ರಾಘವೇಂದ್ರ ಹಿಟ್ನಾಳರ ಗೆಲುವು ಸಾಮಾನ್ಯ ಜನರ ಗೆಲುವು : ಬಾಲಚಂದ್ರನ್


ಕೊಪ್ಪಳ, ಎ. ೧೦: ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಸಾಮಾನ್ಯ ಜನರ ಪ್ರೀತಿಯ ರಾಘಣ್ಣ ಗೆದ್ದರೆ ಸಾಮಾನ್ಯ ಜನರು ಗೆದ್ದಹಾಗೆ ಎಂದು ತಾಲೂಕ ಪಂಚಾಯತ ಅಧ್ಯಕ್ಷ ಬಾಲಚಂದ್ರನ್ ಹೇಳಿದರು.
ಬಂಡಿಹರ್ಲಾಪೂರ ಜಿಲ್ಲಾ ಪಂಚಾಯತ ವ್ಯಾಪ್ತಿಯ ಹೊಸಬಂಡಿಹರ್ಲಾಪೂರದಲ್ಲಿ ಕಾಂಗ್ರೇಸ್ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೇಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಕೆ. ರಾಘವೇಂದ್ರ ಹಿಟ್ನಾಳ್ ರವರ ಪರವಾಗಿ ಮಾತನಾಡಿದ ಅವರು, ಅಲ್ಲಿ ಮುಖ್ಯಮಂತ್ರಿ ಸಿದ್ಧರಾಮ್ಯನವರ ಅಧಿಕಾರ ಅವಧಿಯ ೫ ವರ್ಷದಲ್ಲಿ ರಾಜ್ಯದ ಎಲ್ಲಾ ಶೋಷಿತ, ಬಡ ಜನರ ಪರವಾಗಿ ನೂರಾರು ಯೋಜನೆಗಳನ್ನು ಜಾರಿಗೆ ತಂದು ಕಷ್ಟ ನಿವಾರಿಸಿದಂತೆ ಕೊಪ್ಪಳ ಕ್ಷೇತ್ರದ ಎಲ್ಲಾ ವರ್ಗಗಳ ಸಾಮಾನ್ಯ ಜನರ ಹಿತ ಕಾಪಾಡಿದ್ದು ಶಾಸಕ ರಾಘಣ್ಣ. ಅವರನ್ನು ಅವರ ಸೇವೆ ಮತ್ತು ಅವಿರತ ಶ್ರಮವನ್ನು ನೋಡಿ ನಾವು ಅವರಿಗೆ ಮತ್ತೊಮ್ಮೆ ಮತ ನೀಡಬೇಕು. ಸಿದ್ಧರಾಮಯ್ಯನವರ ಸಹಕಾರದೊಂದಿಗೆ ಬಹದ್ದೂರಬಂಡಿ-ನವಕಲ್ ಏತ ನೀರಾವರಿ ಯೋಜನೆ, ಅಳವಂಡಿ ಬೆಟಗೇರಿ ಏತನೀರಾವರಿ ಯೋಜನೆ ಮೂಲಕ ನೀರಾವರಿ, ಕೆರೆ ತುಂಬಿಸುವ ಮೂಲಕ ಕುಡಿಯುವ ನೀರು, ವೈದ್ಯ ಕಾಲೇಜು, ಮಕ್ಕಳ ಆಸ್ಪತ್ರೆ, ಹೆರಿಗೆ ಆಸ್ಪತ್ರೆ, ೪೫೦ ಬೆಡ್ ಆಸ್ಪತ್ರೆ ಮೂಲಕ ಜನರ ಆರೋಗ್ಯ ರಕ್ಷಣೆ, ಶಾಲಾ ಕಾಲೇಜುಗಳನ್ನು ತಂದು ಶಿಕ್ಷಣಕ್ಕೆ ಶ್ರಮಿಸಿದ್ದು, ಅನೇಕ ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಅನೇಕ ಹಳ್ಳಿಗಳ ಸಂಪರ್ಕ ಸೇತುವೆಗಳಿಗೆ ಬ್ರಿಡ್ಜ ಕಂ ಬ್ಯಾರೇಜ್‌ಗಳು, ಹೀಗೆ ಅನೇಕ ಯೋಜನರಗಳ ಮೂಲಕ ಜನಸಾಮಾನ್ಯರ ಆಯ್ಕೆಯಾದ ರಾಘಣ್ಣ ಗೆದ್ದರೆ ಸಾಮಾನ್ಯರೇ ಗೆದ್ದ ಹಾಗೆ ಅಷ್ಟೊಂದು ಜನಪರವಾಗಿದ್ದಾರೆ ಎಂದರು. ಅದಕ್ಕಾಗಿ ಮೇ ೧೨ ರಂದು ನಡೆಯುವ ರಾಜ್ಯ ಸಾವ್ರರ್ತಿಕ ಚುನಾವಣೆಯಲ್ಲಿ ಕಾಂಗ್ರೇಸ್‌ಗೆ ಮತ ನೀಡಿ ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಮಾಜಿ ಜಿ.ಪಂ ಅಧ್ಯಕ್ಷ ಹೆಚ್. ಎಲ್. ಹಿರೇಗೌಡ್ರ, ಉದ್ಯಮಿ ಐಎಲ್‌ಸಿ ಚಂದ್ರಶೇಖರ, ಕಾಂಗ್ರೇಸ್ ಅಧ್ಯಕ್ಷ ಸುರೇಶ ಭೂಮರಡ್ಡಿ, ನವೋದಯ ವಿರುಪಣ್ಣ, ವೆಂಕಟೇಶ ಕಂಪಸಾಗರ, ಎಪಿಎಂಸಿ ಸದಸ್ಯ ವಿಶ್ವನಾಥ ರಾಜು, ಪ್ರಚಾರ ಸಮಿತಿ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ರೂಪ್ಲಾ ನಾಯ್ಕ, ತಾಪಂ. ಸದಸ್ಯ ಎಬ್ಬುಲಿಗೆಪ್ಪ, ಮಾಜಿ ಜಿ. ಪಂ. ಸದಸ್ಯ ಕೆ. ರಮೇಶ ಹಿಟ್ನಾಳ, ತಾಲೂಕ ಪಂಚಾಯತ್ ಮಾಜಿ ಅಧ್ಯಕ್ಷ ದೇವಪ್ಪ ಮೇಕಾಳಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ರೇಣುಕಮ್ಮ ಕಟಗಿ, ವೀರಭದ್ರಯ್ಯ ಭೂಸನೂರಮಠ, ಚನ್ನಕೃಷ್ಣ ಗೊಲ್ಲರ, ಮೋಹನ್, ದೊಡ್ಡಬಾಬು, ರೂಪ್ಲಾ ನಾಯ್ಕ, ಅಲ್ಲಾಸಾಬ್ ಡಾಕ್ಟರ್ ಇತರರು ಇದ್ದರು.

Please follow and like us:
error