ವಿಧಾನಸಭಾ ಚುನಾವಣೆ: ಜಿಲ್ಲೆಯಲ್ಲಿ ಅಂದಾಜು ಶೇ. ೭೭ ರಷ್ಟು ಮತದಾನ

ಕೊಪ್ಪಳ ಮೇ.  ): ಕೊಪ್ಪಳ ಜಿಲ್ಲಾ ವ್ಯಾಪ್ತಿಯ ೦೫ ವಿಧಾನಸಭಾ ಕ್ಷೇತ್ರಗಳಲ್ಲಿ ಮೇ ೧೨ ರಂದು ನಡೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಾಥಮಿಕ ವರದಿಗಳ ಪ್ರಕಾರ ಅಂದಾಜು ಒಟ್ಟು ಶೇ. ೭೭ ರಷ್ಟು ಮತದಾನವಾಗಿದೆ. 
ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು ಶೇ. ೭೪, ಕನಕಗಿರಿ- ಅಂದಾಜು ಶೇ. ೮೦ , ಗಂಗಾವತಿ-ಅಂದಾಜು ಶೇ. ೭೫ , ಯಲಬುರ್ಗಾ- ಅಂದಾಜು ಶೇ.೮೦, ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು ಶೇ.೭೫ ರಷ್ಟು ಮತದಾನವಾಗಿದೆ. ಮತದಾನದ ನಿಖರ ಪ್ರಮಾಣ ತಡರಾತ್ರಿ ಲಭ್ಯವಾಗುವ ಸಾಧ್ಯತೆ ಇದೆ.
ಕೊಪ್ಪಳ ಜಿಲ್ಲೆಯಲ್ಲಿ ಬೆಳಗ್ಗೆ ೭ ಗಂಟೆಯಿಂದಲೇ ಪ್ರಾರಂಭಗೊಂಡ ಮತದಾನ, ಆರಂಭದಲ್ಲಿ ಮಂದಗತಿಯಿಂದ ಪ್ರಾರಂಭವಾದರೂ, ನಂತರದಲ್ಲಿ ವೇಗವನ್ನು ಪಡೆದುಕೊಂಡಿತು. ನೆತ್ತಿ ಸುಡುವಂತಿದ್ದ ಬಿರು ಬಿಸಿಲು ಮತದಾರರ ಮತದಾನದ ಉತ್ಸಾಹದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಬಿಸಿಲಿನ ತಾಪದ ನಡುವೆಯೂ ಮತದಾರರು ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುವ ದೃಶ್ಯ ಜಿಲ್ಲೆಯ ಹಲವು ಮತಗಟ್ಟೆಗಳಲ್ಲಿ ಸಾಮಾನ್ಯವಾಗಿತ್ತು. ಜಿಲ್ಲೆಯ ಎಲ್ಲ ಕ್ಷೇತ್ರಗಳಿಗಿಂತ ಕನಕಗಿರಿ ಕ್ಷೇತ್ರಗಳಲ್ಲಿ ಬೆಳಿಗ್ಗೆಯಿಂದಲೇ ಮತದಾನ ಪ್ರಮಾಣ ಉತ್ತಮವಾಗಿತ್ತು. ಮಧ್ಯಾಹ್ನ ೧೨ ಗಂಟೆಯ ವೇಳೆಗೆ ಶೇ. ೬೦ ರಷ್ಟು ಮತದಾನವಾಗಿದ್ದು ಕಂಡುಬಂದಿತು. ಗಂಗಾವತಿ ಕ್ಷೇತ್ರದ ಇರಕಲ್ಲಗಡ ಗ್ರಾಮದ ಮತಗಟ್ಟೆಗಳಲ್ಲಿ ಬೆಳಿಗ್ಗೆಯಿಂದಲೇ ಮತದಾನಕ್ಕೆ ಸರತಿ ಸಾಲು ಉದ್ದವಾಗಿತ್ತು. ಬಿಸಿಲಿನ ತಾಪ ಈ ಬಾರಿ ಕೊಪ್ಪಳ ಜಿಲ್ಲೆಯಲ್ಲಿ ಮತದಾರರ ಉತ್ಸಾಹವನ್ನು ಕುಂದಿಸಲು ಸಾಧ್ಯವಾಗಲಿಲ್ಲ. ಸಂಜೆಯ ವೇಳೆಗೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮೋಡ ಕವಿದ ವಾತಾವರಣ ಕಂಡುಬಂದ ಹಿನ್ನೆಲೆಯಲ್ಲಿ, ವಾತಾವರಣ ತಂಪಾಗಿದ್ದರಿಂದ ಮತದಾನ ಇನ್ನಷ್ಟು ಬಿರುಸಿನಿಂದ ಸಾಗಿತು. ವಿವಿಧ ವಿಧಾನಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೫ ಗಂಟೆಯವರೆಗಿನ ಶೇಕಡಾವಾರು ಮತದಾನ ಪ್ರಮಾಣ ವಿವರ ಇಂತಿದೆ.
ಬೆಳಿಗ್ಗೆ ೯ ಗಂಟೆಯವರೆಗೆ ಕುಷ್ಟಗಿ- ೯. ೪೦, ಕನಕಗಿರಿ- ೧೧. ೦೭, ಗಂಗಾವತಿ- ೧೦. ೧೦, ಯಲಬುರ್ಗಾ- ೦೯. ೬೮ ಮತ್ತು ಕೊಪ್ಪಳ- ಶೇ. ೯. ೦೪. ಜಿಲ್ಲೆಯಲ್ಲಿ ಒಟ್ಟಾರೆ. ಶೇ. ೯. ೯೩ ರಷ್ಟು ಮತದಾನವಾಗಿತ್ತು.
ಬೆಳಿಗ್ಗೆ ೧೧ ಗಂಟೆಯ ವೇಳೆಗೆ ಕುಷ್ಟಗಿ- ೨೫. ೭೧, ಕನಕಗಿರಿ- ೩೧. ೫೬, ಗಂಗಾವತಿ- ೨೭. ೭೬, ಯಲಬುರ್ಗಾ- ೨೫. ೪೫ ಮತ್ತು ಕೊಪ್ಪಳ- ಶೇ. ೨೪. ೧೯. ಜಿಲ್ಲೆಯಲ್ಲಿ ಒಟ್ಟಾರೆ. ಶೇ. ೨೯. ೯೩ ರಷ್ಟು ಮತದಾನವಾಗಿತ್ತು.
ಮಧ್ಯಾಹ್ನ ೧ ಗಂಟೆಯ ಹೊತ್ತಿಗೆ ಕುಷ್ಟಗಿ- ೪೪. ೪೭, ಕನಕಗಿರಿ- ೫೦. ೮೩, ಗಂಗಾವತಿ- ೪೫. ೧೦, ಯಲಬುರ್ಗಾ-೪೬. ೭೯ ಮತ್ತು ಕೊಪ್ಪಳ- ಶೇ. ೪೩. ೧೫. ಜಿಲ್ಲೆಯಲ್ಲಿ ಒಟ್ಟಾರೆ. ಶೇ. ೪೬. ೦೬ ರಷ್ಟು ಮತದಾನವಾಗಿತ್ತು.
ಮಧ್ಯಾಹ್ನ ೩ ಗಂಟೆಯ ವೇಳೆಗೆ ಕುಷ್ಟಗಿ- ೫೮. ೧೭, ಕನಕಗಿರಿ- ೬೪. ೯೩, ಗಂಗಾವತಿ- ೫೯. ೨೨, ಯಲಬುರ್ಗಾ- ೬೩. ೨೩ ಮತ್ತು ಕೊಪ್ಪಳ- ಶೇ. ೫೬. ೦೮. ಜಿಲ್ಲೆಯಲ್ಲಿ ಒಟ್ಟಾರೆ. ಶೇ. ೬೦. ೩೩ ರಷ್ಟು ಮತದಾನವಾಗಿದೆ.
ಸಂಜೆ ೫ ಗಂಟೆಯ ಹೊತ್ತಿಗೆ ಕುಷ್ಟಗಿ- ೬೯. ೦೮, ಕನಕಗಿರಿ- ೭೬. ೪೪, ಗಂಗಾವತಿ- ೭೨. ೬೩, ಯಲಬುರ್ಗಾ- ೭೮. ೧೧ ಮತ್ತು ಕೊಪ್ಪಳ- ಶೇ. ೬೯. ೪೮. ಜಿಲ್ಲೆಯಲ್ಲಿ ಒಟ್ಟಾರೆ. ಶೇ. ೭೩. ೧೪ ರಷ್ಟು ಮತದಾನವಾಗಿತ್ತು ಎಂದು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಕಳೆದ ೨೦೧೩ ರಲ್ಲಿ ವಿಧಾನಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.೭೧. ೩೩ , ಕನಕಗಿರಿ- ಶೇ.೭೩. ೭೫, ಗಂಗಾವತಿ- ಶೇ.೭೩. ೩೦, ಯಲಬುರ್ಗಾ- ಶೇ.೭೫. ೫೩, ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಶೇ.೭೩. ೭೭ ರಷ್ಟು, ಒಟ್ಟಾರೆ ಕೊಪ್ಪಳ ಜಿಲ್ಲೆಯಲ್ಲಿ ಶೇ. ೭೩. ೫೨ ರಷ್ಟು ಮತದಾನವಾಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Please follow and like us:
error