ಸಂಸದ ಸಂಗಣ್ಣ ಕರಡಿ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆ


ಕೊಪ್ಪಳ: ತಾಲೂಕಿನ ಗಿಣಗೇರಾ, ಬಸಾಪೂರ, ಹಳೆ-ಹೊಸಲಿಂಗಾಪುರ, ಕಂಪಸಾಗರದಲ್ಲಿ ಮಟ್ಟಿ ಮುದ್ಲಾಪೂರ, ಹೊಳೆ ಮುದ್ಲಾಪೂರ ಹೊಸಳ್ಳಿ, ಹಿಟ್ನಾಳ, ಕಂಪಸಾಗರ ಗ್ರಾಮಗಳಲ್ಲಿ ಸಂಸದ ಸಂಗಣ್ಣ ಕರಡಿ ಬಿಜೆಪಿ ಅಭ್ಯರ್ಥಿ ಅಮರೇಶ ಕರಡಿ ಪರ ಶನಿವಾರ ಪ್ರಚಾರ ಕೈಗೊಂಡಿದ್ದರು.
ಇದೇ ಸಂದರ್ಭದಲ್ಲಿ ಕಂಪಸಾಗರದ ಅಂಜಿನಪ್ಪ ಬೆಂಕಿ, ಸಂಜೀವಪ್ಪ ಕಟೂಚಿ, ಶಂಕ್ರಪ್ಪ ಹೆಗ್ಗ, ವೀರಣ್ಣ ಡಿ, ಮತ್ತು ಹೊಸ ಲಿಂಗಾಪೂರದ ರಾಜಣ್ಣ ನಾಗರಾಜ, ವಿರೇಶ ಹೊಟ್ಟಿ, ಮಂಜುನಾಥ ದಾಸರ, ಕಾಂತುರಾವ್, ನೀಲಪ್ಪ ಹ್ಯಾಟಿ, ದೇವಪ್ಪ ಹ್ಯಾಟಿ ಸೇರಿದಂತೆ ಇನ್ನಿತರರು ಸಂಸದ ಸಂಗಣ್ಣ ಕರಡಿ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮುಖಂಡರಾದ ವೀರುಪಾಕ್ಷಪ್ಪ ಗದುಗಿನಮಠ, ವೀರಣ್ಣ ಗಾಣಿಗೇರ, ಕರಿಯಪ್ಪ ಮೇಟಿ, ಮುಕ್ಕಣ್ಣ ಬಸಾಪೂರ, ಶಿವನಯ್ಯ ಹಿರೇಮಠ, ದಾನಪ್ಪ ಕುಟಗನಹಳ್ಳಿ, ಹನುಮಂತಪ್ಪ ನಾಯಕ, ಯಮನೂರಸ್ವಾಮಿ ಕೋಲ್ಕರ, ಭರಮಪ್ಪ, ಚಂದ್ರಕಾಂತ, ಶೇಖರ ನಾಯಕ್, ಯಮನೂರಪ್ಪ ಮೇಗಳಮನಿ, ನಿಂಗಪ್ಪ ಚೌದ್ರಿ ಸೇರಿದಂತೆ ಇತರರು ಇದ್ದರು.

Related posts