ಸ್ಥಳೀಯ ಸಂಸ್ಥೆ ಚುನಾವಣೆ : ಕೊಪ್ಪಳ ,ಗಂಗಾವತಿ,ಕುಷ್ಟಗಿ,ಯಲಬುರ್ಗಾ ಒಟ್ಟು ೬೪೫ ನಾಮಪತ್ರ ಸಲ್ಲಿಕೆ

ಅಂತಿಮ ದಿನ ೩೯೪ ನಾಮಪತ್ರ ಸಲ್ಲಿಕೆ : ಈವರೆಗೆ ಒಟ್ಟು ೬೪೫ ನಾಮಪತ್ರ ಸಲ್ಲಿಕೆ 
ಕೊಪ್ಪಳ ಆ.   ಕೊಪ್ಪಳ ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಪ್ರಮುಖ ಘಟ್ಟ ತಲುಪಿದ್ದು, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಆ. ೧೮ ಶನಿವಾರದಂದು ಒಟ್ಟು ೩೯೪ ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಕೆ ಪ್ರಾರಂಭವಾದ ಆ. ೧೦ ರಿಂದ ಇದುವರೆಗೂ ಜಿಲ್ಲೆಯಲ್ಲಿ ಒಟ್ಟು ೬೪೫ ನಾಮಪತ್ರಗಳು ಸಲ್ಲಿಕೆಯಾಗಿವೆ.
ನಾಮಪತ್ರ ಸಲ್ಲಿಸಲು ಆ. ೧೮ ಕೊನೆಯ ದಿನವಾಗಿತ್ತು. ಹೀಗಾಗಿ ಜಿಲ್ಲೆಯ ಎಲ್ಲೆಡೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಭರದಿಂದ ಸಾಗಿತು. ಕೊಪ್ಪಳ ಜಿಲ್ಲೆಯಲ್ಲಿ ೧೦೪ ವಾರ್ಡ್‌ಗಳಿಗಾಗಿ ಶನಿವಾರದಂದು ಒಂದೇ ದಿನ ಕಾಂಗ್ರೆಸ್-೮೨, ಬಿಜೆಪಿ-೯೨, ಜೆಡಿಎಸ್-೫೬, ಸಿಪಿಐ(ಎಂ)-೦೪, ಬಿಎಸ್‌ಪಿ-೦೧, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ-೦೧, ಪಕ್ಷೇತರರು-೧೫೮ ಸೇರಿದಂತೆ ಒಟ್ಟು ೩೯೪ ನಾಮಪತ್ರ ಸಲ್ಲಿಕೆಯಾಗಿದೆ. ಜಿಲ್ಲೆಯಲ್ಲಿ ಇದುವರೆಗೂ ಕಾಂಗ್ರೆಸ್-೧೬೮, ಬಿಜೆಪಿ-೧೪೨, ಜೆಡಿಎಸ್-೭೯,, ಸಿಪಿಐ(ಎಂ)-೦೬, ಬಿಎಸ್‌ಪಿ-೦೧, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ-೦೩, ಪಕ್ಷೇತರರು-೨೪೬ ಸೇರಿದಂತೆ ಒಟ್ಟು ೬೪೫ ನಾಮಪತ್ರ ಸಲ್ಲಿಕೆಯಾದಂತಾಗಿದೆ.
ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು ೩೧ ವಾರ್ಡ್‌ಗಳಿದ್ದು, ಶನಿವಾರದಂದು ಕಾಂಗ್ರೆಸ್-೨೪, ಬಿಜೆಪಿ-೨೫, ಜೆಡಿಎಸ್-೧೪, ಸಿಪಿಐ(ಎಂ)-೦೧, ಬಿಎಸ್‌ಪಿ-೦೧, ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ- ೦೧, ಪಕ್ಷೇತರರು-೬೬ ಸೇರಿದಂತೆ ಒಟ್ಟು ೧೩೨ ನಾಮಪತ್ರ ಸಲ್ಲಿಕೆಯಾಗಿವೆ. ಇದುವರೆಗೂ ಒಟ್ಟಾರೆ ಕಾಂಗ್ರೆಸ್-೪೯, ಬಿಜೆಪಿ-೩೬, ಜೆಡಿಎಸ್-೨೩, ಸಿಪಿಐ(ಎಂ)-೦೨, ಬಿಎಸ್‌ಪಿ-೦೧, ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ- ೦೩, ಪಕ್ಷೇತರರು-೧೦೯ ಸೇರಿದಂತೆ ಒಟ್ಟು ೨೨೩ ನಾಮಪತ್ರ ಸಲ್ಲಿಕೆಯಾಗಿವೆ.
ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು ೩೫ ವಾರ್ಡ್‌ಗಳಿದ್ದು, ಶನಿವಾರದಂದು ಕಾಂಗ್ರೆಸ್-೨೫, ಬಿಜೆಪಿ-೩೫, ಜೆಡಿಎಸ್-೨೪, ಸಿಪಿಐ(ಎಂ)-೦೩, ಪಕ್ಷೇತರರು-೪೯ ಸೇರಿದಂತೆ ಒಟ್ಟು ೧೩೬ ನಾಮಪತ್ರ ಸಲ್ಲಿಕೆಯಾಗಿವೆ. ಇದುವರೆಗೂ ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟಾರೆ ಕಾಂಗ್ರೆಸ್-೪೨, ಬಿಜೆಪಿ-೪೬, ಜೆಡಿಎಸ್-೩೧, ಸಿಪಿಐ(ಎಂ)-೦೩, ಪಕ್ಷೇತರರು-೬೯ ಸೇರಿದಂತೆ ಒಟ್ಟು ೧೯೧ ನಾಮಪತ್ರ ಸಲ್ಲಿಕೆಯಾಗಿವೆ.
ಕುಷ್ಟಗಿ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು ೨೩ ವಾರ್ಡ್‌ಗಳಿದ್ದು, ಶನಿವಾರದಂದು ಕಾಂಗ್ರೆಸ್-೨೧, ಬಿಜೆಪಿ-೧೪, ಜೆಡಿಎಸ್-೧೦, ಪಕ್ಷೇತರರು-೩೪ ಸೇರಿದಂತೆ ಒಟ್ಟು ೭೯ ನಾಮಪತ್ರ ಸಲ್ಲಿಕೆಯಾಗಿವೆ. ಇದುವರೆಗೂ ಒಟ್ಟಾರೆ ಕಾಂಗ್ರೆಸ್-೪೬, ಬಿಜೆಪಿ-೩೧, ಜೆಡಿಎಸ್-೧೪, ಪಕ್ಷೇತರರು-೫೬ ಸೇರಿದಂತೆ ಒಟ್ಟು ೧೪೭ ನಾಮಪತ್ರ ಸಲ್ಲಿಕೆಯಾದಂತಾಗಿದೆ.
ಯಲಬುರ್ಗಾ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು ೧೫ ವಾರ್ಡ್‌ಗಳಿದ್ದು, ಶನಿವಾರದಂದು ಕಾಂಗ್ರೆಸ್-೧೨, ಬಿಜೆಪಿ-೧೮, ಜೆಡಿಎಸ್-೦೮, ಪಕ್ಷೇತರರು-೦೯ ಸೇರಿದಂತೆ ಒಟ್ಟು ೪೭ ನಾಮಪತ್ರ ಸಲ್ಲಿಕೆಯಾಗಿವೆ. ಇದುವರೆಗೂ ಒಟ್ಟಾರೆ ಕಾಂಗ್ರೆಸ್-೩೧, ಬಿಜೆಪಿ-೨೯, ಜೆಡಿಎಸ್-೧೧, ಸಿಪಿಐ(ಎಂ)-೦೧, ಪಕ್ಷೇತರರು-೧೨ ಸೇರಿದಂತೆ ಒಟ್ಟು ೮೪ ನಾಮಪತ್ರ ಸಲ್ಲಿಕೆಯಾದಂತಾಗಿದೆ.
ನಾಮಪತ್ರಗಳ ಪರಿಶೀಲನೆ ಆ. ೨೦ ರಂದು ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಆ. ೨೩ ಕೊನೆಯ ದಿನವಾಗಿದ್ದು, ಆ. ೩೧ ರಂದು ಮತದಾನ ಜರುಗಲಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ   ತಿಳಿಸಿದೆ.

Please follow and like us: