ಸುಳ್ಳು ಭರವಸೆಗಳ ಪ್ರಣಾಳಿಕೆ ಬಿಡುಗಡೆಗೊಳಿಸಿದ ಬಿ.ಜೆ.ಪಿ. – ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ ೦೫, ಗಿಣಿಗೇರಾ ಗ್ರಾಮದಲ್ಲಿ ಭರ್ಜರಿ ಕಾಂಗ್ರೆಸ್ ಪಕ್ಷದ ಪ್ರಚಾರ ಹಾಗೂ ಮತಯಾಚನೆ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಕೆ.ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಕಾರ್ಯಗಳನ್ನೆ ತಮ್ಮ ಪ್ರಣಾಳಿಕೆಯಲ್ಲಿ ಹೆಸರು ಬದಲಾಯಿಸಿ ರಾಜ್ಯದ ಜನತೆಗೆ ಸುಳ್ಳು ಭರವಸೆಗಳನ್ನು ನೀಡಿರುವ ಬಿ.ಜೆ.ಪಿ. ಪಕ್ಷವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದು ಈ ನಾಲ್ಕು ವರ್ಷದಲ್ಲಿ ರೈತರ ಸಾಲ ಮನ್ನಾ ಮಾಡಲಾಗದೆ ಇನ್ನು ರಾಜ್ಯದ ರೈತರ ೧ ಲಕ್ಷ ಸಾಲ ಮನ್ನಾ ಮಾಡುತ್ತೇನೆಂದು ಹೇಳುವುದು ಇವರ ಸುಳ್ಳಿನ ಕಂತೆಯಾಗಿದೆ. ಕಾಂಗ್ರೆಸ್ ಸರಕಾರದ ಜನಪರ ಯೋಜನೆಗಳ ಹೆಸರುಗಳನ್ನು ಬದಲಾಯಿಸಿ ರಾಜ್ಯದ ಜನತೆಗೆ ತಮ್ಮ ಪ್ರಣಾಳಿಕೆ ವಚನ ನೀಡುತ್ತಿದ್ದೇವೆ ಎಂದು ಹೇಳಿರುವುದು ಇವರ ರಾಜಕೀಯ ದಿವಾಳಿತನದ ಸಂಕೇತವಾಗಿದೆ. ಕಾಂಗ್ರೆಸ್ ಸರಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯ. ನುಡಿದಂತೆ ನಡೆದ ಕಾಂಗ್ರೆಸ್ ಸರಕಾರಕ್ಕೆ ಮತ್ತೊಂದು ಅವಕಾಶ ಕಲ್ಪಿಸಿ ತಮ್ಮ ಸೇವೆಗೆ ನನ್ನನ್ನು ಅಧಿಕ ಮತಗಳಿಂದ ಆರಿಸಿ ಜಯಭೇರಿಗೊಳಿಸಬೇಕೆಂದು ಮತದಾರ ಪ್ರಭುಗಳಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಜಿ.ಪಂ.ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರಡ್ಡಿ, ಎ.ಪಿ.ಎಂ.ಸಿ. ಸದಸ್ಯ ನಾಗರಾಜ ಚಳ್ಳೊಳ್ಳಿ, ಗ್ರಾ.ಪಂ.ಸದಸ್ಯ ಉಮೇಶ ಪೂಜಾರ, ಮುಖಂಡರುಗಳಾದ ಕಿಶೋರಿ ಬೂದನೂರ, ಭರತಮಪ್ಪ ನಗರ, ಇಂದಿರಾ ಭಾವಿಕಟ್ಟಿ, ಬಸವರಾಜ ಆಗೋಲಿ, ಶಾಹಿದ ಕವಲೂರ, ಗುರುಬಸವರಾಜ ಹಳ್ಳಿಕೇರಿ, ತೋಟಪ್ಪ ಸಿಂಟ್ರ, ಪಂಪಣ್ಣ ರಾಠೋಡ, ಸುಬ್ಬಣಾಚಾರ, ರವಿ, ಮಲ್ಲು ಪೂಜಾರ, ವೆಂಕಟೇಶ ಬಾರಕೇರ, ಗುದ್ನೇಪ್ಪ ಹೊಸೂರ, ಚಂದ್ರು ಲಮಾಣಿ, ಪಾಂಡುರಂಗಪ್ಪ, ಇನ್ನೂ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವಕ್ತಾ ಅಕ್ಬರ್ ಪಾಷಾ ಪಲ್ಟನ್ ಉಪಸ್ಥಿತರಿದ್ದರು.

Please follow and like us:
error