ಕೊಪ್ಪಳದಲ್ಲಿ ಮೈತ್ರಿ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಗೆಲುವು ಖಚಿತ : ಶಾಸಕ ಹಿಟ್ನಾಳ

ಕೊಪ್ಪಳ, ಎ. ೧೫: ಬಿಜೆಪಿ ಮೋದಿ ಹೆಸರಲ್ಲಿ ದೊಡ್ಡ ಭರವಸೆಗಳನ್ನು ನೀಡಿ, ಒಂದನ್ನೂ ಈಡೇರಿಸಿಲ್ಲ, ಎಲ್ಲಾ ವರ್ಗದ ಜನರಿಗೆ ಸಮಾನ ಅವಕಾಶ ನೀಡುವ ಪಕ್ಷ ದೇಶದಲ್ಲಿ ಕಾಂಗ್ರೆಸ್ ಮಾತ್ರವೇ ಆಗಿದ್ದು, ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಮತ್ತು ಮೈತ್ರಿ ಸರಕಾರಗಳ ಸಾಧನೆಗಳಿಂದ ಗೆಲುವು ಖಚಿತ ಎಂದು ಶಾಸಕ, ಸಂಸದೀಯ ಕಾರ್ಯದರ್ಶಿ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.
ಅವರು ಕೊಪ್ಪಳ ಲೋಕಸಭಾ ಚುನಾವಣೆ ನಿಮಿತ್ಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ. ರಾಜಶೇಖರ್ ಹಿಟ್ನಾಳ ಪರವಾಗಿ ಮತಯಾಚನೆ ಸಲುವಾಗಿ ಕೊಪ್ಪಳ ನಗರದ ವಿವಿಧ ಕಡೆಗಳಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಅವರು ಹೇಳಿದ ಅಷ್ಟೂ ಸುಳ್ಳಿನಿಂದ ಅವರು ನಿರ್ನಾಮವಾಗುತ್ತಾರೆ ಎಂದರು. ಸುಭದ್ರ ಸರಕಾರ ನೀಡುವ ಕಾಂಗ್ರೆಸ್‌ನಿಂದ ಮಾತ್ರ ಸರ್ವರ ಹಿತ ಕಾಪಾಡಲು ಸಾಧ್ಯ ಅದಕ್ಕಾಗಿ ಕಾಂಗ್ರೆಸ್ ಬೆಂಬಲಿಸಿ, ೧೬೫ ಭರವೆಗಳನ್ನು ಕೊಟ್ಟ ಕಾಂಗ್ರೆಸ್ ಸರಕಾರ ಅದಷ್ಟನ್ನೂ ಈಡೇರಿಸಿವೆ, ಆದರೆ ಜನರಿಗೆ ಅವುಗಳನನ್ನು ತಿಳಿಸಲು ಹಿಂದೆ ಬಿದ್ದಿದ್ದು, ಈಗ ಜನರಿಗೇ ಅರಿವಾಗಿದೆ, ಮೋದಿಯ ಸುಳ್ಳಿನ ಭಾವನಾತ್ಮಕ ಮತ್ತು ಧರ್ಮ ಒಡೆಯುವ ಭಾಷಣದಿಂದ ಏನೂ ಆಗುವದಿಲ್ಲ, ಕಾಂಗ್ರೆಸ್ ಬೆಂಬಲಿಸಿದಲ್ಲಿ ಪ್ರತಿ ವರ್ಷ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ೭೨ ಸಾವಿರ ಕೊಡುವ ಭರವಸೆ ಜೊತೆಗೆ ಉದ್ಯೋಗ ಸೃಷ್ಟಿ ಮಾಡಲಾಗುವದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೊಪ್ಪಳ ನಗರಸಭೆ ಸದಸ್ಯ ಅಮ್ಜದ್ ಪಟೇಲ್, ಕಾಂಗ್ರೆಸ್ ಮಾಡಿದ ಸೇವೆ ಮತ್ತು ಜನಪರ ಕೆಲಸಗಳನ್ನು ಜನರು ಮೆಚ್ಚಿಕೊಂಡಿದ್ದಾರೆ, ಅವುಗಳನ್ನು ಕಾಂಗ್ರೆಸ್ ಮಾಡಿದೆ ಎಂಬುದನ್ನು ತಿಳಿಸಬೇಕಿದೆ, ಸುಳ್ಳು ಹೇಳುವ ಮೂಲಕ ಬಿಜೆಪಿ ಜನರಿಗೆ ಮೋಸ ಮಾಡಿದೆ, ಸಿದ್ದರಾಮಯ್ಯನವರ ಸರಕಾರ, ಯುಪಿಎ ೧೦ ವರ್ಷದ ಸರಕಾರ ಮಾಡಿದ ಸಾಧನೆ ಮತ್ತು ಸೇವೆಗಳ ಮೂಲಕ ಕಾಂಗ್ರೆಸ್ ಗೆಲ್ಲಲಿದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಮಹೇಂದ್ರ ಛೋಪ್ರಾ ಮಾತನಾಡಿ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳುವ ಮೋದಿ, ತಾವು ಸುಳ್ಳು ಹೇಳುತ್ತಿದ್ದೇವೆ ಎಂದು ಗೊತ್ತಿದ್ದರೂ, ಆ ರೀತಿ ಮಾತನಾಡುತ್ತಿರುವದು ಲಜ್ಜೆಗೇಡಿತನವಲ್ಲದೆ ಮತ್ತೇನು ಎಂದು ಹೇಳಿದ ಒಂದು ಮಾತನ್ನು ನಡೆಸಿಕೊಳ್ಳದೆ ಇವತ್ತು ಜನರಿಗೆ ಬೇಡವಾದ ವಿಷಯಗಳನ್ನು ಅವರ ತಲೆಗೆ ತುರುಕಿ ಮಜಾ ನೋಡುತ್ತಿರುವ ಶೋಕಿಲಾಲಾ ಎಂದರು. ಜಿಎಸ್ಟಿ ದೇಶದಲ್ಲಿಯೇ ದುಬಾರಿ ಟ್ಯಾಕ್ಸ್ ಆಗಿದೆ, ನೇರವಾಗಿ ಬಡವರಿಗೆ ತೊಂದರೆ ಕೊಡುವ ಉದ್ದೇಶ ಹೊಂದಿದ್ದಾರೆ. ಮನುವಾದಿ ಅಜೆಂಡಾ ಇಟ್ಟುಕೊಂಡಿರುವ ಬಿಜೆಪಿ ಸಂವಿಧಾನ ಬದಲಿಸಿ ಮತ್ತೆ ವರ್ಣಾಶ್ರಮ ಪದ್ಧತಿ ತರುವ ಹುನ್ನಾರ ಹೊಂದಿದ್ದಾರೆ. ಜನ ಈಗ ಎಚ್ಚೆತ್ತುಕೊಳ್ಳಬೇಕು ಇಲ್ಲವಾದಲ್ಲಿ ಅದರಿಂದ ದೊಡ್ಡ ಅಪಾಯವಿದೆ ಎಂದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಎಸ್. ಬಿ. ನಾಗರಳ್ಳಿ, ಮಾಜಿ ಕುಡಾ ಅಧ್ಯಕ್ಷ ಜುಲ್ಲು ಖಾದರ್ ಖಾದ್ರಿ, ಕೊಪ್ಪಳ ನಗರಸಭೆ ಸದಸ್ಯರುಗಳಾದ ಅಕ್ಬರ್ ಪಾಶಾ ಪಲ್ಟನ್, ಮುತ್ತುರಾಜ ಕುಷ್ಟಗಿ, ಸಿದ್ದು ಮ್ಯಾಗೇರಿ, ಗುರುಬಸವರಾಜ ಹಲಗೇರಿ, ಅಜೀಮ್ ಅತ್ತಾರ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಇಟ್ಟಂಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಭೂಮರಡ್ಡಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪಾಶಾ, ಕೆಪಿಸಿಸಿ ಕಾರ್ಮಿಕ ರಾಜ್ಯ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ, ಜಿಲ್ಲಾ ವಕ್ತಾರ ಕುರಗೋಡ ರವಿ ಯಾದವ್, ಮುಖಂಡರುಗಳಾದ ಮಂಜುನಾಥ ಗಾಳಿ, ಮಾರುತಿ ಕಾರಟಗಿ, ಮಾನ್ವಿ ಪಾಶಾ, ಬಾಳಪ್ಪ ಬಾರಕೇರ, ಮೌಲಾಹುಸೇನ್ ಜಮೇದಾರ್, ಚಾಂದ ಪಾಷ ಕಿಲ್ಲೇದಾರ, ಸಲೀಂ ಅಳವಂಡಿ, ಫುರ್‌ಖಾನ್ ಶೇಖ್, ಮೆಹಬೂಬ ಅರಗಂಜಿ ಇತರರು ಇದ್ದರು.

Please follow and like us:
error