ಸುಳ್ಳು ಹೇಳುವದರಲ್ಲಿ ಕಾಲಹರಣ ಮಾಡಿದ ಪ್ರಧಾನಿ ನರೇಂದ್ರ ಮೋದಿ – ಕೆ.ರಾಘವೇಂದ್ರ ಹಿಟ್ನಾಳ

ಸುಳ್ಳು ಹೇಳುವುದೇ ಬಿ.ಜೆ.ಪಿ. ನಾಯಕರ ಕಾಯಕವಾಗಿದೆ. ಕೇವಲ ಅಧಿಕಾರಕ್ಕೋಸ್ಕರ ದೇಶದ ಜನರಿಗೆ ಅಚ್ಚೇದಿನ್ ವಾಗ್ದಾನ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದ್ದಾರೆ

ಕೊಪ್ಪಳ:೦೨, ಕ್ಷೇತ್ರದ ನೀರಲಗಿ, ಮತ್ತೂರು, ಹನಕುಂಟಿ, ಭೈರಾಪುರ, ಹಲವಾಗಲಿ, ಬೋಚನಹಳ್ಳಿ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರದ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಕೆ.ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ ಬಡವರ ರಟ್ಟಿಗೆ ಶಕ್ತಿ ತುಂಬಿದ ಅನ್ನಭಾಗ್ಯ ಯೋಜನೆ ಬಗ್ಗೆ ಆರೋಪ ಮಾಡುತ್ತಿದ್ದ ಬಿ.ಜೆ.ಪಿ. ನಾಯಕರು ಇಂದು ಈ ಯೋಜನೆ ನಮ್ಮ ಕೇಂದ್ರ ಸರಕಾರದೆಂದು ಹೇಳುತ್ತಿದ್ದಾರೆ. ಸುಳ್ಳು ಹೇಳುವುದೇ ಬಿ.ಜೆ.ಪಿ. ನಾಯಕರ ಕಾಯಕವಾಗಿದೆ. ಕೇವಲ ಅಧಿಕಾರಕ್ಕೋಸ್ಕರ ದೇಶದ ಜನರಿಗೆ ಅಚ್ಚೇದಿನ್ ವಾಗ್ದಾನ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದ್ದಾರೆ. ತೈಲ ಬೆಲೆಯು ದಿನನಿತ್ಯ ಹೆಚ್ಚುತ್ತಿದ್ದು ಬಡಜನರ ಹಾಗೂ ಮಧ್ಯಮ ವರ್ಗದ ಜನರ ಬಗ್ಗೆ ಕಿಂಚಿತ್ತು ಮಾತನಾಡದ ಪ್ರಧಾನಿಯವರು ಮೌನಕ್ಕೆ ಶರಣಾಗಿದ್ದಾಗೆ. ನೋಟ್ ಅಮಾನ್ಯಕರಣದಿಂದ ರಾಷ್ಟ್ರದಲ್ಲಿ ನಿರುದ್ಯೋಗ ಸೃಷ್ಟಿಸಿ ಯುವಶಕ್ತಿಗೆ ಹಗಲು ಮೋಸ ಮಾಡಿದ್ದಾರೆ. ಜಿ.ಎಸ್.ಟಿ. ಜಾರಿ ಮಾಡಿ ಸಣ್ಣ ಸಣ್ಣ ಉದ್ದಿಮೆಗಳು ಹಾಗೂ ವ್ಯಾಪಾರಿಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪ್ರತಿನಿತ್ಯ ಬ್ಯಾಂಕ್ ಹಗರಣಗಳು ಹೊರಬರುತ್ತಿದ್ದು ಬ್ಯಾಂಕುಗಳಿಗೆ ಪಂಗನಾಮ ಹಾಕಿ ದೇಶ ಬಿಟ್ಟು ಹೋಗುವವರ ಸಂಖ್ಯೆ ದಿನನಿತ್ಯ ಹೆಚ್ಚಾಗುತ್ತಿದ್ದರೂ ಪ್ರಧಾನಿ ಮೋದಿಯವರು ಈವರೆಗೂ ಅಚ್ಚೇದಿನ್ ಬರುವ ಭರವಸೆ ನೀಡುತ್ತಿದ್ದಾರೆ. ಧಕ್ಷಿಣ ಭಾರತದ ಮೊದಲ ಕರ್ನಾಟಕದ ಬಿಜೆ.ಪಿ. ಸರಕಾರವೆಂದು ಅಧಿಕಾರಿ ಸ್ವೀಕರಿಸಿದ ಯಡಿಯೂರಪ್ಪನವರ ಅವಧಿಯಲ್ಲಿ ಸಾಧನೆಯು ಶೂನ್ಯವಾಗಿ ಜೇಲ್ ಬೇಲ್ ಸಂಸ್ಕೃತಿ ಕರ್ನಾಟಕಕ್ಕೆ ನೀಡಿದ ಹೆಗ್ಗಳಿಕೆ ಅವರ ಅಭಿವೃದ್ಧಿಯಾಗಿದೆ. ನವನಿರ್ಮಾಣ ಕರ್ನಾಟಕ ಮಾಡಿದ್ದ ಶ್ರೇಯಸ್ಸು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ ಎಂದು ಹೇಳಿದರು. ಜನ ಎಲ್ಲಾ ವಿದ್ಯಮಾನಗಳನ್ನು ಗಮನಿಸಿ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಬೇಕೆಂದು ಮತದಾರ ಪ್ರಭುಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ.ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ, ಮಾಜಿ ಜಿ.ಪಂ.ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ತಾ.ಪಂ.ಅಧ್ಯಕ್ಷ ಬಾಲಚಂದ್ರನ್, ಎ.ಪಿ.ಎಂ.ಸಿ. ಅಧ್ಯಕ್ಷ ಯಂಕನಗೌಡ್ರ ಹಿರೇಗೌಡ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸುರೇಶ ಭೂಮರಡ್ಡಿ, ಕಾಟನ್ ಪಾಷಾ, ತಾ.ಪಂ.ಸದಸ್ಯ ಸಿದ್ದಲಿಂಗಸ್ವಾಮಿ ಇನಾಮದಾರ, ಮುಖಂಡರುಗಳಾದ ಹನುಮರಡ್ಡಿ ಹಂಗನಕಟ್ಟಿ, ಕೃಷ್ಣಾ ಗಲಬಿ, ಭರಮಪ್ಪ ನಗರ, ಹನುಮಂತಗೌಡ್ರ ಗಾಳಿ, ಯತ್ನಟ್ಟಿ ನಿಂಗಪ್ಪ, ವೆಂಕಣ್ಣ ಕೊಳ್ಳಿ, ಭೀಮಶೆಪ್ಪ ಬೋಚನಹಳ್ಳಿ, ಶರಣಯ್ಯ ಗುರುವಿನ, ಮಲ್ಲನಗೌಡ್ರ, ಕನಕರಾಜ, ಹನುಮಂತಪ್ಪ ಮತ್ತೂರ, ಹನುಮಂತಪ್ಪ ಕಿಡದಾಳ, ಬಸವಂತಪ್ಪ ಮಜ್ಜಿಗಿ ಹಾಗೂ ಪಕ್ಷದ ವಕ್ತಾರ ಅಕ್ಬರ್ ಪಾಷಾ ಪಲ್ಟನ್ ಉಪಸ್ಥಿತರಿದ್ದರು.

Please follow and like us:
error