಉಪಹಾರ, ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಮತ ಎಣಿಕೆ ವೀಕ್ಷಕರಾಗಿ ಐಎಎಸ್ ಅಧಿಕಾರಿಗಳಾದ ವಿಜಯ ಯಾದವ್, ಉರ್ಮಿಳಾ ಸುರೆಂದರ್ ಶುಕ್ಲಾರನ್ನು ನೇಮಿಸಲಾಗಿತ್ತು. ಇನ್ನು‌ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಪಿ. ಎಸ್ಪಿ ರೇಣುಕಾ ಎಸ್ ಕುಮಾರ ಮತ ಎಣಿಕೆ ಕಾರ್ಯವನ್ನು ಯಾವುದೇ ಗೊಂದಲಗಳು‌ ನಡೆಯದಂತೆ ಅಚ್ಚುಕಟ್ಟಾಗಿ ನಡೆಸಿ ಸಮಯಕ್ಕೆ‌ ಸರಿಯಾಗಿ ಫಲಿತಾಂಶ ನೀಡಿದರು.

Please follow and like us:
error