ಡಿ. 22ರಂದು ಗ್ರಾಮ ಪಂಚಾಯತ್ ಮೊದಲನೇ ಹಂತದ ಚುನಾವಣೆ
ಕೊಪ್ಪಳ,
: ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಗಳು-2020ರ ನಿಮಿತ್ತ ಡಿಸೆಂಬರ್. 22 ರಂದು ಮೊದಲನೇ ಹಂತದಲ್ಲಿ ಮತದಾನ ಜರುಗಲಿದ್ದು, ವಿವಿಧ ಭೂತ್ಗಳಿಗೆ ನೇಮಕಗೊಂಡ ಸಿಬ್ಬಂದಿಗಳಿಗೆ ಮತಗಟ್ಟೆಯ ಸಾಮಗ್ರಿಯನ್ನು ವಿತರಿಸುವ ಪ್ರಮುಖ ಘಟ್ಟವಾಗಿರುವ ಮಸ್ಟರಿಂಗ್ ಕಾರ್ಯ ಕೊಪ್ಪಳ ನಗರದ ಗವಿಸಿದ್ಧೇಶ್ವರ ಪ್ರೌಢ ಶಾಲಾ ಆವರಣದಲ್ಲಿ ಸೋಮವಾರದಂದು (ಡಿ.21) ಅಚ್ಚುಕಟ್ಟಾಗಿ ನೆರವೇರಿತು.
ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಮಸ್ಟರಿಂಗ್ ಕಾರ್ಯ ನಡೆಯುವ ಸ್ಥಳಕ್ಕೆ ಭೇಟಿ ನೀಡಿ, ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಅಲ್ಲದೇ ಮತಗಟ್ಟೆಗೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಹಾಗೂ ಮತಗಟ್ಟೆಯ ಸಾಮಾಗ್ರಿಗಳನ್ನು ತಪ್ಪದೇ ತೆಗೆದುಕೊಂಡು ಹೋಗಿ, ಜಾಗೃತಿಯಿಂದ ಚುನಾವಣಾ ಕಾರ್ಯವನ್ನು ನಿರ್ವಹಿಸಬೇಕು. ಚುನಾವಣೆಗೆ ಸಂಬAಧಿಸಿದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುವಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸೂಚಿಸಿದರು.
ರಾಜ್ಯ ಚುನಾವಣಾ ಆಯೋಗದಿಂದ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಗಳು-2020ರ ನಿಮಿತ್ತ ಕೊಪ್ಪಳ ಜಿಲ್ಲೆಯ ಮೊದಲ ಹಂತದ ಚುನಾವಣೆ ನಡೆಯುವ ಕೊಪ್ಪಳ, ಯಲಬುರ್ಗಾ ಮತ್ತು ಕುಕನೂರು ತಾಲ್ಲೂಕುಗಳಲ್ಲಿನ 73 ಗ್ರಾಮ ಪಂಚಾಯತಿಗಳ 593 ಮತಗಟ್ಟೆಗಳಿಗೆ ನಿಯೋಜನೆಗೊಂಡ 652 ಪ್ರಿಸೈಡಿಂಗ್ ಅಧಿಕಾರಿಗಳು, 718 ಮೊದಲನೇ ಪೋಲಿಂಗ್ ಅಧಿಕಾರಿಗಳು, 789 ಎರಡನೇ ಪೋಲಿಂಗ್ ಅಧಿಕಾರಿಗಳು, 868 ಮೂರನೇ ಪೋಲಿಂಗ್ ಅಧಿಕಾರಿಗಳು ಹಾಗೂ 593 ಡಿ-ದರ್ಜೆ ನೌಕರರು ಸೇರಿದಂತೆ ಒಟ್ಟು 3,620 ಸಿಬ್ಬಂದಿಗಳು ಮತಗಟ್ಟೆಯ ಸಾಮಾಗ್ರಿಗಳ ಸಮೇತರಾಗಿ ಬಸ್ ಮೂಲಕವಾಗಿ ಕರ್ತವ್ಯಕ್ಕೆ ಪ್ರಯಾಣ ಬೆಳೆಸಿದರು. ಮೊದಲನೇ ಹಂತದ ಚುನಾವಣೆ ನಡೆಯುವ 3 ತಾಲ್ಲೂಕಿಗೆ ತಲಾ 1 ಎಂಸಿಸಿ ತಂಡವನ್ನು ನಿಯೋಜನೆಗೊಳಿಸಲಾಗಿದೆ.
ಮೊದಲನೇ ಹಂತದ ಚುಣಾವಣೆ ನಡೆಯುವ ಕೊಪ್ಪಳ ತಾಲ್ಲೂಕಿನ 38 ಗ್ರಾಮ ಪಂಚಾಯಿತಿಗಳ 328 ಮತಗಟ್ಟೆಗಳಿಗೆ 361 ಪ್ರಿಸೈಡಿಂಗ್ ಅಧಿಕಾರಿಗಳು, 397 ಮೊದಲನೇ ಪೋಲಿಂಗ್ ಅಧಿಕಾರಿಗಳು, 437 ಎರಡನೇ ಪೋಲಿಂಗ್ ಅಧಿಕಾರಿಗಳು, 480 ಮೂರನೇ ಪೋಲಿಂಗ್ ಅಧಿಕಾರಿಗಳು ಹಾಗೂ 328 ಡಿ-ದರ್ಜೆ ನೌಕರರು ಒಟ್ಟು 2002 ಸಿಬ್ಬಂದಿಗಳು ಕರ್ತವ್ಯಕ್ಕೆ ತೆರಳಿದರು. 44 ಸೆಕ್ಟರ್ ಅಧಿಕಾರಿಗಳೂ ಕೂಡಾ ಕಾರ್ಯಪ್ರವೃತ್ತರಾದರು.
ಯಲಬುರ್ಗಾ ತಾಲ್ಲೂಕಿನ 20 ಗ್ರಾಮ ಪಂಚಾಯಿತಿಗಳ 157 ಮತಗಟ್ಟೆಗಳಿಗೆ 173 ಪ್ರಿಸೈಡಿಂಗ್ ಅಧಿಕಾರಿಗಳು, 190 ಮೊದಲನೇ ಪೋಲಿಂಗ್ ಅಧಿಕಾರಿಗಳು, 209 ಎರಡನೇ ಪೋಲಿಂಗ್ ಅಧಿಕಾರಿಗಳು, 230 ಮೂರನೇ ಪೋಲಿಂಗ್ ಅಧಿಕಾರಿಗಳು ಹಾಗೂ 157 ಡಿ-ದರ್ಜೆ ನೌಕರರು ಒಟ್ಟು 959 ಸಿಬ್ಬಂದಿಗಳು ಕರ್ತವ್ಯಕ್ಕೆ ನಿಯುಕ್ತಿಗೊಂಡರು. 20 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಕುಕನೂರು ತಾಲ್ಲೂಕಿನ 20 ಗ್ರಾಮ ಪಂಚಾಯಿತಿಗಳ 108 ಮತಗಟ್ಟೆಗಳಿಗೆ 119 ಪ್ರಿಸೈಡಿಂಗ್ ಅಧಿಕಾರಿಗಳು, 131 ಮೊದಲನೇ ಪೋಲಿಂಗ್ ಅಧಿಕಾರಿಗಳು, 144 ಎರಡನೇ ಪೋಲಿಂಗ್ ಅಧಿಕಾರಿಗಳು, 158 ಮೂರನೇ ಪೋಲಿಂಗ್ ಅಧಿಕಾರಿಗಳು ಹಾಗೂ 108 ಡಿ-ದರ್ಜೆ ನೌಕರರು ಒಟ್ಟು 659 ಸಿಬ್ಬಂದಿಗಳು ಕರ್ತವ್ಯಕ್ಕೆ ಪ್ರಯಾಣ ಬೆಳೆಸಿದರು. ಅಲ್ಲದೇ 16 ಸೆಕ್ಟರ್ ಅಧಿಕಾರಿಗಳು ನಿಯೋಜನೆಗೊಂಡರು.
ಮತಗಟ್ಟೆಗಳಿಗೆ ಸೂಕ್ತ ಪೊಲೀಸ್ ಬಂದೋಬಸ್ತ್;
ಮೊದಲನೇ ಹಂತದ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ನಡೆಯುವ ಮತಗಟ್ಟೆಗಳಿಗೆ ಸೂಕ್ತ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ. ಕೊಪ್ಪಳ, ಯಲಬುರ್ಗಾ ಮತ್ತು ಕುಕನೂರು ತಾಲ್ಲೂಕುಗಳಲ್ಲಿನ ಒಟ್ಟು 593 ಮತಗಟ್ಟೆಗಳಿಗೆ 3 ಡಿಎಸ್ಪಿ, 8 ಜನ ಸಿಪಿಐ, 12 ಜನ ಪಿಎಸ್ಐ, 35 ಜನ ಎಎಸ್ಐ, 159 ಮುಖ್ಯ ಪೇದೆಗಳು, 271 ಪೊಲೀಸ್ ಪೇದೆಗಳು ಹಾಗೂ 290 ಗೃಹ ರಕ್ಷಕ ದಳದ ಸಿಬ್ಬಂದಿಗಳು ಸೇರಿ ಒಟ್ಟು 778 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಒಟ್ಟು ಅಲ್ಲದೇ ಪ್ರತಿ ತಾಲ್ಲೂಕಿಗೆ 3 ಡಿಎಆರ್ ತುಕಡಿ ಹಾಗೂ 1 ಕೆಎಸ್ಆರ್ಪಿ ತುಕಡಿಯನ್ನು ನಿಯೋಜನೆ ಮಾಡಲಾಗಿದೆ. ಮೂರು ತಾಲ್ಲೂಕುಗಳಿಗೆ 35 ಗಸ್ತು ವಾಹನ ಸೇರಿದಂತೆ ಪ್ರತಿ ತಾಲ್ಲೂಕಿಗೆ 1 ಕ್ಯೂಆರ್ಟಿ(ಕ್ವಿಕ್ ರಿಯಾಕ್ಷನ್ ಟೀಮ್) ತಂಡವನ್ನು ನಿಯುಕ್ತಿಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ ಮಾಹಿತಿ ನೀಡಿದರು.
ತಾಲ್ಲೂಕುವಾರು ವಿವರ ;
ಈ ಪೈಕಿ ಕೊಪ್ಪಳ ತಾಲ್ಲೂಕಿನ 328 ಮತಗಟ್ಟೆಗಳಿಗೆ 1 ಡಿಎಸ್ಪಿ, 3 ಜನ ಸಿಪಿಐ, 6 ಜನ ಪಿಎಸ್ಐ, 18 ಜನ ಎಎಸ್ಐ, 60 ಮುಖ್ಯ ಪೇದೆಗಳು, 149 ಪೊಲೀಸ್ ಪೇದೆಗಳು ಹಾಗೂ 150 ಗೃಹ ರಕ್ಷಕ ದಳದ ಸಿಬ್ಬಂದಿಗಳು ಸೇರಿ ಒಟ್ಟು 387 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.
ಯಲಬುರ್ಗಾ ತಾಲ್ಲೂಕಿನ 157 ಮತಗಟ್ಟೆಗಳಿಗೆ 1 ಡಿಎಸ್ಪಿ, 3 ಜನ ಸಿಪಿಐ, 3 ಜನ ಪಿಎಸ್ಐ, 10 ಜನ ಎಎಸ್ಐ, 54 ಮುಖ್ಯ ಪೇದೆಗಳು, 67 ಪೊಲೀಸ್ ಪೇದೆಗಳು ಹಾಗೂ 66 ಗೃಹ ರಕ್ಷಕ ದಳದ ಸಿಬ್ಬಂದಿಗಳು ಸೇರಿ ಒಟ್ಟು 204 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.
ಕುಕನೂರು ತಾಲ್ಲೂಕಿನ 108 ಮತಗಟ್ಟೆಗಳಿಗೆ 1 ಡಿಎಸ್ಪಿ, 2 ಜನ ಸಿಪಿಐ, 3 ಜನ ಪಿಎಸ್ಐ, 7 ಜನ ಎಎಸ್ಐ, 45 ಮುಖ್ಯ ಪೇದೆಗಳು, 55 ಪೊಲೀಸ್ ಪೇದೆಗಳು ಹಾಗೂ 74 ಗೃಹ ರಕ್ಷಕ ದಳದ ಸಿಬ್ಬಂದಿಗಳು ಸೇರಿ ಒಟ್ಟು 187 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ಟಿ.ಶ್ರೀಧರ್ ತಿಳಿಸಿದರು.