ಏ.೪ ರಂದು ೧೨ ನಾಮಪತ್ರಗಳ ಸಲ್ಲಿಕೆ : ಒಟ್ಟು ೨೬ ನಾಮಪತ್ರಗಳು ಸಲ್ಲಿಕೆ


ಕೊಪ್ಪಳ ಏ.೦೪ :  ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ಏ.೪ ರಂದು ಕೊನೆಯ ದಿನ ೧೨ ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ಭಾರತೀಯ ಜನತಾ ಪಾರ್ಟಿಯಿಂದ ಸಂಗಣ್ಣ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನಿಂದ ರಾಜಶೇಖರ ಎರಡು ನಾಮಪತ್ರ, ಸರ್ವ ಜನತಾ ಪಾರ್ಟಿಯಿಂದ ಬಿ.ಅನ್ನೋಜಿರಾವ, ಮಾರ್ಕ್ಸಿಸ್ಟ್ ಲೆನಿನಿಸ್ಟ್ ಪಾರ್ಟಿ ಆಫ್ ಇಂಡಿಯಾ (ರೆಡ್ ಫ್ಲ್ಯಾಗ್) ಬಸಲಿಂಗಪ್ಪ, ಪ್ರಗತಿಶೀಲ ಸಮಾಜವಾದಿ ಪಾರ್ಟಿ (ಲೋಹಿಯಾ) ಕಫೀಲುಲ್ ರಹೆಮಾನ್ .ಎಚ್, ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್-ಲೆನಿನಿಸ್ಟ್ ರೆಡ್‌ಸ್ಟಾರ್) ಹೇಮರಾಜ ವೀರಾಪೂರ, ಬಹುಜನ ಸಮಾಜ ಪಾರ್ಟಿಯಿಂದ ಶಿವಪುತ್ರಪ್ಪ ಮೆಣೆದಾಳ ಮತ್ತು ಪಕ್ಷೇತರರಾಗಿ ಮಲ್ಲಿಕಾರ್ಜುನ ಹಡಪದ, ಮೊಹ್ಮದ್ ನಜೀರುದ್ದೀನ್ ಮೂಲಿಮನಿ, ಪ.ಯ.ಗಣೇಸ, ಸುರೇಶ.ಹೆಚ್ ಇವರು ನಾಮಪತ್ರ ಸಲ್ಲಿಸಿದ್ದಾರೆ. ಇಲ್ಲಿಯವರೆಗೆ ಒಟ್ಟು ೨೬ ನಾಮಪತ್ರಗಳು ಸಲ್ಲಿಕೆಯಾಗಿವೆ.