ಎಲ್ಲಾ ರಂಗಗಳಲ್ಲಿ ಮೋದಿ ನೇತ್ರತ್ವದ ಸರಕಾರ ಸಂಪೂರ್ಣವಾಗಿ ವಿಫಲ- ಕೆ. ರಾಜಶೇಖರ ಹಿಟ್ನಾಳ

ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳರಿಂದ ಮತ ಯಾಚನೆ
ಕೊಪ್ಪಳ ೨೬- ಮೈತ್ರಿ ಪಕ್ಷದ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳರವರು ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ನಿವಾಸದ ಕಾರ್ಯಲಯದಲ್ಲಿ ಯಲಬುರ್ಗಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಬೇಟೆಯಾಗಿ ಮತಯಾಚನೆ ಮಾಡಿ ಬಳಿಕ ಮಾತನಾಡಿದ, ಕೆ ರಾಜಶೇಖರ ಹಿಟ್ನಾಳರವರು, ೫ವರ್ಷದ ಅವಧಿಯಲ್ಲಿ ಪ್ರದಾನಿ ಮೋದಿಯವರು ದೇಶದ ಜನತೆಗೆ ಸುಳ್ಳಿನ ಆಶ್ವಾಸನೆಯನ್ನು ಹೇಳುತ್ತಾ ಜನರಿಗೆ ಪಳ್ಳು ಭರವಸೆಗಳನ್ನು ನೀಡಿದ್ದಾರೆ, ಎಲ್ಲಾ ರಂಗಗಳಲ್ಲಿ ಮೋದಿಯವರ ನೇತ್ರತ್ವದ ಸರಕಾರ ಸಂಪೂರ್ಣವಾಗಿ ವಿಫಲಗೊಂಡಿದ್ದು, ದೇಶದ ಜನತೆ ಬದಲಾವಣೆ ಬಯಸುತ್ತಿದ್ದು ಕಾಂಗ್ರೆಸ್ ಪಕ್ಷಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ದೇಶದಲ್ಲಿ ಕಾಂಗ್ರೆಸ್ ಪಕ್ಷದ ಯುಪಿಎ ಸರಕಾರ ಅಧಿಕಾರಕ್ಕೆ ಬರುವುದು ಶತಸಿದ್ದ, ಈ ಬಾರಿ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲವು ನಿಶ್ಚಿತವೆಂದು ಹೇಳಿ ಪಕ್ಷಕ್ಕೆ ಬೆಂಬಳಿಸಲು ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಕರೆನೀಡಿದರು,
ಇದೇ ಸಂದರ್ಭದಲ್ಲಿ ಯಲಬುರ್ಗಾ ಕ್ಷೇತ್ರದ ಹಿರಿಯ ಮುಖಂಡರಾದ ಶ್ರೀಪಾದಪ್ಪ ಅಧಿಕಾರಿ ಮಾತನಾಡಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕರಡಿ ಸಂಗಣ್ಣರಿಗೆ ಬೆಂಬಲಿಸಿದ್ದು ಕ್ಷೇತ್ರಜನತೆಗೆ ತಮ್ಮ ತಪ್ಪಿನ ಅರಿವಾಗಿದೆ, ಕ್ಷೇತ್ರದ ಅಭಿವೃದ್ಧಿಗೆ ಶೂನ್ಯ ಸಾಧನೆ ಮಾಡಿದ ಬಿಜೆಪಿ ಅಭ್ಯರ್ಥಿಯನ್ನು ಸೂಲಿಸುವುದೆ ಪ್ರತಿಯೊಬ್ಬ ಮತದಾರನ ಗುರಿಯಾಗಬೇಕೆಂದು ಹೇಳಿದ್ದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಜಿಪಂ ಸದಸ್ಯರಾದ ಹನುಮಂತಗೌಡ ಪಾಟೀಲ್, ಮುಖಂಡರುಗಳಾದ ಯಂಕಣ್ಣ ಯರಾಶಿ, ಗುನ್ನಾಳ ರಾಘವೇಂದ್ರ ಜೋಶಿ, ರಾಮಣ್ಣ ಸಾಲಬಾವಿ, ಮಲ್ಲಿಕಾರ್ಜುನ ಗಿನ್ನಾಳ, ಮಹೇಶ ಹಳ್ಳಿ, ಅಕ್ತಾರ ಸಾಬ್ ಖಾಜಿ, ಅಪ್ಪಣ್ಣ ಜೋಶಿ, ಶಿವು ತಲ್ಲಕಲ್, ಭರಮಪ್ಪ ನಗರ, ವಕೆಂಟೇಶ ಕಂಪಸಾಗರ, ಫಯುಮ್ ಬಾಷ್, ಅಮ್ಜದ್ ಪಟೇಲ್, ಕಾಟನ್ ಪಾಷ, ಗವಿಸಿದ್ದಪ್ಪ ಚಿನ್ನೂರ, ಅಜೀಂ ಅತ್ತಾರ್, ನಿಂಗರಾಜ ಕಾಳಿ, ಮಂಜುನಾಥ ಗಾಳಿ, ಬಸಯ್ಯ ಹಿರೇಮಠ ಇನ್ನು ಅನೇಕ ನಾಯಕರು ಉಪಸ್ಥಿತರಿದ್ದರು.

Please follow and like us:
error