ಅಕ್ಟೊಬರ್. 15 ರವರೆಗೆ ಮತದಾರರ ಪಟ್ಟಿ ಪರಿಷ್ಕರಣೆ : ಪಿ.ಸುನೀಲ್ ಕುಮಾರ್

ಕೊಪ್ಪಳ ಸೆ. : ಮತದಾರರು ಪಟ್ಟಿ ಪರಿಷ್ಕರಣೆ ಕಾರ್ಯಕ್ರಮವು ಅಕ್ಟೊÃಬರ್. 15 ರವರೆಗೆ ನಡೆಯಲಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ. 

ಮತದಾರರ ಪಟ್ಟಿ ಪರಿಷ್ಕರಣೆ-2020ರ ಭಾಗವಾಗಿ ಮತದಾರರ ಪರಿಶೀಲನಾ ಕಾರ್ಯವನ್ನು ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಸೆಪ್ಟೆಂಬರ್. 01 ರಿಂದ ಅಕ್ಟೊÃಬರ್. 15 ರವರೆಗೆ ಆಯೋಜಿಸಲಾಗಿದ್ದು, ಈ ಕಾರ್ಯದನ್ವಯ ಪ್ರತಿ ಮತದಾರರು ತಮ್ಮ ವಿವರಗಳು ಮತದಾರರ ಪಟ್ಟಿಯಲ್ಲಿ ಸರಿಯಾಗಿ ಮುದ್ರಿತವಾಗಿರುವ ಬಗ್ಗೆ ಖಚಿತ ಪಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ.  ಆದ್ದರಿಂದ ಜಿಲ್ಲೆಯ ಮತದಾರರು ಈ ಕೆಳಗೆ ತಿಳಿಸಿದ ಕೇಂದ್ರಗಳಲ್ಲಿ/ ಜಾಲತಾಣಗಳ ಮೂಲಕ ತಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳಬಹುದು.
ಎನ್.ವಿ.ಎಸ್.ಪಿ  www.nvsp.in  ಗೆ ಭೇಟಿ ನೀಡಿ, ತಮ್ಮ ಮೊಬೈಲ್ ಸಂಖ್ಯೆಯೊಂದಿಗೆ ನೋಂದಾಯಿಸಿಕೊಂಡು, ತಮ್ಮ ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ನಮೂದಿಸುವುದು.  ತದನಂತರ ಸ್ಕಿçÃನ್ ಮೇಲೆ ಗೋಚರಿಸುವ ತಮ್ಮ ವಿವರಗಳನ್ನು ಪರಿಶೀಲಿಸುವುದು.  ಒಂದು ವೇಳೆ ವಿವರಗಳು ಸರಿಯಾಗಿದ್ದರೆ ರೇಷನ್ ಕಾರ್ಡ್, ಪಾಸ್ ಪೋರ್ಟ್, ಬ್ಯಾಂಕ್ ಪಾಸ್‌ಬುಕ್, ಆಧಾರ್ ಕಾರ್ಡ್, ರೈತರ ಗುರುತಿನ ಚೀಟಿ, ಸರ್ಕಾರದಿಂದ ಪಡೆದ ಯಾವುದಾದರು ಗುರುತಿನ ಚೀಟಿ, ಚಾಲನಾ ಪರವಾನಿಗೆ ಪತ್ರ, 10ನೇ ಅಥವಾ 12ನೇ ತರಗತಿಯ ಅಂಕಪಟ್ಟಿ, ಪ್ಯಾನ್‌ಕಾರ್ಡ್, ವಿದ್ಯುತ್ ಹಾಗೂ ನೀರಿನ ಅಥವಾ ಟೆಲಿಫೋನ್ ಬಿಲ್, ಆರ್.ಜಿ.ಐ-ಎನ್.ಪಿ.ಆರ್ ಕಾರ್ಡ್ ಇದರಲ್ಲಿ  ಯಾವುದಾದರೂ ಒಂದು ದಾಖಲೆಯ ಮೂಲ ಪ್ರತಿಯ ಫೋಟೊವನ್ನು ಕಡ್ಡಾಯವಾಗಿ ಅಪ್‌ಲೋಡ್ ಮಾಡುವ ಮೂಲಕ ಪ್ರಮಾಣೀಕರಿಸಬೇಕು.
ಒಂದು ವೇಳೆ ವಿವರಗಳು ತಿದ್ದುಪಡಿಯಾಗಬೇಕಿದ್ದಲ್ಲಿ, ತಿದ್ದುಪಡಿ ಮಾಡುವ ಆಯ್ಕೆಯನ್ನು ಕ್ಲಿಕ್ಕಿಸಿ, ತಿದ್ದುಪಡಿಯಾಗಬೇಕಾದ ವಿವರದ ಬಗ್ಗೆ ಸಂಬಂಧಪಟ್ಟ ದಾಖಲೆಯ ಮೂಲ ಪ್ರತಿಯ ಫೋಟೊವನ್ನು ಅಪ್‌ಲೋಡ್ ಮಾಡುವ ಮೂಲಕ ಹಾಗೂ ಸರಿಯಾದ ವಿವರಗಳನ್ನು ನಮೂದು ಮಾಡುವ ಮೂಲಕ ತಿದ್ದುಪಡಿ ಮಾಡಿಕೊಳ್ಳಬಹುದು.  ಇದಲ್ಲದೇ,  www.nvsp.in ರ ಮೂಲಕ ಹೊಸ ಸೇರ್ಪಡೆ, ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು, ಸ್ಥಳಾಂತರಗೊಳಿಸಲು ಸಹ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.  ಈ ಜಾಲತಾಣದ (ವೆಬ್‌ಸೈಟ್) ಮೂಲಕ ಅರ್ಜಿ ಸಲ್ಲಿಸಿದಲ್ಲಿ, ಅರ್ಜಿಗಳ ಪ್ರತಿಯನ್ನು (ಹಾರ್ಡ ಕಾಪಿ) ತಹಶೀಲ್ದಾರ ಕಛೇರಿಗಳಿಗೆ ಅಥವಾ ಮತಗಟ್ಟೆ ಅಧಿಕಾರಿಗಳಿಗೆ ಸಲ್ಲಿಸುವ ಅವಶ್ಯಕತೆಯಿರುವುದಿಲ್ಲ.  ಅದಲ್ಲದೇ ಮೇಲಿನಂತೆ ಪರಿಶೀಲನೆಯನ್ನು ಗೂಗಲ್ ಪ್ಲೆÃಸ್ಟೊÃರ್  (Google Playstore) ನಲ್ಲಿ ವೋಟರ್ ಹೆಲ್ಪ್ಲೈನ್ ಆ್ಯಪ್ (Voter Helpline App) ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ, ಸಿ.ಎಸ್.ಸಿ (ಕಾಮನ್ ಸರ್ವಿಸ್ ಸೆಂಟರ್) ನಾಗರಿಕ ಸೇವಾ ಕೇಂದ್ರಗಳ ಮೂಲಕ, ಅಟಲ್‌ಜೀ ಜನಸ್ನೆÃಹಿ ಕೇಂದ್ರಗಳ ಮೂಲಕ, ತಹಶೀಲ್ದಾರ ಕಛೇರಿಯ ಚುನಾವಣಾ ಶಾಖೆಯಲ್ಲಿ, ಜಿಲ್ಲಾಧಿಕಾರಿಗಳ ಕಛೇರಿಯ ಜಿಲ್ಲಾ ಸಂಪರ್ಕ ಕೇಂದ್ರ,  ಚುನಾವಣಾ ಶಾಖೆಯ ಮೂಲಕವೂ ಸಹ ಮಾಡಿಕೊಳ್ಳಬಹುದಾಗಿರುತ್ತದೆ.
ಅದಾಗ್ಯೂ ಆನ್‌ಲೈನ್ ಮೂಲಕ ಮಾಡಲು ಅನಾನುಕೂಲಗಳಿದ್ದಲ್ಲಿ, ಸೆಪ್ಟೆಂಬರ್. 01 ರಿಂದ ಅಕ್ಟೊÃಬರ್. 15 ರವರೆಗೆ ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಬೂತ್ ಮಟ್ಟದ ಅಧಿಕಾರಿಗಳು ತಮಗೆ ತೋರಿಸುವ ಮತದಾರರ ಪಟ್ಟಿಯಲ್ಲಿ ತಮ್ಮ ವಿವರಗಳನ್ನು ಪರಿಶೀಲಿಸಿ, ಸರಿ ಇದ್ದಲ್ಲಿ ಮೇಲಿನ ಯಾವುದಾದರೂ ಒಂದು ಸ್ವಯಂ ದೃಢೀಕೃತ ದಾಖಲೆಯನ್ನು ನೀಡಬೇಕು.  ವಿವರಗಳಲ್ಲಿ ತಿದ್ದುಪಡಿಯಾಗಬೇಕಿದ್ದಲ್ಲಿ ಬೂತ್ ಮಟ್ಟದ ಅಧಿಕಾರಿಗಳಿಗೆ ನಮೂನೆ-8 ರೊಂದಿಗೆ ತಿದ್ದುಪಡಿ ಕೋರಿದ ವಿವರದ ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕು.
ಮತದಾರರು ಈ ಮತದಾರರ ಪರಿಶೀಲನಾ ಕಾರ್ಯದ ಮೂಲಕ ಮೇಲಿನ ಯಾವುದಾದರೂ ವಿಧಗಳ ಮೂಲಕ ತಮ್ಮ ವಿವರಗಳನ್ನು ಪರಿಶೀಲಿಸಿಕೊಂಡು, ಅಗತ್ಯವಿದ್ದಲ್ಲಿ ತಿದ್ದುಪಡಿ ಮಾಡಿಸಿಕೊಂಡು ಮತದಾರರ ಪಟ್ಟಿಗಳನ್ನು ದೋಷಮುಕ್ತಗೊಳಿಸುವಲ್ಲಿ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ಅಗತ್ಯ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
Please follow and like us:
error

Related posts