ಶಾಸಕರ ಕೆಲಸಗಳೇ ಕಾಂಗ್ರೆಸ್ ನಗರಸಭೆಯ ಅಧಿಕಾರಕ್ಕೆ ಬರಲು ಶಕ್ತಿ : ಚೋಪ್ರಾ


ಕೊಪ್ಪಳ, ಆ. ೨೫, ಕೊಪ್ಪಳ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ ಅವರ ಕೆಲಸಗಳೇ ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ದೊಡ್ಡ ಶಕ್ತಿಯಾಗಿದೆ ಎಂದು ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ ಹೇಳಿದರು.
ಅವರು ನಗರದ ೧೨, ೧೩, ೧೪, ೩೦, ೩೧ ಮತ್ತು ೪ ನೇ ವಾರ್ಡಗಳಲ್ಲಿ ಕಾಂಗ್ರೇಸ್ ಪಕ್ಷದ ಚುನಾವಣಾ ಪ್ರಚಾರ ಹಾಗೂ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ ಬಳಿಕ ಮಾತನಾಡಿದರು.
ಶಾಸಕ ಹಿಟ್ನಾವಳರವರು ಹಿಂದಿನ ಕಾಂಗ್ರೇಸ್ ಸರ್ಕಾರದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ೨೨೩೭ ಕೋಟಿ ಹಣವನ್ನು ತಂದಿದ್ದು, ನಗರದ ಅಭಿವೃದ್ಧಿಗಾಗಿ ಸುಮಾರು ೭೩ ಕೋಟಿಗಿಂತಲೂ ಹೆಚ್ಚು ಅನುದಾನ ತಂದಿದ್ದು, ನಗದರಲ್ಲಿ ಎಲ್ಲಾ ರಸ್ತೆಗಳ ಕಾಮಗಾರಿ ಸಂಪೂರ್ಣಗೊಳ್ಳುತ್ತಿವೆ, ನಗರದಲ್ಲಿ ಜೆ.ಪಿ.ಮಾರ್ಕೆಟ್ ನಿರ್ಮಾಣ, ಮಹಿಳಾ ಪದವಿ ಕಾಲೇಜು, ಕೊಪ್ಪಳ ಸ್ನಾತಕೋತ್ತರ ಕೇಂದ್ರ ೧೩ ಏಕರೆ ಭೂಮಿ ಮಂಜೂರು ಮಾಡಿಸಿದ್ದು, ಜಿಲ್ಲಾ ಆಸ್ಪತ್ರೆ ಹೆಚ್ಚಿನ ೪೫೦ ಹಾಸಿಗೆಯುಳ್ಳ ಆಸ್ಪತ್ರೆ ಮಂಜೂರು ಮಾಡಿಸಿದ್ದು, ಮುಖ್ಯವಾಗಿ ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಿ ಜನರಿಗೆ ಪ್ರತಿ ೨ ದಿನಕ್ಕೊಮ್ಮೆ ಶುದ್ಧ ಕುಡಿಯುವ ನೀರಿನ ಸರಬರಾಜು ಮಾಡಲು ಹುಲಿಕೆರೆಗೆ ನೀರು ತುಂಬಿಸುವ ಕಾರ್ಯ ಮಾಡಿದ್ದಾರೆ.
ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಜನರು ನಗರದಲ್ಲಿಯೇ ೫೦೦೦ ಮತಗಳ ಅಂತರದಲ್ಲಿ ಮುನ್ನಡೆ ನೀಡಿ ಮತ್ತೊಮ್ಮೆ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದ ಅವರು, ನಗರವನ್ನು ಸಂಪೂರ್ಣವಾಗಿ ಮಾದರಿ ಮಾಡಲು ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್‌ಗೆ ಅಧಿಕಾರಕ್ಕೆ ತರಬೇಕು ಎಂದ ಅವರು, ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರದ ಜನಪರ ಚಿಂತನೆಗಳನ್ನು ಸಾಕಾರಗೊಳಿಸಲು ಸ್ಥಳಿಯ ಸಂಸ್ಥೆಗಳಲ್ಲಿಯೂ ಕಾಂಗ್ರೆಸ್ ಅಧಿಕಾರದಲ್ಲಿ ಇರಬೇಕು, ಮುಂದಿನ ಅಭಿವೃದ್ಧಿಗೆ ಇದು ಸಹಕಾರಿಯಾಗಿದ್ದು, ನಗರದ ೩೧ ವಾರ್ಡಗಳ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿರಿ ಎಂದರು.
ಈ ಸಂದರ್ಭದಲ್ಲಿ ಜಿ.ಪಂ.ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ, ಮಾಜಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಜುಲ್ಲು ಖಾದರ ಖಾದ್ರಿ, ತಾಲೂಕ ಪಂಚಾಯತ್ ಅಧ್ಯಕ್ಷ ಬಾಲಚಂದ್ರನ್, ಎಪಿಎಂಸಿ ಅಧ್ಯಕ್ಷ ವೆಂಕನಗೌಡ ಹಿರೇಗೌಡ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪಾಷಾ, ಪ್ರಚಾರ ಸಮಿತಿ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಎಂ. ಇಟ್ಟಂಗಿ, ಮುಖಂಡರುಗಳಾದ ದ್ಯಾಮಣ್ಣ ಚಿಲವಾಡಗಿ, ನವೋದಯ ವಿರುಪಣ್ಣ, ಪ್ರಸನ್ನ ಗಡಾದ, ರಾಮಣ್ಣ ಕಲ್ಲನವರ, ವೆಂಕನಗೌಡ ಹೊರತಟ್ನಾಳ, ಶರಣಪ್ಪ ಚಂದನಕಟ್ಟಿ, ಅಶೋಕ ಬಜಾರಮಠ, ಅಮ್ಜದ್ ಪಟೇಲ್, ಶಿವಪ್ಪ ಶೆಟ್ಟರ್, ಇಬ್ರಾಹಿಂ ಅಡ್ಡೇವಾಲೆ, ಹನುಮೇಶ ಹೊಸಳ್ಳಿ, ಪಂಪಣ್ಣ ಪೂಜಾರ, ಕೌಶಲ್ ಚೋಪ್ರಾ, ಆರ್.ಎಂ.ರಫಿ, ರಫೀಕ್ ಕೊತ್ವಾಲ್, ಪ್ರಭು ಕುಂಬಾರ, ಶೀತಲ್ ಪಾಟೀಲ್, ವಿಶಾಲಾಕ್ಷಿ ವಾಲ್ಮೀಕಿ, ಗವಿಸಿದ್ದಪ್ಪ ಕುಂಬಾರ ಮುಂತಾದವರು ಇದ್ದರು.
ವಿವಿಧ ವಾರ್ಡಗಳ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳಾದ ಅಕ್ಬರ ಪಾಷಾ ಪಲ್ಟನ್ ೪, ಯಲ್ಲಮ್ಮ ರಮೇಶ ಗಿಣಗೇರಿ ೧೨, ಸಿದ್ದಪ್ಪ ಹನುಮಂತಪ್ಪ ಮ್ಯಾಗೇರಿ ೧೩, ಬಾಳಮ್ಮ ಗವಿಸಿದ್ದಪ್ಪ ಡೊಳ್ಳಿನ ೧೪, ಹಸೀನಾಬೇಗಂ ನಿಸಾರಹ್ಮದ್ ಅಡ್ಡೇವಾಲೆ ೩೦, ಹನುಮಂತಪ್ಪ ಬೆಸ್ತರ್ ೩೧ ಉಪಸ್ಥಿತರಿದ್ದರು.