ಎಣಿಕೆಗೆ ಸಿದ್ದತೆ : “ಸುವಿಧಾ” ಮೂಲಕ ಫಲಿತಾಂಶ

ಲೋಕಸಭಾ ಚುನಾವಣೆ, ಮೇ 23 ರಂದು ಎಣಿಕೆಗೆ ಸಿದ್ದತೆ; ಜಿಲ್ಲಾ ಚುನಾವಣಾಧಿಕಾರಿ ಪಿ.ಸುನೀಲ್ ಕುಮಾರ್
ಕೊಪ್ಪಳ ಮೇ.  : ಕೊಪ್ಪಳ ಲೋಕಸಭಾ ಕ್ಷೇತ್ರದ ಮತ ಎಣಿಕೆಯು ಮೇ. 23 ರಂದು ಬೆಳಿಗ್ಗೆ 08 ಗಂಟೆಯಿಂದ ನಗರದ ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ನಡೆಯಲಿದ್ದು ಇದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳು ಪೂರ್ಣಗೊಂಡಿವೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದರು.
. ಕೊಪ್ಪಳ ಕ್ಷೇತ್ರದಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳು ಬರಲಿದ್ದು ಪ್ರತಿ ವಿಭಾನಸಭಾ ಕ್ಷೇತ್ರದಲ್ಲಿ 14 ಟೇಬಲ್‍ಗಳಲ್ಲಿ ಎಣಿಕೆ ನಡೆಯಲಿದೆ. ಮತ್ತು ಅಂಚೆ ಮತಗಳ ಎಣಿಕೆಯು ಚುನಾವಣಾಧಿಕಾರಿಗಳ ಕೊಠಡಿಯಲ್ಲಿ ನಾಲ್ಕು ಟೇಬಲ್‍ಗಳಲ್ಲಿ ನಡೆಯಲಿವೆ. ಬೆಳಗ್ಗೆ 7.45 ಕ್ಕೆ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಇವಿಎಂ ಭದ್ರತಾ ಕೊಠಡಿಗಳನ್ನು ತೆರೆಯಲಾಗುತ್ತದೆ ಎಂದರು.
ಮತ ಎಣಿಕೆ ಸಿಬ್ಬಂದಿ ಸೇರಿದಂತೆ ಅಧಿಕಾರಿಗಳು, ಎಣಿಕೆ ಏಜೆಂಟರಿಗೆ ಪ್ರವೇಶ ಪಾಸ್‍ಗಳನ್ನು ನೀಡಲಾಗಿದ್ದು ಪ್ರವೇಶ ಪತ್ರ ಇಲ್ಲದವರಿಗೆ ಯಾವುದೇ ಕಾರಣಕ್ಕೂ ಕೇಂದ್ರದ ಒಳಗೆ ಪ್ರವೇಶವಿರುವುದಿಲ್ಲ. ಮತ್ತು ಎಣಿಕೆಯ ಮಾಹಿತಿಯನ್ನು ಸುವಿಧಾ ಮೂಲಕ ಮತ್ತು ಸಾರ್ವಜನಿಕರಿಗೆ ಕೇಂದ್ರದ 100 ಮೀಟರ್ ಹೊರಗೆ ಎಲ್.ಇ.ಡಿ. ಪರದೆಯ ಮೂಲಕ ಮತ್ತು ಧ್ವನಿವರ್ಧಕದ ಮೂಲಕವೂ ವಿವರ ನೀಡಲಾಗುತ್ತದೆ.
ಎಣಿಕೆ ಕೇಂದ್ರದೊಳಗೆ ಚುನಾವಣಾ ವೀಕ್ಷಕರು ಮತ್ತು ಚುನಾವಣಾಧಿಕಾರಿಗಳಿಗೆ ಮಾತ್ರ ಮೊಬೈಲ್ ತರಲು ಅವಕಾಶ ಇದ್ದು ಬೇರೆ ಯಾರಿಗೂ ಮೊಬೈಲ್‍ಗೆ ಅವಕಾಶ ಇರುವುದಿಲ್ಲ. ಎಣಿಕಾ ಕೇಂದ್ರಕ್ಕೆ ಆಗಮಿಸುವ ಎಲ್ಲಾ ಸಿಬ್ಬಂದಿ ಮತ್ತು ಅಧಿಕಾರಿಗಳು ಮತ್ತು ಏಜೆಂಟರು ತಮ್ಮ ಮೊಬೈಲ್‍ಗಳನ್ನು ಕೇಂದ್ರಕ್ಕೆ ತರಬಾರದೆಂದು ತಿಳಿಸಿದರು.
ಮತ ಎಣಿಕಾ ಕೊಠಡಿಗಳು;
ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ವಿಧಾನಸಭಾ ಕ್ಷೇತ್ರಗಳಾದ ರಾಯಚೂರು ಜಿಲ್ಲೆಯ 58-ಸಿಂಧನೂರು, 59-ಮಸ್ಕಿ ಹಾಗೂ ಕೊಪ್ಪಳ ಜಿಲ್ಲೆಯ 61-ಕನಕಗಿರಿ, ಬಳ್ಳಾರಿ ಜಿಲ್ಲೆಯ 92-ಸಿರಗುಪ್ಪ ಕ್ಷೇತ್ರಗಳ ಮತ ಎಣಿಕೆಯು ಗವಿಸಿದ್ಧೇಶ್ವರ ಮಹಾವಿದ್ಯಾಲಯದ ನೆಲ ಮಹಡಿಯಲ್ಲಿ ಮತ್ತು 60-ಕುಷ್ಟಗಿ, 62- ಗಂಗಾವತಿ, 63-ಯಲಬುರ್ಗಾ ಹಾಗೂ 64-ಕೊಪ್ಪಳ ಕ್ಷೇತ್ರಗಳ ಮತ ಎಣಿಕೆಯು ಗವಿಸಿದ್ಧೇಶ್ವರ ಮಹಾವಿದ್ಯಾಲಯದ ಮೊದಲನೇ ಮಹಡಿಯಲ್ಲಿ ನಡೆಯಲಿದೆ.
ಮತ ಎಣಿಕಾ ಕೇಂದ್ರದಲ್ಲಿ  ಪ್ರತಿ ಟೇಬಲ್‍ಗೆ ಒಬ್ಬರು ಕೌಂಟಿಂಗ್ ಸೂಪರ್‍ವೈಜರ್ಸ್, ಒಬ್ಬರು ಕೌಂಟಿಂಗ್ ಅಸಿಸ್ಟೆಂಟ್ಸ್, ಮೈಕ್ರೋ ಅಬ್ಸರ್‍ವರ್ ಸಿಬ್ಬಂದಿ ಇರಲಿದ್ದು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್, 18 ಕೌಂಟಿಂಗ್ ಸೂಪರ್‍ವೈಜರ್ಸ್, 18 ಕೌಂಟಿಂಗ್ ಅಸಿಸ್ಟೆಂಟ್ಸ್ ಹಾಗೂ 18 ಮೈಕ್ರೋ ಅಬ್ಸರ್‍ವರ್ಸ್ ಒಟ್ಟು 68 ಸ್ಟಾಪ್. ಎಂಟೂ ವಿಧಾನಸಭಾ ಕ್ಷೇತ್ರಗಳು ಸೇರಿ ಒಟ್ಟು ಕೌಂಟಿಂಗ್ ಹಾಲ್‍ನಲ್ಲಿ 112 ಟೇಬಲ್, 144 ಕೌಂಟಿಂಗ್ ಸೂಪರ್‍ವೈಜರ್ಸ್, 144 ಕೌಂಟಿಂಗ್ ಅಸಿಸ್ಟೆಂಟ್ಸ್ ಹಾಗೂ 144 ಮೈಕ್ರೋ ಅಬ್ಸರ್‍ವರ್ಸ್ ಸೇರಿ ಒಟ್ಟು 569 ಸಿಬ್ಬಂದಿಗಳು ಕಾರ್ಯನಿರ್ವಹಿಸುವರು.
ಮತ ಎಣಿಕಾ ಏಜೆಂಟರ ನೇಮಕಾತಿ;
ಪ್ರತಿ ಅಭ್ಯರ್ಥಿಗಳಿಗೆ ಚುನಾವಣಾಧಿಕಾರಿಗಳ ಕೊಠಡಿಯಲ್ಲಿ ಅಂಚೆ ಮತಪತ್ರಗಳ ಎಣಿಕೆಗೆ 04+1, ವಿಧಾನಸಭಾ ಕ್ಷೇತ್ರದಲ್ಲಿನ ಎಣಿಕಾ ಟೇಬಲ್‍ಗಳಿಗೆ 14*8=112 ಸೇರಿ ಒಟ್ಟು 117 ಏಜೆಂಟರಗಳ ನೇಮಕ ಮಾಡಲಾಗಿದೆ.  ಅಭ್ಯರ್ಥಿಗಳಿಗೆ ಹಾಗೂ ಮತ ಎಣಿಕಾ ಏಜೆಂಟರಿಗೆ ಊಟ, ಉಪಹಾರ ಹಾಗೂ ಚಹಾಗಳ ವ್ಯವಸ್ಥೆಯನ್ನು ಪಾವತಿ ಆಧಾರದ ಮೇಲೆ, ಮತ ಎಣಿಕಾ ಕೇಂದ್ರದ ಆವರಣದಲ್ಲಿರುವ ಕ್ಯಾಂಟೀನ್‍ನಲ್ಲಿ ವ್ಯವಸ್ಥೆ ಮಾಡಲಾಗಿದೆ.
ವೀಕ್ಷಕರ ವಿವರ;
ಸಿಂಧನೂರು, ಮಸ್ಕಿ, ಕುಷ್ಟಗಿ ಹಾಗೂ ಕನಕಗಿರಿ ವಿಧಾನಸಭಾ ಕ್ಷೇತ್ರಗಳಿಗೆ ಸಾಮಾನ್ಯ ವೀಕ್ಷಕರಾಗಿದ್ದ ರಣ ವಿಜಯ್ ಯಾದವ್ ಭಾ.ಆ.ಸೇ. ಇವರನ್ನು ಮತ್ತು ಗಂಗಾವತಿ, ಯಲಬುರ್ಗಾ, ಕೊಪ್ಪಳ ಹಾಗೂ ಸಿರಗುಪ್ಪ ಕ್ಷೇತ್ರಗಳಿಗೆ ಉರ್ಮಿಳಾ ಸುರೇಂದರ್ ಶುಕ್ಲಾ ಭಾ.ಆ.ಸೇ. ಇವರನ್ನು  ಎಣಿಕಾ ವೀಕ್ಷಕರನ್ನಾಗಿ ಎಣಿಕಾ ಕಾರ್ಯದ ಸಲುವಾಗಿ ಚುನಾವಣಾ ಆಯೋಗದಿಂದ ನೇಮಿಸಲಾದೆ.
“ಸುವಿಧಾ” ಮೂಲಕ ಫಲಿತಾಂಶ;
ಮೇ. 23 ರಂದು ಬೆಳಿಗ್ಗೆ 07-45 ಗಂಟೆಗೆ ಸರಿಯಾಗಿ ಚುನಾವಣಾ ವೀಕ್ಷಕರ, ಮತ ಎಣಿಕಾ ವೀಕ್ಷಕರ ಸಮಕ್ಷಮದಲ್ಲಿ ಸ್ಟ್ರಾಂಕ್ ರೂಮ್ ತೆರೆಯಲಾಗುವುದು.  ಅಂಚೆ ಮತಪತ್ರಗಳ ಎಣಿಕೆಯನ್ನು ಸರಿಯಾಗಿ 08 ಗಂಟೆಗೆ ಚುನಾವಣಾಧಿಕಾರಿಗಳ ಕೊಠಡಿಯಲ್ಲಿ ಪ್ರಾರಂಭಿಸಲಾಗುವುದು.  ಹಾಗೂ ಎಲ್ಲಾ ಎಂಟು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವನ್ನು ಪ್ರಾರಂಭಿಸಲಾಗುವುದು.  ಪ್ರತಿ ಸುತ್ತಿನ ಎಣಿಕಾ ಫಲಿತಾಂಶವನ್ನು “ಸುವಿಧಾ” ಮೂಲಕ ಭಿತ್ತರಿಸಲಾಗುವುದು. ಸಾರ್ವಜನಿಕರಿಗಾಗಿ ಪ್ರತಿ ಸುತ್ತಿನ ಎಣಿಕಾ ಫಲಿತಾಂಶವನ್ನು ಮೈಕ್ ಮುಖಾಂತರ ಪ್ರಕಟಿಸಲಾಗುವುದು. ಹಾಗೂ ಎಲ್‍ಇಡಿ ಡಿಸ್‍ಪ್ಲೇ ಮುಖಾಂತರ ಪ್ರದರ್ಶಿಸಲಾಗುವುದು.
ಇವಿಎಮ್ ಮುಖಾಂತರ ಎಣಿಕಾ ಕಾರ್ಯ ಮುಕ್ತಾಯವಾದ ನಂತರ ಪ್ರತಿ ವಿಧಾನಸಭಾ ಕ್ಷೇತ್ರದ ಐದು ಮತಗಟ್ಟೆಗಳನ್ನು ಲಾಟರಿ ಮುಖಾಂತರ ಆಯ್ಕೆ ಮಾಡಿ ಎಣಿಕಾ ಕೊಠಡಿಯಲ್ಲಿ ಸ್ಥಾಪಿಸಲಾದ ವಿಸಿಬಿ (ವಿವಿ ಪ್ಯಾಟ್ ಕೌಂಟಿಂಗ್ ಬೂತ್) ನಲ್ಲಿ ಒಂದಾದ ನಂತರ ಒಂದರಂತೆ ವಿವಿ ಪ್ಯಾಟ್‍ಗಳ ಎಣಿಕಾ ಕಾರ್ಯವನ್ನು ಕೈಗೊಳ್ಳಲಾಗುವುದು.  ವಿವಿ ಪ್ಯಾಟ್‍ಗಳ ಎಣಿಕಾ ಕಾರ್ಯ ಮುಕ್ತಾಯವಾದ ನಂತರ ಫಲಿತಾಂಶವನ್ನು ಘೋಷಿಸಲಾಗುವುದು.  ಎಣಿಕಾ ಕಾರ್ಯದ ನಂತರ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಇವಿಎಮ್‍ಗಳನ್ನು ಮತ್ತು ಎಲ್ಲಾ ಚುನಾವಣಾ ದಾಖಲೆಗಳನ್ನು ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಇವಿಎಮ್ ಸ್ಟ್ರಾಂಗ್ ರೂಮ್‍ನಲ್ಲಿ ಶೇಖರಿಸಿಡಲಾಗುವುದು.  ಈ ಸ್ಟ್ರಾಂಗ್ ರೂಮ್‍ಗೆ 24*7 ಮಾದರಿಯಲ್ಲಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗುವುದು.  ಮತ ಎಣಿಕೆ ಕಾರ್ಯವು ಮುಕ್ತ, ಶಾಂತ ರೀತಿಯಿಂದ ಹಾಗೂ ನ್ಯಾಯಸಮ್ಮತವಾಗಿ ಕೈಗೊಳ್ಳಲು ಹಾಗೂ ಮತದಾನದ ಗೌಪ್ಯತೆಯನ್ನು ಕಾಪಾಡಲು ಸಹಕರಿಸಲು ಕೋರಲಾಗಿದೆ ಎಂದರು.
ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಕೊಪ್ಪಳ ಜಿಲ್ಲೆಯ 5 ಹಾಗೂ ರಾಯಚೂರು ಜಿಲ್ಲೆಯ ಎರಡು ಮತ್ತು ಬಳ್ಳಾರಿ ಜಿಲ್ಲೆಯ 1 ವಿಧಾನಸಭಾ ಕ್ಷೇತ್ರ ಸೇರಿ 8 ವಿಧಾನಸಭಾ ಕ್ಷೇತ್ರಗಳು ಈ ವ್ಯಾಪ್ತಿಗೆ ಬರಲಿವೆ. ಕ್ಷೇತ್ರದಲ್ಲಿ 862466 ಪುರುಷ, 873539 ಮಹಿಳೆಯರು ಹಾಗೂ 113 ಇತರೆ ಸೇರಿ 1736118 ಮತದಾರರಿದ್ದಾರೆ.
ಭದ್ರತೆ; ಜಿಲ್ಲಾ ರಕ್ಷಣಾಧಿಕಾರಿ ರೇಣುಕಾ ಕೆ.ಸುಕುಮಾರ್ ಮಾತನಾಡಿ ಎಣಿಕೆ ಕೇಂದ್ರ ಮತ್ತು ಸುತ್ತ ಮುತ್ತಾ ಭಾರಿ ಭದ್ರತೆಯನ್ನು ಒದಗಿಸಲಾಗುತ್ತಿದ್ದು ಭದ್ರತಾ ವ್ಯವಸ್ಥೆಯಲ್ಲಿ (4 ಟಿಯರ್ ಸೆಕ್ಯೂರೆಟಿ) ಇನ್ನೆರ್ ಕೇರ್: ಸಿಎಪಿಎಫ್ ಸೆಕ್ಷನ್, ಗೇಟ್: ಡಿಎಆರ್ ಪೊಲೀಸ್, ಪೆರಿಮೆಟರ್: ಸಿವಿಲ್ & ಆರ್ಮೆಡ್ ಪೊಲೀಸ್, ಒನ್ ಪ್ಲಾಟೂನ ಆಫ್ ಕೆಎಸ್‍ಆರ್‍ಪಿ. ತುಕಡಿಗಳಿರುತ್ತವೆ. ಮೇ 22 ರ ಸಂಜೆ 6 ಗಂಟೆಯಿಂದ ಮೇ 24 ರ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿದ್ದು ಈ ಅವಧಿಯಲ್ಲಿ ವಿಜಯೋತ್ಸವ ಆಚರಣೆ ಇರುವುದಿಲ್ಲ. ಈ ಬಗ್ಗೆ ಎಲ್ಲಾ ಪಕ್ಷಗಳ ರಾಜಕೀಯ ಮುಖಂಡರು, ಅಭ್ಯರ್ಥಿಗಳಿಗೂ ತಿಳಿಸಲಾಗುತ್ತದೆ ಹಾಗೂ ಮದ್ಯ ಮಾರಾಟವು ಇರುವುದಿಲ್ಲ ಎಂದರು.
ಅಭ್ಯರ್ಥಿಗಳ ವಿವರ;
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‍ನಿಂದ ಕೆ.ರಾಜಶೇಖರ ಬಸವರಾಜ ಹಿಟ್ನಾಳ, ಭಾರತಿಯ ಜನತಾ ಪಕ್ಷದಿಂದ ಸಂಗಣ್ಣ ಕರಡಿ, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಶರಣಯ್ಯ, ಮಾಕ್ರ್ಸಿಸ್ಟ್ ಲೆನಿನಿಸ್ಟ್ ಪಾರ್ಟಿ ಆಫ್ ಇಂಡಿಯಾ (ರೆಡ್‍ಫ್ಲ್ಯಾಗ್)ದಿಂದ ಬಸಲಿಂಗಪ್ಪ, ಸರ್ವ ಜನತಾ ಪಾರ್ಟಿಯಿಂದ ಬಿ.ಅನ್ನೋಜಿರಾವ, ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾಕ್ರ್ಸಿಸ್ಟ್-ಲೆನಿನಿಸ್ಟ್ ರೆಡ್‍ಸ್ಟಾರ್) ಹೇಮರಾಜ ವೀರಾಪೂರ, ಬಹುಜನ ಸಮಾಜ ಪಾರ್ಟಿಯಿಂದ ಶಿವಪುತ್ರಪ್ಪ ಮೆಣೆದಾಳ ಪಕ್ಷೇತರರಾಗಿ ಸುರೇಶ್, ನಾಗರಾಜ ಕಲಾಲ, ಬಾಲರಾಜ, ಸತೀಸರೆಡ್ಡಿ, ಮಲ್ಲಿಕಾರ್ಜುನ ಹಡಪದ, ಪ.ಯ.ಗಣೇಸ, ಸುರೇಶ.ಹೆಚ್ ಸೇರಿದಂತೆ ಒಟ್ಟು 14 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ಮತದಾನ ವಿವರ;
ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಏ. 23 ರಂದು ಚುನಾವಣೆ ನಡೆದಿದ್ದು ಕ್ಷೇತ್ರವಾರು ಮತದಾರರು ಹಾಗೂ ಮತಗಟ್ಟೆಗಳ ವಿವರದನ್ವಯ ರಾಯಚೂರು ಜಿಲ್ಲೆಯ 58-ಸಿಂಧನೂರು 269 ಮತಗಟ್ಟೆಗಳು, 116541 ಪುರುಷರು, 120890 ಮಹಿಳೆಯರು, 27 ಇತರೆ ಸೇರಿ ಒಟ್ಟು 237458 ಮತದಾರರಲ್ಲಿ 76017 ಪುರುಷ, 73827 ಮಹಿಳೆಯರು ಹಾಗೂ ಇತರೆ 3 ಸೇರಿ 149847 ಮತದಾನ ಮಾಡಿದ್ದು ಶೇ. 63.10 ರಷ್ಟು ಮತದಾನವಾಗಿದೆ.
ಮಸ್ಕಿ  ವಿಧಾನಸಭಾ ಕ್ಷೇತ್ರದಲ್ಲಿ 231 ಮತಗಟ್ಟೆ, 98610 ಪುರುಷ, 101979 ಮಹಿಳೆಯರು, 17 ಇತರೆ ಸೇರಿ ಒಟ್ಟು 200606 ಮತದಾರರು. ಇದರಲ್ಲಿ 63450 ಪುರುಷ, 61780 ಮಹಿಳೆಯರು ಹಾಗೂ 2 ಇತರೆ ಸೇರಿ 125232 ಮತದಾನ ಮಾಡಿ ಶೇ. 62.43 ರಷ್ಟು ಮತದಾನವಾಗಿದೆ.
ಕೊಪ್ಪಳ ಜಿಲ್ಲೆಯ 60-ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ 272 ಮತಗಟ್ಟೆ, 114820 ಪುರುಷರು, 113433 ಮಹಿಳೆಯರು, 16 ಇತರೆ ಸೇರಿ ಒಟ್ಟು 228269 ಮತದಾರರು. ಇದರಲ್ಲಿ 74238 ಪುರುಷ, 71041 ಮಹಿಳೆಯರು ಸೇರಿ 145279 ಮತದಾನ ಮಾಡಿ ಶೇ 63.64 ರಷ್ಟು ಪ್ರಗತಿಯಾಗಿದೆ.
ಕನಕಗಿರಿ 261 ಮತಗಟ್ಟೆ, 106147 ಪುರುಷರು, 108674 ಮಹಿಳೆಯರು, 9 ಇತರೆ ಸೇರಿ ಒಟ್ಟು 214830 ಮತದಾರರು. ಇದರಲ್ಲಿ 77512 ಪುರುಷ, 75685 ಮಹಿಳೆಯರು ಸೇರಿ 153197 ಮತದಾನ ಮಾಡಿದ್ದು ಶೇ 71.31 ರಷ್ಟು ಮತದಾನವಾಗಿದೆ.
ಗಂಗಾವತಿ 233 ಮತಗಟ್ಟೆ, 97763 ಪುರುಷರು, 98724 ಮಹಿಳೆಯರು, 3 ಇತರೆ ಸೇರಿ ಒಟ್ಟು 196490 ಮತದಾರರು. ಇದರಲ್ಲಿ 73268 ಪುರುಷ, 69757 ಮಹಿಳೆಯರು ಸೇರಿ 143025 ಜನರು ಮತದಾನ ಮಾಡಿ ಶೇ 72.79 ರಷ್ಟು ಮತದಾನವಾಗಿದೆ.
ಯಲಬುರ್ಗಾ 253 ಮತಗಟ್ಟೆಗಳಲ್ಲಿ 105950 ಪುರುಷರು, 104395 ಮಹಿಳೆಯರು, 4 ಇತರೆ ಸೇರಿ ಒಟ್ಟು 210349 ಮತದಾರರು. ಇದರಲ್ಲಿ 78737 ಪುರುಷ, 73745 ಮಹಿಳೆಯರು ಸೇರಿ 152482 ಜನರು ಮತ ಚಲಾಯಿಸಿ ಶೇ 72.49 ರಷ್ಟು ಮತದಾನವಾಗಿದೆ.
ಕೊಪ್ಪಳ ವಿಧಾನಸಭಾ ಕ್ಷೇತ್ರದ 288 ಮತಗಟ್ಟೆಗಳಲ್ಲಿ 119858 ಪುರುಷರು, 120391 ಮಹಿಳೆಯರು, 9 ಇತರೆ ಸೇರಿ ಒಟ್ಟು 240258 ಮತದಾರರು. ಇದರಲ್ಲಿ 91104 ಪುರುಷ, 85372 ಮಹಿಳೆಯರು ಸೇರಿ 176476 ಜನರು ಮತದಾನ ಮಾಡಿ ಶೇ 73.45 ರಷ್ಟು ಪ್ರಗತಿಯಾಗಿದೆ.
ಬಳ್ಳಾರಿ ಜಿಲ್ಲೆಯ ಸಿರಗುಪ್ಪ ವಿಧಾನಸಭಾ ಕ್ಷೇತ್ರದ 226 ಮತಗಟ್ಟೆಗಳಲ್ಲಿ  102777 ಪುರುಷರು, 105053 ಮಹಿಳೆಯರು ಹಾಗೂ 28 ಇತರೆ ಸೇರಿ ಒಟ್ಟು 207858 ಮತದಾರರಿದ್ದಾರೆ. ಈ ಪೈಕಿ 71955 ಪುರುಷ ಹಾಗೂ 70194 ಮಹಿಳೆಯರು, ಇತರೆ 3 ಮತದಾರರು ಸೇರಿ 142152 ಜನರು ಮತದಾನ ಮಾಡಿ ಶೇ 68.39 ರಷ್ಟು ಮತದಾನವಾಗಿದೆ.
ಒಟ್ಟು ಎಂಟು ಕ್ಷೇತ್ರಗಳಿಂದ 1736118 ಮತದಾರರ ಪೈಕಿ 606281 ಪುರುಷ ಹಾಗೂ 581401 ಮಹಿಳಾ ಮತದಾರರು ಮತ್ತು 8 ಇತರೆ ಸೇರಿ 1187690 ಜನರು ಮತದಾನ ಮಾಡಿದ್ದಾರೆ.

Please follow and like us:
error