ಉಪಚುನಾವಣೆ: 10 ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಬೆಂಗಳೂರು, ನ. 14: ಉಪಚುನಾವಣೆ ನಡೆಯಲಿರುವ ಹದಿನೈದು ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಿಗೆ ಜಾತ್ಯತೀತ ಜನತಾ ದಳ(ಜೆಡಿಎಸ್) ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಗುರುವಾರ ಬಿಡುಗಡೆ ಮಾಡಿದೆ.

ಯಲ್ಲಾಪುರ-ಎ.ಚೈತ್ರಾಗೌಡ, ಹಿರೇಕೆರೂರು-ಉಜನೆಪ್ಪ ಜಟ್ಟೆಪ್ಪ ಕೋಡಿಹಳ್ಳಿ, ರಾಣೆಬೆನ್ನೂರು-ಮಲ್ಲಿಕಾರ್ಜುನ ಹಲಗೇರಿ, ವಿಜಯನಗರ-ಎನ್.ಎಂ.ನಬೀ, ಚಿಕ್ಕಬಳ್ಳಾಪುರ-ಕೆ.ಪಿ.ಬಚ್ಚೇಗೌಡ, ಕೆ.ಆರ್.ಪುರ-ಸಿ.ಕೃಷ್ಣಮೂರ್ತಿ, ಯಶವಂತಪುರ- ಟಿ.ಎನ್.ಜವರಾಯಿಗೌಡ.

ಶಿವಾಜಿನಗರ-ತನ್ವೀರ್ ಅಹಮ್ಮದ್ ಉಲ್ಲಾ, ಹೊಸಕೋಟೆ-ಪಕ್ಷೇತರ ಅಭ್ಯರ್ಥಿಗೆ ಬೆಂಬಲ, ಕೆ.ಆರ್.ಪೇಟೆ-ದೇವರಾಜ್ ಹಾಗೂ ಮೈಸೂರು ಜಿಲ್ಲೆಯ ಹುಣಸೂರು ಕ್ಷೇತ್ರಕ್ಕೆ ಸೋಮಶೇಖರ್ ಅವರ ಹೆಸರನ್ನು ಘೋಷಿಸಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ತಿಳಿಸಿದ್ದಾರೆ.

Please follow and like us:
error