ರೈತ ವಿರೋಧಿ ಕೇಂದ್ರ ಸರಕಾರ – ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ:೧೩, ಲೇಬಗೇರಾ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಾದ ಮಾದಿನೂರ, ನರೇಗಲ್, ಹುಚ್ಚೇಶ್ವರ ಕ್ಯಾಂಪ್, ಯತ್ನಟ್ಟಿ, ಓಜನಹಳ್ಳಿ, ಹನುಮನಹಳ್ಳಿ, ಗ್ರಾಮಗಳಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮತಯಾಚನೆ ಮಾಡಿ ಮಾತನಾಡಿದ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಕೆ.ರಾಘವೇಂದ್ರ ಹಿಟ್ನಾಳ ಅವರು ರೈತರ ಬಗ್ಗೆ ಕಿಂಚತ್ತು ಕಾಳಜಿ ಇಲ್ಲದ ಕೇಂದ್ರ ರೈತ ವಿರೋಧಿ ಸರಕಾರವು ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಯುಪಿಎ ಸರಕಾರದಲ್ಲಿ ೭೨ ಸಾವಿರ ಕೋಟಿ ರಾಷ್ಟ್ರೀಕೃತ ಬ್ಯಾಂಕಿನ ಸಾಲ ಮನ್ನಾ ಮಾಡಿದ ಅಂದಿನ ಪ್ರಧಾನು ಮನ್‌ಮೋಹನಸಿಂಗರವರು ರೈತರ ಸ್ವಾವಲಂಬಿ ಬದುಕಿಗೆ ಆದ್ಯತೆ ನೀಡಿದ್ದರು. ಸುಳ್ಳನ್ನೆ ಬಂಡವಾಳ ಮಾಡಿಕೊಂಡಿರುವ ಇಂದಿನ ಪ್ರಧಾನಿ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಮಾರ್ಟ ಸಿಟಿಯಂತಹ ಸುಳ್ಳು ಯೋಜನೆಗಳನ್ನು ಹೇಳುತ್ತಾ ದೇಶದ ಯುವಕರಿಗೆ ೨ ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆಂದು ನಾಲ್ಕುವರೆ ವರ್ಷವಾದರೂ ೫ ಲಕ್ಷ ಉದ್ಯೋಗ ಸೃಷ್ಟಿಸಲು ಸಾಧ್ಯವಾಗಿಲ್ಲ. ರೈತರ ಮೇಲೆ ಗೋಲಿಬಾರ ಮಾಡಿದ ದಕ್ಷಿಣ ಭಾರತದ ಮೊದಲ ಬಿಜೆಪಿ ಸರಕಾರದ ಮುಖ್ಯಮಂತ್ರಿ ಯಡಿಯೂರಪ್ಪನವರು ರೈತರ ಜೊತೆಗೆ ಸುಳ್ಳು ಸಂವಾದ ಮಾಡಿ ಟೊಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. ರೈತರೇ ದೇಶದ ಅರ್ಥ ವ್ಯವಸ್ಥೆಯ ಬೆನ್ನೆಲುಬೆಂದು ಭಾವಿಸಿರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರಆರ್ಥಿಕ ಸಬಲೀಕರಣಕ್ಕೆ ಕೃಷಿ ಹೊಂಡಗಳ ನಿರ್ಮಾಣ, ಕೃಷಿ ಬೆಳಕು, ಕೃಷಿ ಯಂತ್ರಧಾರೆ, ಇನ್‌ಪುಟ್ ಸಬ್ಸಿಡಿ ಹಾಗೂ ಬೆಳೆ ವಿಮೆಗಳನ್ನು ಜಾರಿ ಮಾಡಿ ರೈತರಿಗೆ ಅನುಕೂಲವಾಗುವಂತಹ ಜನಪರ ಯೋಜನೆಗಳನ್ನು ಈ ರಾಜ್ಯದಲ್ಲಿ ಜಾರಿಗೊಳಿಸಿದ್ದಾರೆ. ಕಾಂಗ್ರೆಸ್ ಸರಕಾರದ ೫ ವರ್ಷಗಳ ಸಾಧನೆ ಹಾಗೂ ಅಭಿವೃದ್ಧಿ ಸಹಿಸದ ಬಿಜೆಪಿ ನಾಯಕರು ಮತ್ತೇ ಅಧಿಕಾರಕ್ಕಾಗಿ ಹಪಾಹಪಿಸುತ್ತಿರುವುದು ಹಾಸ್ಯಾಸ್ಪದ. ರಾಜ್ಯದ ಚುನಾವಣಾ ಸಮೀಕ್ಷೆಗಳು ಹೊರಹೊಮ್ಮಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವದು ಖಚಿತ. ಕ್ಷೇತ್ರದ ಅಭಿವೃದ್ಧಿಗೆ ಮತ್ತೊಮ್ಮೆ ನನ್ನನು ಆಶೀರ್ವಧಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿ.ಪಂ.ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ, ತಾ.ಪಂ.ಅಧ್ಯಕ್ಷ ಬಾಲಚಂದ್ರನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರಡ್ಡಿ, ಗ್ರಾ.ಪಂ.ಅಧ್ಯಕ್ಷ ಯಮನೂರಪ್ಪ ನಾಯಕ, ಮುಖಂಡರುಗಳಾದ ಹೆಚ್.ಎಲ್.ಹಿರೇಗೌಡ್ರ, ಪ್ರಸನ್ನ ಗಡಾದ, ರಾಜ್ಯ ಮಹಿಳಾ ಕಾಂಗ್ರೆಸ್ ಕಾಯದರ್ಶಿ ಕಿಶೋರಿ ಬೂದನೂರ, ಮುತ್ತುರಾಜ ಕುಷ್ಟಗಿ, ಬಾಳಪ್ಪ ಬಾರಕೇರ, ವೆಂಕಟೇಶ ಕಂಪಸಾಗರ, ರಾಮಣ್ಣ ಹದ್ದಿನ್, ಕೃಷ್ಣಾ ಇಟ್ಟಂಗಿ, ಅಮರೇಶ ಉಪಲಾಪೂರ, ಕುರುಗೋಡ ರವಿ, ರಾಮಣ್ಣ ಕಲ್ಲನವರ, ಚೆನ್ನಮ್ಮ ಹುನಗುಂದ, ಶಂಕರ್ ಬಿಸರಳ್ಳಿ, ವೀರನಗೌಡ ಪಾಟೀಲ್, ವೀರಭದ್ರಪ್ಪ ಗಂಜಿ, ಶಿವಕುಮಾರ ಚಳ್ಳಾರಿ, ಹನುಮಂತಪ್ಪ ಕಿಡದಾಳ, ಮುದಕಪ್ಪ, ವೀರಣ್ಣ ನರೇಗಲ್, ಕೌಶಲ್ ಛೋಪ್ರಾ, ಹಾಗೂ ಪಕ್ಷದ ವಕ್ತಾರ ಅಕ್ಬರ್ ಪಾಷಾ ಪಲ್ಟನ್ ಉಪಸ್ಥಿತರಿದ್ದರು.

Please follow and like us:
error